ಮಾದರಿಯಾದ ನರೇಂದ್ರ ಮೋದಿ: ಶಾಂತಿ ಪ್ರಶಸ್ತಿಗೆ ತೆರಿಗೆ ವಿನಾಯಿತಿ ಬೇಡ ಎಂದ ಪ್ರಧಾನಿ!

ಪ್ರಧಾನಿ ನರೇಂದ್ರ ಮೋದಿ ತಾವು ಉಳಿದ ರಾಜಕಾರಣಿಗಳಿಗಿಂತ ಹೇಗೆ ವಿಭಿನ್ನ ಎಂಬುದನ್ನು ಇನ್ನೊಮ್ಮೆ ಸಾಬೀತು ಮಾಡಿದ್ದಾರೆ. 
ನರೇಂದ್ರ ಮೋದಿ
ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ತಾವು ಉಳಿದ ರಾಜಕಾರಣಿಗಳಿಗಿಂತ ಹೇಗೆ ವಿಭಿನ್ನ ಎಂಬುದನ್ನು ಇನ್ನೊಮ್ಮೆ ಸಾಬೀತು ಮಾಡಿದ್ದಾರೆ. ತಮಗೆ ದೊರಕಿದ ಸಿಯೋಲ್ ಶಾಂತಿ ಬಹುಮಾನದ ನಗದು ಹಣ 1.3 ಕೋಟಿ ರೂ. ಮೇಲೆ  ಆದಾಯ ತೆರಿಗೆ ವಿನಾಯಿನ್ನು ಪಡೆಯುವ ಅವಕಾಶವಿದ್ದರೂ ಅದನ್ನು ಉಪಯೋಗಿಸದೆ ತಾವೂ ಇತರೆ ಭಾರತೀಯ ಪ್ರಜೆಗಳಂತೆ ಸರ್ಕಾರಕ್ಕೆ ತೆರಿಗೆಯನ್ನು ಪಾವತಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ವರ್ಷ ಫೆಬ್ರವರಿಯಲ್ಲಿ ಕ್ಷಿಣ ಕೊರಿಯಾ ಸರ್ಕಾರ 2018ನೇ ಸಾಲಿನ ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಿತ್ತು ಈ ಪ್ರಶಸ್ತಿಯ ಭಾಗವಾಗಿ 1.3 ಕೋಟಿ ರೂ. ನಗದು ಹಣ ಸಹ ಮೋದಿಯವರಿಗೆ ಸಿಕ್ಕಿದ್ದು ಇದಕ್ಕೆ ಪ್ರಧಾನಿಗಳು ತೆರಿಗೆ ವಿನಾಯತಿ ಪಡೆಯುವ ಅವಕಾಶವನ್ನು ಕೇಂದ್ರ ಹಣಕಾಸು ಇಲಾಖೆ ಒದಗಿಸಿತ್ತು. ಆದರೆ ಮೋದಿ ಅವರು ಆಗಸ್ಟ್ 11, 2019 ರಂದು ಹಣಕಾಸು ಸಚಿವೆ ರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದು ದೇಶದ  ಇತರ ಎಲ್ಲ ತೆರಿಗೆದಾರರಂತೆ ನಾನೂ ಸಹ  ತೆರಿಗೆ ಪಾವತಿಸಲು ಬಯಸುತ್ತೇನೆ ಹಾಗಾಗಿ ನನಗೆ  ತೆರಿಗೆ ವಿನಾಯಿನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಸೆಂಟ್ರಲ್ ಬ್ಯೂರೋ ಆಫ್ ಡೈರೆಕ್ಟ್ ಟ್ಯಾಕ್ಸ್ (ಸಿಬಿಡಿಟಿ) 2019 ರ ಮಾರ್ಚ್ 6 ರಂದುಸಿಯೋಲ್ ಶಾಂತಿ ಪ್ರಶಸ್ತಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10(17ಎ)(ಐ) ಅಡಿ ವಿನಾಯಿತಿ ನೀಡಿತ್ತು.

ಆದರೆ ಪ್ರಧಾನಿಗಳ ಕೋರಿಕೆಯ ಹಿನ್ನೆಲೆಯಲ್ಲಿ ಆಗಸ್ಟ್ 14 ರಂದು ಆದೇಶದ ಮೂಲಕ, ಸಿಬಿಡಿಟಿ  ತನ್ನ ಹಿಂದಿನ ಆದೇಶವನ್ನು ಹಿಂಪಡೆದಿದೆ.ಆದಾಯ ತೆರಿಗೆ ಕಾಯ್ದೆಯಿಂದ ನೀಡಲ್ಪಟ್ಟ ಅಧಿಕಾರವನ್ನು ಚಲಾಯಿಸುವಾಗ, ಕೇಂದ್ರ ಸರ್ಕಾರವು 'ಸಿಯೋಲ್ ಶಾಂತಿ ಪ್ರಶಸ್ತಿ'ಗೆ ನೀಡಲಾದ ವಿನಾಯಿತಿಯನ್ನು ಹಿಂತೆಗೆದುಕೊಳ್ಳುತ್ತದೆ (ಮಾರ್ಚ್ 6 ರಂದು ಹೊರಡಿಸಲಾದ ಆದೇಶ) ಮತ್ತು ಈ ಆದೇಶವನ್ನು ಎಂದಿಗೂ ನೀಡಲಾಗಿಲ್ಲ ಎಂದು ಪರಿಗಣಿಸಲಾಗುತ್ತದೆ. ಪ್ರಶಸ್ತಿ ಸ್ವೀಕಾರದ ಜತೆಗಿನ ನಗದು ಮೊತ್ತವು ತೆರಿಗೆ ಉದ್ದೇಶಗಳಿಗಾಗಿ ಆದಾಯ ತೆರಿಗೆ ಕಾಯ್ದೆ, 1961 ಗೆ ಒಳಪಟ್ಟಿರುತ್ತದೆ "ಎಂದು ಸಿಬಿಡಿಟಿ ಆದೇಶ ಹೇಳುತ್ತದೆ.

"ಹಣಕಾಸು ಸಚಿವಾಲಯವು ಬಹುಮಾನದ ಹಣದಿಂದ ಆದಾಯ ತೆರಿಗೆಯನ್ನು ಮನ್ನಾ ಮಾಡುವ ಆದೇಶವನ್ನು ಜಾರಿಗೊಳಿಸಿದೆ ಎಂದು ನಾನು ತಿಳಿದುಕೊಂಡಿದ್ದೇನೆ. ಲೋಕಸಭಾ ಚುನಾವಣೆಗಳು ಮತ್ತು ಇತರ ಕೆಲಸದ ಒತ್ತಡದಿಂದಾಗಿ ನನಗೆ ಪತ್ರ ಬರೆಯಲಾಗಿರಲಿಲ್ಲ. ನೀವು ಈ ಬಹುಮಾನದ ಹಣಕ್ಕೆ ದೇಶದ ಇತರ ಕೋಟಿ ಸಂಖ್ಯೆಯ ತೆರಿಗೆ ಪಾವತಿದಾರರಿಗೆ ಅನ್ವಯವಾಗುವ ಅದೇ ಆದಾಯ ತೆರಿಗೆ ನಿಬಂಧನೆಗಳನ್ನು ಅನ್ವಯಿಸಬೇಕು ಎಂದು ನಾನು ವಿನಂತಿಸುತ್ತೇನೆ. ಆದಾಯ ತೆರಿಗೆಯಿಂದ ಬಂದ ಆದಾಯವು ರಾಷ್ಟ್ರ ನಿರ್ಮಾಣದ ಕಾರ್ಯಕ್ಕಾಗಿ  ಹೋಗುತ್ತದೆ. ಆದ್ದರಿಂದ, ತೆರಿಗೆ ವಿನಾಯಿತಿ ನೀಡುವ ಹಿಂದಿನ ಆದೇಶವನ್ನು ಮರುಪರಿಶೀಲಿಸಲು ಮತ್ತು ಅದನ್ನು ಹಿಂಪಡೆಯಲು ನಾನು ನಿಮ್ಮನ್ನು ವಿನಂತಿಸುತ್ತೇನೆ. " ಪ್ರಧಾನಿಗಳು ಹಣಕಾಸು ಸಚಿವರಿಗೆ ಬರೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com