ಆರ್ಟಿಕಲ್ 370 ರದ್ದು ಬೆಂಬಲಕ್ಕೆ ನಿಲ್ಲದ ಕಾಂಗ್ರೆಸ್ ವಿರುದ್ಧ ಹೂಡಾ ವಾಗ್ದಾಳಿ, ಬಿಜೆಪಿ ನಡೆಗೆ ಮೆಚ್ಚುಗೆ! 

ಹರ್ಯಾಣದ ಮಾಜಿ ಸಿಎಂ ಭುಪೇಂದರ್ ಸಿಂಗ್ ಹೂಡಾ ಸ್ವಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಆರ್ಟಿಕಲ್ 370 

Published: 18th August 2019 08:54 PM  |   Last Updated: 18th August 2019 08:54 PM   |  A+A-


Ex-Haryana CM Hooda

ಹರ್ಯಾಣದ ಮಾಜಿ ಸಿಎಂ ಭುಪೇಂದರ್ ಸಿಂಗ್ ಹೂಡಾ

Posted By : Srinivas Rao BV
Source : The New Indian Express

ರೋಹ್ಟಕ್: ಹರ್ಯಾಣದ ಮಾಜಿ ಸಿಎಂ ಭುಪೇಂದರ್ ಸಿಂಗ್ ಹೂಡಾ ಸ್ವಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಆರ್ಟಿಕಲ್ 370 ರದ್ದುಗೊಳಿಸಿದ್ದನ್ನು ಬೆಂಬಲಿಸದೇ ಇರುವುದು ತಪ್ಪು ಎಂದು ಹೇಳಿದ್ದಾರೆ. 

ವಿಧಾನಸಭಾ ಚುನಾವಣೆ ಎದುರಾಗಲಿರುವ ಹಿನ್ನೆಲೆಯಲ್ಲಿ ರಾಜ್ಯದ ರೋಹ್ಟಕ್ ನಲ್ಲಿ ಪರಿವರ್ತನ್ ಮಹಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ, ಕೇಂದ್ರ ಸರ್ಕಾರ ಒಳ್ಳೆಯದನ್ನು ಮಾಡಿದರೆ ಅದನ್ನು ಬೆಂಬಲಿಸುತ್ತೇನೆ. ಕೇಂದ್ರ ಸರ್ಕಾರ 370 ವಿಧಿ ರದ್ದುಗೊಳಿಸಿದ್ದನ್ನು ನನ್ನ ಜೊತೆಯಲ್ಲಿದ್ದ ಹಲವರು (ಕಾಂಗ್ರೆಸ್ ನಾಯಕರು) ವಿರೊಧಿಸಿದ್ದಾರೆ. ಕಾಂಗ್ರೆಸ್ ಪಕ್ಷ ಈ ಹಿಂದಿನಂತಿಲ್ಲ.  ದೇಶಭಕ್ತಿ ಹಾಗೂ ಸ್ವಾಭಿಮನದ ವಿಷಯದಲ್ಲಿ ನಾನು ಯಾರೊಂದಿಗೂ ರಾಜಿಮಾಡಿಕೊಳ್ಳುವುದಿಲ್ಲ ಎಂದು ಹೂಡಾ ಹೇಳಿದ್ದಾರೆ. 

ಹರ್ಯಾಣ ವಿಧಾನಸಭಾ ಚುನವಣೆ ಸದ್ಯದಲ್ಲೆ ನಡೆಯಲಿದ್ದು, ಹೂಡಾ ಕಾಂಗ್ರೆಸ್ ತೊರೆದು ಹೊಸ ಪಕ್ಷ ಸ್ಥಾಪಿಸುವ ಉದ್ದೇಶ ಹೊಂದಿದ್ದಾರೆ ಎಂಬ ಊಹಾಪೋಹಗಳಿವೆ, ಇದಕ್ಕೆ ಪೂರಕವೆಂಬಂತೆ ಹೂಡಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp