ಗೂಗಲ್‌ನಲ್ಲಿ 'ಭಿಕಾರಿ' ಟೈಪಿಸಿದಾಗ ಕಣ್ಮುಂದೆ ಬರುತ್ತೆ ಪಾಕ್ ಪಿಎಂ ಫೋಟೋ, ಇಮ್ರಾನ್ ಕಾಲೆಳೆದ ಟ್ವೀಟರಿಗರು!

ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿದ್ದು ಇನ್ನು ಪ್ರಧಾನಿ ಇಮ್ರಾನ್ ಖಾನ್ ಅನುದಾನ ನೀಡಿ ಅಂತಾ ಎಲ್ಲಾ ದೇಶಗಳ ಮುಂದೆ ಕೈಚಾಚುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗೂಗಲ್ ನಲ್ಲಿ ಬೆಗ್ಗರ್(ಭಿಕಾರಿ) ಎಂದು ಟೈಪ್ ಮಾಡಿದರೆ ಪಾಕ್...
ಇಮ್ರಾನ್ ಖಾನ್
ಇಮ್ರಾನ್ ಖಾನ್

ನವದೆಹಲಿ: ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿದ್ದು ಇನ್ನು ಪ್ರಧಾನಿ ಇಮ್ರಾನ್ ಖಾನ್ ಅನುದಾನ ನೀಡಿ ಅಂತಾ ಎಲ್ಲಾ ದೇಶಗಳ ಮುಂದೆ ಕೈಚಾಚುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗೂಗಲ್ ನಲ್ಲಿ ಬೆಗ್ಗರ್(ಭಿಕಾರಿ) ಎಂದು ಟೈಪ್ ಮಾಡಿದರೆ ಪಾಕ್ ಪಿಎಂ ಫೋಟೋ ಬರುತ್ತಿದ್ದು ಇದಕ್ಕೆ ಟ್ವೀಟರಿಗರು ಅಪಹಾಸ್ಯ ಮಾಡುತ್ತಿದ್ದಾರೆ.

ಗೂಗಲ್ ಇಮೇಜ್ ಸರ್ಚ್ ಎಂಜಿನ್ ನಲ್ಲಿ ಬೆಗ್ಗರ್ ಎಂದು ಟೈಪ್ ಮಾಡಿದಾಗ ಪಾಕ್ ಪ್ರಧಾನಿ ಇಮ್ರಾನ್ ಖಾನ್ ರ ಹಲವು ಫೋಟೋಗಳು ಕಾಣಸಿಗುತ್ತಿವೆ. ಇಮ್ರಾನ್ ಕೈಯಲ್ಲಿ ಹಳೆಯ ಪಾತ್ರೆ ಹಿಡಿದು ಭಿಕ್ಷೆ ಕೇಳುತ್ತಿರುವಂತೆ ಫೋಟೋಗಳಲ್ಲಿ ಕಾಣಿಸುತ್ತಿದೆ. ಈ ಫೋಟೋವನ್ನು ಶೇರ್ ಮಾಡುತ್ತಾ ಟ್ವೀಟರಿಗರು ಟ್ರೋಲ್ ಮಾಡುತ್ತಿದ್ದಾರೆ. 

ಇನ್ನು ಪುಲ್ವಾಮಾ ದಾಳಿ ಬಳಿಕ ವಿಶ್ವದಲ್ಲೇ ಅತಿ ಉತ್ತಮ ಟಾಯ್ಲೆಟ್ ಪೇಪರ್ ಯಾವುದು ಎಂದು ಗೂಗಲ್ ನಲ್ಲಿ ಸರ್ಜ್ ಮಾಡಿದಾಗ ಪಾಕಿಸ್ತಾನದ ಧ್ವಜ ಕಾಣಿಸುತ್ತಿತ್ತು. ಅದೇ ರೀತಿ ಈಡಿಯೆಟ್ ಎಂದು ಸರ್ಜ್ ಮಾಡಿದಾಗ ಅದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ರನ್ನು ತೋರಿಸುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com