ಬಿಜೆಪಿಯಲ್ಲಿದ್ದಾಗ ಪ್ರಧಾನಿ ಮೋದಿಯನ್ನು ಬೈದು, ಕಾಂಗ್ರೆಸ್‌ಗೆ ಸೇರಿದ ಮೇಲೆ ಹೊಗಳಿದ ಶತೃಘ್ನ, ಯೂಟರ್ನ್ ಹೊಡೆದಿದ್ದೇಕೆ?
ಬಾಲಿವುಡ್ ನಟ, ರಾಜಕಾರಣಿ ಶತೃಘ್ನ ಸಿನ್ಹಾ ಬಿಜೆಪಿ ಪಕ್ಷದಲ್ಲಿದ್ದಾಗ ವಿನಾಃಕಾರಣ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಅಲ್ಲದೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಅವರು ಇದೀಗ ದಿಢೀರ್ ಅಂತಾ ಯೂಟರ್ನ್...
Published: 18th August 2019 05:04 PM | Last Updated: 18th August 2019 05:04 PM | A+A A-

ನರೇಂದ್ರ ಮೋದಿ-ಶತೃಘ್ನ ಸಿನ್ಹಾ
ನವದೆಹಲಿ: ಬಾಲಿವುಡ್ ನಟ, ರಾಜಕಾರಣಿ ಶತೃಘ್ನ ಸಿನ್ಹಾ ಬಿಜೆಪಿ ಪಕ್ಷದಲ್ಲಿದ್ದಾಗ ವಿನಾಃಕಾರಣ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಅಲ್ಲದೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಅವರು ಇದೀಗ ದಿಢೀರ್ ಅಂತಾ ಯೂಟರ್ನ್ ಹೊಡೆದಿದ್ದು ಜ್ಞಾನೋದಯವಾದಂತೆ ಮೋದಿಯನ್ನು ಹೊಗಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಕೆಂಪುಕೋಟೆ ಮೇಲೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ವೇಳೆ ಮಾಡಿದ್ದ ಭಾಷಣಕ್ಕೆ ಶತೃಘ್ನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಅತ್ಯಂತ ಧೈರ್ಯಶಾಲಿ, ಉತ್ತಮ ಸಂಶೋಧನೆ ಮತ್ತು ಚಿಂತನೆಗೆ ಹಚ್ಚುವಂತಹದ್ದು, ದೇಶವು ಎದುರಿಸುತ್ತಿರುವ ಸಮಸ್ಯೆಗಳನ್ನು ಅದ್ಭುತವಾಗಿ ವಿವರಿಸಲಾಗಿದೆ ಎಂದು ಶತೃಘ್ನ ಟ್ವೀಟ್ ಮಾಡಿದ್ದಾರೆ.
Since I'm famous or infamous for calling a spade a spade, I must admit here, Hon'ble PM @narendermodi @PMOIndia that your speech from the #RedFort on 15th Aug’19 was extremely courageous, well researched & thought provoking. Superb delivery of the key problems facing the country.
— Shatrughan Sinha (@ShatruganSinha) August 18, 2019