ತ್ರಿಕೋನ ಪ್ರೇಮ ಹಾಗೂ 71 ಕುರಿಗಳ ಕಥೆ: ಉತ್ತರ ಪ್ರದೇಶದ ಪೊಲೀಸರಿಗೆ ಫಜೀತಿ! 

ಉತ್ತರ ಪ್ರದೇಶದಲ್ಲಿ ನಡೆದ ತ್ರಿಕೋನ ಪ್ರೇಮಕಥೆಯೊಂದು ಪೊಲೀಸರಿಗೆ ಫಜೀತಿ ತಂದೊಡ್ಡಿದೆ. 

Published: 18th August 2019 01:35 AM  |   Last Updated: 18th August 2019 01:36 AM   |  A+A-


Two men, a woman and 71 sheep: UP love triangle leaves cops stumped

ತ್ರಿಕೋನ ಪ್ರೇಮ ಹಾಗೂ 71 ಕುರಿಗಳ ಕಥೆ: ಉತ್ತರ ಪ್ರದೇಶದ ಪೊಲೀಸರಿಗೆ ಫಜೀತಿ!

Posted By : Srinivas Rao BV
Source : The New Indian Express

ಗೋರಖ್ ಪುರ: ಉತ್ತರ ಪ್ರದೇಶದಲ್ಲಿ ನಡೆದ ತ್ರಿಕೋನ ಪ್ರೇಮಕಥೆಯೊಂದು ಪೊಲೀಸರಿಗೆ ಫಜೀತಿ ತಂದೊಡ್ಡಿದೆ. 

ಗೋರಖ್ ಪುರದ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು, ವಿವಾಹಿತ ಮಹಿಳೆ ಪತಿಯನ್ನು ತೊರೆದು ಪ್ರಿಯಕರನ ಜೊತೆ ವಾಸ ಮಾಡಲು ಪ್ರಾರಂಭಿಸಿದ್ದಾಳೆ. ಈ ಪ್ರಕರಣ ಗ್ರಾಮ ಪಂಚಾಯತ್ ಮೆಟ್ಟಿಲೇರಿದ್ದು, ವಿವಾಹಿತ ಮಹಿಳೆಯನ್ನು ಬಿಡಲು ಒಲ್ಲದ ಪ್ರಿಯಕರನಿಗೆ ಎರಡು ಆಯ್ಕೆಗಳನ್ನು ಮುಂದಿಟ್ಟಿತ್ತು. ಒಂದು ಮಹಿಳೆಯ ಜೊತೆ ವಾಸಿಸುವುದು ಅಥವಾ ಆತನ ಬಳಿ ಇದ್ದ 71 ಕುರಿಗಳನ್ನು ಮಹಿಳೆಯ ಪತಿಗೆ ಒಪ್ಪಿಸುವುದು.

ಗ್ರಾಮ ಪಂಚಾಯತ್ ನೀಡಿದ್ದ ಆಯ್ಕೆಯ ಪೈಕಿ ಆ ವ್ಯಕ್ತಿ ತಾನು ಮಹಿಳೆಯ ಜೊತೆಯಲ್ಲೇ ಇರುತ್ತೇನೆಂದೂ ತನ್ನ ಬಳಿ ಇದ್ದ 142 ಕುರಿಗಳ ಪೈಕಿ 71 ಕುರಿಗಳನ್ನು ನೀಡುವುದಾಗಿಯೂ ತಿಳಿಸಿದ್ದಾನೆ. ಇದಕ್ಕೆ ಮಹಿಳೆಯೂ ಸಮ್ಮತಿಸಿದ್ದಾಳೆ. ಈ ನಡುವೆ ಆರೋಪಿಯ ತಂದೆ ಬಂದು ತನ್ನ ಮಗ ಕುರಿ ಹಿಂಡನ್ನು ಬೇರೆಯವರಿಗೆ ನೀಡಲು ಸಾಧ್ಯವಿಲ್ಲ ಎಂದು ತಕರಾರು ಮಾಡಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. 

ಇದೇ ವೇಳೆ ಪ್ರೇಮಿಯ ತಂದೆ ಗ್ರಾಮ ಪಂಚಾಯತ್ ನ್ನೇ ದೂರಲು ಪ್ರಾರಂಭಿಸಿದ್ದು, ಓರ್ವ ವಿವಾಹಿತ ಮಹಿಳೆಯನ್ನು ಮತ್ತೋರ್ವ ಪುರುಷನ ಜೊತೆ ವಾಸಿಸುವುದಕ್ಕೆ ಅವಕಾಶ ಮಾಡಿ ಗ್ರಾಮ ಪಂಚಾಯತ್ ಕಾನೂನು ಉಲ್ಲಂಘನೆ ಮಾಡಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿಯ ಸದಸ್ಯರಿಗೂ ಪೊಲೀಸರಿಗೂ ಈ ಪ್ರಕರನ ಕಗ್ಗಂಟಾಗಿ ಉಳಿದಿದೆ. 
 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp