ಗಡಿ ಬಿಕ್ಕಟ್ಟಿನ ನಡುವೆಯೂ ಬಿಡದ ಅನುಬಂಧ: ಕರಾಚಿಯಿಂದ ಬಂದು ಗುಜರಾತಿನಲ್ಲಿ ಹಸೆಮಣೆ ಏರಿದ ಜೋಡಿ!

370 ನೇ ವಿಧಿ ರದ್ದುಪಡಿಸಿದ ಬಳಿಕ  ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಈ ನಡುವೆ ಕರಾಚಿಯ ಹಿಂದೂ ಯುವಜೋಡಿಯೊಂದು ಗುಜರಾತ್‌ಗೆ ಆಗಮಿಸಿ ವಿವಾಹವಾಗಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅಹಮದಾಬಾದ್: 370 ನೇ ವಿಧಿ ರದ್ದುಪಡಿಸಿದ ಬಳಿಕ  ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಈ ನಡುವೆ ಕರಾಚಿಯ ಹಿಂದೂ ಯುವಜೋಡಿಯೊಂದು ಗುಜರಾತ್‌ಗೆ ಆಗಮಿಸಿ ವಿವಾಹವಾಗಿದ್ದಾರೆ.

ರಾಜ್‌ಕೋಟ್‌ನಲ್ಲಿ ನಡೆದ ಮದುವೆಯನ್ನು ರಾಜ್‌ಕೋಟ್ ಮಹೇಶ್ವರಿ ಸಮಾಜವು ಆಯೋಜಿಸಿತ್ತು. ಯುವಜೋಡಿಯು ಮಹೇಶ್ವರಿ ಸಮುದಾಯಕ್ಕೆ ಸೇರಿದವರಾಗಿದ್ದು ಶನಿವಾರ ಈ ವಿವಾಹವು ನೆರವೇರಿದೆ.

ರಾಜ್‌ಕೋಟ್ ಮಹೇಶ್ವರಿ ಸಮಾಜದ ಯುವ ಅಧ್ಯಕ್ಷ ಭವೇಶ್ ಮಹೇಶ್ವರಿ ಮಾತನಾಡಿ, ಪಾಕಿಸ್ತಾನದ 90 ಕ್ಕೂ ಹೆಚ್ಚು ಜೋಡಿಗಳಿಗೆ ಹೆಚ್ಚಾಗಿ ಕರಾಚಿ ಮೂಲದವರಿಗೆ ವಿವಾಹವಾಗಿ ಭಾರತದಲ್ಲಿ  ನೆಲೆಸಲು ಈ ಸಂಸ್ಥೆ ಸಹಾಯ ಮಾಡಿದೆ ಎಂದಿದ್ದಾರೆ. ಶನಿವಾರ ವಿವಾಹವಾದ ದಂಪತಿಗಳು ಭಾರತದಲ್ಲಿ ಉಳಿಯಲು ಯೋಜಿಸಿದ್ದಾರೆ ಎಂದು ಅವರು ಹೇಳಿದರು

"ಕಳೆದ ವರ್ಷ ನಾವು ಪಾಕಿಸ್ತಾನದಿಂದ ಬಂದ 15 ಜೋಡಿಗಳ ವಿವಾಹಗಳನ್ನು ಆಯೋಜಿಸಿದ್ದೆವು. ಈ ವರ್ಷ ಎರಡು ಜೋಡಿ ಆಗಮಿಸಿದೆ.ಹೆಚ್ಚಿನ ವೇಳೆ ವಧೂ ವರರಿಬ್ಬರೂ ಪಾಕಿಸ್ತಾನದವರೇ ಆಗಿರುತ್ತಾರೆ ಎಂದು ಅವರು ವಿವರಿಸಿದರು.

"ನಮ್ಮ ಸಮುದಾಯದ ಜನರು ಆ ದೇಶದಲ್ಲಿ ಕಿರುಕುಳಕ್ಕೊಳಗಾಗಿದ್ದಾರೆ. ಹಿಂದೂಗಳು ಪಾಕಿಸ್ತಾನದಲ್ಲಿ ವಾಸಿಸಲು ಕಷ್ಟಪಡುತ್ತಾರೆ. ಅವರು ಹಣ ಸಂಪಾದಿಸುತ್ತಾರೆ ಆದರೆ ಅವರ ಜೀವನವು ಯಾವಾಗಲೂ ಭಯದಿಂದ ಕೂಡಿರುತ್ತದೆ.ಪಾಕಿಸ್ತಾನದಲ್ಲಿ, ಅವರ ವಿವಾಹವಾಗುವುದು ವಿರಳ. . ಇಲ್ಲಿ ನಾವು ಅದ್ದೂರಿ ವಿವಾಹವನ್ನು ಏರ್ಪಡಿಸುತ್ತೇವೆ."

ಕರಾಚಿಯಲ್ಲಿ ಸುಮಾರು 3,000 ಮಹೇಶ್ವರಿ ಕುಟುಂಬಗಳು ವಾಸಿಸುತ್ತಿವೆ ಎಂದು ಅವರು ಹೇಳಿದರು."ಅವರಲ್ಲಿ ಹೆಚ್ಚಿನವರು ಭಾರತಕ್ಕೆ ದೀರ್ಘಾವಧಿಯ ವೀಸಾವನ್ನು ಪಡೆದುಕೊಳ್ಳುತ್ತಾರೆ ಮತ್ತು ಇಲ್ಲಿ ವಾಸಿಸಲು ಭಾರತಕ್ಕೆ ಬಂದ ನಂತರ ದನ್ನು ನವೀಕರಿಸುತ್ತಾರೆ"

ವಿಭಜನೆಯ ಸಮಯದಲ್ಲಿ ಪಾಕಿಸ್ತಾನದಲ್ಲಿ ಉಳಿದುಕೊಂಡಿರುವ ಸಮುದಾಯದ ಬಹಳಷ್ಟು ಜನರು ಭಾರತದಲ್ಲಿ ನೆಲೆಸಲು ಬಯಸುತ್ತಾರೆ ಎಂದು ಕರಾಚಿಯಿಂದ ಬಂದ ಮದುಮಗ ಅನಿಲ್ ಮಹೇಶ್ವರಿ ಹೇಳಿದರು.ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಬಿಗಡಾಯಿಸಿರುವ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಕೇಳಿದಾಗ, ಅವರು ಭಾರತ ಸರ್ಕಾರದ ನಿರ್ಧಾರವನ್ನು ಬೆಂಬಲಿಸುವುದಾಗಿ ನುಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com