ಎನ್ಆರ್ ಸಿ ಎಫೆಕ್ಟ್: ಪೌರತ್ವ ಪತ್ರ ನೀಡಲು ವಿಫಲವಾದ ವರ, ಮದುವೆ ರದ್ದು

ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ ಸಿ) ಇನ್ನೂ ಪ್ರಗತಿಯಲ್ಲಿದ್ದು, ಇದು ಅಲ್ಲಿನ ಕುಟುಂಬಗಳನ್ನು ಅಸುರಕ್ಷಿತರನ್ನಾಗಿ ಮಾತ್ರ ಮಾಡುತ್ತಿಲ್ಲ. ಕುಟುಂಬಗಳ ಭವಿಷ್ಯವನ್ನು ಹಾಳು ಮಾಡುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗುವಾಹತಿ: ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ ಸಿ) ಇನ್ನೂ ಪ್ರಗತಿಯಲ್ಲಿದ್ದು, ಇದು ಅಲ್ಲಿನ ಕುಟುಂಬಗಳನ್ನು ಅಸುರಕ್ಷಿತರನ್ನಾಗಿ ಮಾತ್ರ ಮಾಡುತ್ತಿಲ್ಲ. ಕುಟುಂಬಗಳ ಭವಿಷ್ಯವನ್ನು ಹಾಳು ಮಾಡುತ್ತಿದೆ.

ಎನ್ಆರ್ ಸಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ಭಾವಿ ಪತಿಯೊಂದಿಗೆ ವಾಗ್ವಾದ ನಡೆಸಿ, ಮದುವೆಯನ್ನೇ ಮುರಿದುಕೊಂಡಿದ್ದಾರೆ.

ದಕ್ಷಿಣ ಆಸ್ಸಾಂನ ಸಿಲ್ಚರ್ ನಲ್ಲಿ ಈ ಘಟನೆ ನಡೆದಿದ್ದು, ಕುತುಬ್ ಉದ್ದೀನ್ ಬಾರ್ಬುಯಾ ಅವರು ತಮ್ಮ ಮಗಳು ರೆಹನಾ(ಹೆಸರು ಬದಲಿಸಲಾಗಿದೆ) ಅವರ ಮದುವೆಯನ್ನು ದಿಲ್ವರ್ ಹುಸ್ಸೇನ್ ಲಸ್ಕರ್ ಜತೆ ನಿಶ್ಚಯ ಮಾಡಿದ್ದರು. ಆದರೆ ಲಸ್ಕರ್ ಪೌರತ್ವ ನೋಂದಣಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡುವುಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಕೊನೆಗಳಿಗೆಯಲ್ಲಿ ಮದುವೆ ರದ್ದಾಗಿದೆ.

ವರ ಅಕ್ರಮ ವಲಸಿಗ ಅಲ್ಲ ಎಂಬುದನ್ನು ಸಾಬೀತುಪಡಿಸಲು ಎನ್ಆರ್ ಸಿ ಪತ್ರಗಳನ್ನು ನೀಡಿದರ ಮಾತ್ರ ಮದುವೆ ಒಪ್ಪಿಕೊಳ್ಳುವುದಾಗಿ ಆಗಸ್ಟ್ 15ರಂದು ರೆಹನಾ ಸ್ಪಷ್ಟಪಡಿಸಿದ್ದರು. ಬಳಿಕ ಆಗಸ್ಟ್ 16ರಂದು ದಿಲ್ವಾರ್ ಕುಟಂಬ ರೆಹನಾ ಮನೆಗೆ ತೆರಳಿದ ಅವರ ಮನವೊಲಿಸುವ ಯತ್ನ ಮಾಡಿದೆ. ಆದರೆ ಅದು ಸಾಧ್ಯವಾಗಿಲ್ಲ. ರೆಹನಾ ಕುಟುಂಬ ವರನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ತನ್ನನ್ನು ಅಪಹರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com