'ಪ್ರವಾಹದ ಫೋಟೋ ನೋಡಿದಾಗ ಇದು ನನ್ನ ಪತ್ನಿಯ ಅಥವಾ ನನ್ನ ಮಗಳ ಜೊತೆಯೂ ಸಂಭವಿಸಬಹುದು ಎನಿಸಿತು'

ಬಾಲಿವುಡ್ ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಅವರು ಅಸ್ಸಾಂ ಪ್ರವಾಹಕ್ಕೆ 2 ಕೋಟಿ ರೂ. ಸಹಾಯಧನ ನೀಡಿದ್ದಾರೆ, ಈ ಸಂಬಂಧ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಮನ ಕರಗುವ ಉತ್ತರ ನೀಡಿದ್ದಾರೆ.

Published: 20th August 2019 01:42 PM  |   Last Updated: 20th August 2019 01:42 PM   |  A+A-


File Image

ಸಂಗ್ರಹ ಚಿತ್ರ

Posted By : Shilpa D
Source : Online Desk
ಮುಂಬಯಿ: ಬಾಲಿವುಡ್ ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಅವರು ಅಸ್ಸಾಂ ಪ್ರವಾಹಕ್ಕೆ 2 ಕೋಟಿ ರೂ. ಸಹಾಯಧನ ನೀಡಿದ್ದಾರೆ, ಈ ಸಂಬಂಧ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಮನ ಕರಗುವ ಉತ್ತರ ನೀಡಿದ್ದಾರೆ. ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಅಸ್ಸಾಂಗೆ ಅಕ್ಷಯ್ ಕುಮಾರ್ ಅವರು ಪ್ರವಾಹ ಪೀಡಿತ ಜನರಿಗೆ ಮತ್ತು ಕಾಜಿರಂಗ ಉದ್ಯಾನವನಕ್ಕೆ ತಲಾ 1 ಕೋಟಿ ರೂ.ಯಂತೆ ಒಟ್ಟು 2 ಕೋಟಿ ರೂ. ಸಹಾಯ ಧನವನ್ನು ನೀಡಿದ್ದರು. ಈ ಬಗ್ಗೆ ಅವರನ್ನು ಪ್ರಶ್ನಿಸಿದ್ದಾಗ, “ದೇವರು ನನಗೆ ಸಾಕಷ್ಟು ಹಣವನ್ನು ನೀಡಿದ್ದಾನೆ. ನಾನು ಆ ಹಣವನ್ನು ಎಲ್ಲಿ ತೆಗೆದುಕೊಂಡು ಹೋಗಲಿ” ಎಂದು ಹೇಳಿದ್ದಾರೆ. ಅಸ್ಸಾಂ ಪ್ರವಾಹದ ಫೋಟೋಗಳನ್ನು ನೋಡಿ ನನಗೆ ತುಂಬಾ ದುಃಖ ಆಗುತ್ತಿತ್ತು. ಹಾಗಾಗಿ ನಾನು ಬೇರೆ ಏನೂ ಯೋಚಿಸದೇ ಹಣವನ್ನು ದಾನ ಮಾಡಿದೆ, ಅಲ್ಲದೆ ತಾಯಿಯೊಬ್ಬರು ಮಕ್ಕಳನ್ನು ಭುಜದ ಮೇಲೆ ಎತ್ತಿಕೊಂಡು ಪ್ರವಾಹದ ನೀರಿನಲ್ಲಿ ಹೋಗುತ್ತಿರುವ ಫೋಟೋ ನೋಡಿ ನನ್ನ ಮನಸ್ಸಿಗೆ ತುಂಬಾ ಪ್ರಭಾವ ಬೀರಿತ್ತು. ಅವರ ಮುಖದಲ್ಲಿ ಯಾವುದೇ ದುಃಖ ಅಥವಾ ಒತ್ತಡ ಕಾಣಿಸಲಿಲ್ಲ. ನಾನು ಪ್ರವಾಹದ ಫೋಟೋಗಳನ್ನು ನೋಡಿದಾಗ ಇದು ನನ್ನ ಪತ್ನಿಯ ಜೊತೆ ಅಥವಾ ನನ್ನ ಮಗಳ ಜೊತೆನೂ ಸಂಭವಿಸಬಹುದು ಎಂದು ಅನಿಸಿತ್ತು. ಈ ರೀತಿಯ ಫೋಟೋಗಳನ್ನು ನೋಡಿದರೆ ನನ್ನ ಮನಸ್ಸು ಚುಚ್ಚುತ್ತದೆ. ಹಾಗಾಗಿ ನಾನು ಸಹಾಯಧನ ನೀಡಿದೆ ಎಂದು ಅಕ್ಷಯ್ ಹೇಳಿದ್ದಾರೆ. ಬಳಿಕ ಮಾತನಾಡಿದ ಅವರು, ನಾನು ಇದೇ ರೀತಿಯ ಪ್ರಾಣಿಗಳ ಫೋಟೋವನ್ನು ಕೂಡ ನೋಡಿದೆ. ದೇವರು ನನಗೆ ಸಾಕಷ್ಟು ಹಣವನ್ನು ನೀಡಿದ್ದಾರೆ. ನಾನು ಹಿಂದೆ ಮುಂದೆ ಯೋಚಿಸದೇ ಅಸ್ಸಾಂ ಪ್ರವಾಹಕ್ಕಾಗಿ ಹಣವನ್ನು ನೀಡಿದೆ ಎಂದು ಕಿಲಾಡಿ ತಿಳಿಸಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp