ಮೂಲ ಮಿಗ್ -21 ಯುದ್ಧ ವಿಮಾನ ಡಿಸೆಂಬರ್‌ನಲ್ಲಿ ಹಂತ-ಹಂತವಾಗಿ ನಿವೃತ್ತಿ

ರಷ್ಯಾ ಮೂಲದ ಮಿಗ್ -21 ಯುದ್ಧ ವಿಮಾನದ  ಮೇಲ್ದರ್ಜೆಗೆ ಏರಿಸಲಾಗದಿರುವ ಆವೃತ್ತಿಯನ್ನು ಈ ವರ್ಷದ ಡಿಸೆಂಬರ್ ನಲ್ಲಿ ಹಂತ-ಹಂತವಾಗಿ ನಿವೃತ್ತಿಗೊಳಿಸಲಾಗುವುದು
mig-21
mig-21

ನವದೆಹಲಿ: ರಷ್ಯಾ ಮೂಲದ ಮಿಗ್ -21 ಯುದ್ಧ ವಿಮಾನದ  ಮೇಲ್ದರ್ಜೆಗೆ ಏರಿಸಲಾಗದಿರುವ ಆವೃತ್ತಿಯನ್ನು ಈ ವರ್ಷದ ಡಿಸೆಂಬರ್ ನಲ್ಲಿಹಂತ-ಹಂತವಾಗಿ ನಿವೃತ್ತಿಗೊಳಿಸಲಾಗುವುದು ಭಾರತೀಯ ವಾಯುಪಡೆ (ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಎಂದು ಮಂಗಳವಾರ ಹೇಳಿದ್ದಾರೆ.

'ಮಿಗ್ 21 ಎಮ್ಎಫ್ ಆವೃತ್ತಿ 44 ವರ್ಷಗಳನ್ನು ಪೂರ್ಣಗೊಳಿಸಿದೆ. ಇದನ್ನು ಡಿಸೆಂಬರ್ ವೇಳೆಗೆ  ಹಂತಹಂತವಾಗಿ ಕೈಬಿಡಲಾಗುವುದು. ಸೆಪ್ಟೆಂಬರ್ ನಲ್ಲಿ ಈ ವಿಮಾನದಲ್ಲಿ ಕೊನೆಯ ಹಾರಾಟ ನಡೆಸುತ್ತೇನೆ.' ಎಂದು ಧನೋವಾ ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.  ಮಿಗ್-21 ಯುದ್ಧ ವಿಮಾನ ನಾಲ್ಕು ದಶಕಗಳಿಂದ ಸೇವೆಯಲ್ಲಿರುವುದಕ್ಕೆ ಧನೋವಾ ಅವರು ಹಿಂದೂಸ್ತಾನ್ ವಿಮಾನ ಕಾರ್ಖಾನೆ (ಎಚ್;ಎಎಲ್) ಅನ್ನು ಶ್ಲಾಘಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com