ನೆಹರು ಶ್ರೇಷ್ಠ ವ್ಯಕ್ತಿ, ಜೆಎನ್ ಯುಗೆ ಮರುನಾಮಕರಣ ಬಯಸಿಲ್ಲ: ಬಿಜೆಪಿ ಸಂಸದ

ನಾನ್ಯಾಕೆ ಜೆಎನ್ ಯುಗೆ ಮರುನಾಮಕರಣ ಬಯಸಲಿ? ನಾನು ಮೂರ್ಖನಲ್ಲ ಎಂದು ಬಿಜೆಪಿ ಸಂಸದ ಹಂಸ್ ರಾಜ್ ಹಂಸ್ ಹೇಳಿದ್ದಾರೆ. 

Published: 20th August 2019 01:19 AM  |   Last Updated: 20th August 2019 01:20 AM   |  A+A-


BJP MP Hans Raj Hans

ಬಿಜೆಪಿ ಸಂಸದ

Posted By : Srinivas Rao BV
Source : The New Indian Express

ನವದೆಹಲಿ: ನಾನ್ಯಾಕೆ ಜೆಎನ್ ಯುಗೆ ಮರುನಾಮಕರಣ ಬಯಸಲಿ? ನಾನು ಮೂರ್ಖನಲ್ಲ ಎಂದು ಬಿಜೆಪಿ ಸಂಸದ ಹಂಸ್ ರಾಜ್ ಹಂಸ್ ಹೇಳಿದ್ದಾರೆ. 

ನೆಹರು ಅವರಂತಹ ಶ್ರೇಷ್ಠ ವ್ಯಕ್ತಿಯ ಹೆಸರನ್ನು ಯಾಕೆ ನಾನು ಉಲ್ಲೇಖಿಸುತ್ತೇನೆ? ಅವರು ನಮ್ಮ ಪ್ರಥಮ ಪ್ರಧಾನಿಗಳು ಎಂದು ವಾಯುವ್ಯ ದೆಹಲಿಯ ಸಂಸದ ಅಚ್ಚರಿಯ ಹೇಳಿಕೆ ನೀಡಿದ್ದಾರೆ. 

ಜೆಎನ್ ಯು ನಲ್ಲಿ ನಡೆದ ಎಬಿವಿಪಿ ಕಾರ್ಯಕ್ರಮದಲ್ಲಿಆ.17 ರಂದು ಭಾಗವಹಿಸಿದ್ದ ಹಂಸ್ ರಾಜ್ ಹಂಸ್ ಅವರು ಜೆಎನ್ ಯು ನ್ನು ಮೋದಿ ನರೇಂದ್ರ ಯೂನಿವರ್ಸಿಟಿ (ಎಂಎನ್ ಯು) ಎಂದು ಬದಲಾವಣೆ ಮಾಡಬೇಕೆಂದು ಹೇಳಿದ್ದು ವರದಿಯಾಗಿತ್ತು. ಈ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಂಸ್ ರಾಜ್ ಹಂಸ್,   ವರದಿಗಳನ್ನು ನೋಡಿ ಆಘಾತವಾಯಿತು. 

ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದಾಗ, ಹಾಸ್ಯ ಪ್ರಸಂಗ ನಡೆಯಿತು. ವಿದ್ಯಾರ್ಥಿಯೊಬ್ಬ ನನಗೆ ಜೆಎನ್ ಯುವಿನ ವಿಸ್ತೃತ ರೂಪ ಏನು ಗೊತ್ತೇ? ಎಂದು ಕೇಳಿದ, ನನಗೆ ಉತ್ತರ ಗೊತ್ತಿದ್ದರೂ ಆತನನ್ನೇ ಹೇಳುವಂತೆ ಕೇಳಿದೆ. ಜವಹಾರ್ ಲಾಲ್ ನೆಹರು ವಿಶ್ವವಿದ್ಯಾನಿಲಯ, ನಮ್ಮ ಹಿರೋ ನೆಹರು ಅವರ ಹೆಸರು ಎಂಬ ಉತ್ತರ ಬಂದಿತು. ಅದಕ್ಕೆ ನಾನು ನನ್ನ ಹಿರೋ ಎಂಎನ್ ಯು (ಮೋದಿ ನರೇಂದ್ರ ವಿಶ್ವವಿದ್ಯಾನಿಲಯ) ಎಂದು ಹೇಳಿದ್ದಾಗಿ ಬಿಜೆಪಿ ಸಂಸದ ಸ್ಪಷ್ಟನೆ ನೀಡಿದ್ದಾರೆ.
 

Stay up to date on all the latest ರಾಷ್ಟ್ರೀಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp