ಪಾಕ್ ನಿಂದ ಮತ್ತೆ ಪುಂಡಾಟ: ಪೂಂಚ್‌ನ ಎಲ್‌ಒಸಿ ಸಮೀಪದ ಹಳ್ಳಿಗಳ ಮೇಲೆ ಗುಂಡಿನ ದಾಳಿ

ಭಾರತದ ಗಡಿಗುಂಟ ಪಾಕ್ ಸೇನೆ ಮತ್ತೆ ತನ್ನ ಪುಂಡಾಟ ಮುಂದುವರಿಸಿದೆ.ಪಾಕಿಸ್ತಾನ ಸೇನೆಯು ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಸೇನಾಪಡೆ ಪೋಸ್ಟ್ ಗಳು ಹಾಗೂ ಹಳ್ಳಿಗಳನ್ನೇ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದೆ. 
ಸಂಗ್ರಹ ಚಿತ್ರ

ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಗಡಿಯುದ್ದಕ್ಕೂ ಗುಂಡಿನ ದಾಳಿ ನಡೆದಿದ್ದು ಸುಮಾರು 11 ಗಂಟೆಗೆ ಈ ದಾಳಿ ಪ್ರಾರಂಭವಾಗಿದೆ. ಇದಕ್ಕೆ ಪ್ರತಿರೋಧವಾಗಿ ಭಾರತೀಯ ಸೇನೆ ಸಹ ಗುಂಡು ಹಾರಿಸಿ ಪಾಕ್ ಸೈನಿಕರ ವಿರುದ್ಧ ಹೋರಾಡುತ್ತಿರುವುದಾಗಿ ಸೇನಾ ವಕ್ತಾರರು ಹೇಳಿದ್ದಾರೆ.

ಇತ್ತೀಚಿನ ವರದಿ ಬಂದಾಗ ಉಭಯ ರಾಷ್ಟ್ರಗಳ ನಡುವೆ ಗಡಿಯಾಚೆ ಗುಂಡಿನ ದಾಳಿ ನಡೆಯುತ್ತಿದೆ ಎಂದು ಅವರು ಹೇಳಿದರು. ಆದಾಗ್ಯೂ, ಪಾಕಿಸ್ತಾನದ ಗುಂಡಿನ ದಾಳಿಯಿಂದ ಯಾವುದೇ ಜೀವಹಾನಿಯಾಗಿಲ್ಲ.

ಕಳೆದ ವಾರ,ಪೂಂಚ್ ಜಿಲ್ಲೆ ಸಮೀಪದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನಲ್ಲಿ ಪಾಕಿಸ್ತಾನ ಸೇನೆಯು ಗುಂಡಿನ ದಾಳಿ ನಡೆದಿದ್ದು ಆ ವೇಳೆ ಓರ್ವ ಭಾರತೀಯ ಯೋಧ ಹುತಾತ್ಮನಾಗಿದ್ದನು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com