ಅಭಿನಂದನ್ ಬಂಧನದ ಹಿಂದಿದ್ದ ಪಾಕಿಸ್ತಾನದ ಕಮಾಂಡೋ ಹತ್ಯೆ!

ಬಾಲಾಕೋಟ್ ನಲ್ಲಿ ಭಾರತೀಯ ವಾಯುಪಡೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬಳಿಕ ಯೋಧ ಅಭಿನಂದನ್ ನ್ನು ವಶಕ್ಕೆ ಪಡೆಯುವುದರ ಹಿಂದಿದ್ದ ಪಾಕಿಸ್ತಾನದ ಕಮಾಂಡೋ ಹತ್ಯೆಯಾಗಿದ್ದಾನೆ.

Published: 20th August 2019 07:46 PM  |   Last Updated: 20th August 2019 07:46 PM   |  A+A-


Pak commando behind capture of Abhinandan killed

ಅಭಿನಂದನ್ ಬಂಧನದ ಹಿಂದಿದ್ದ ಪಾಕಿಸ್ತಾನದ ಕಮಾಂಡೋ ಹತ್ಯೆ!

Posted By : Srinivas Rao BV
Source : UNI

ಶ್ರೀನಗರ: ಬಾಲಾಕೋಟ್ ನಲ್ಲಿ ಭಾರತೀಯ ವಾಯುಪಡೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬಳಿಕ ಯೋಧ ಅಭಿನಂದನ್ ನ್ನು ವಶಕ್ಕೆ ಪಡೆಯುವುದರ ಹಿಂದಿದ್ದ ಪಾಕಿಸ್ತಾನದ ಕಮಾಂಡೋ ಹತ್ಯೆಯಾಗಿದ್ದಾನೆ.

ಭಾರತೀಯ ಪಡೆ ಗಡಿ ನಿಯಂತ್ರಣ ರೇಖೆ ಬಳಿ ನಡೆಸಿದ ಗುಂಡಿನ ಚಕಮಕಿಯಲ್ಲಿ ಗುಂಡೇಟಿಗೆ ಪಾಕಿಸ್ತಾನದ ಕಮಾಂಡೋ ಬಲಿಯಾಗಿದ್ದಾನೆ. ಈತ ಅಭಿನಂದನ್ ಬಂಧನದ ಹಿಂದಿದ್ದ ವ್ಯಕ್ತಿಯಾಗಿದ್ದಾನೆ.

ಪಾಕಿಸ್ತಾನದ ಸೇನೆಯ ವಿಶೇಷ ಸೇವಾ ಗುಂಪಿನಲ್ಲಿ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಹ್ಮದ್ ಖಾನ್ ಅತಿಕ್ರಮಣಕಾರರಿಗೆ ಸಹಕರಿಸುತ್ತಿದ್ದಾಗ ನಕ್ಯಾಲ್ ಸೆಕ್ಟರ್ ನಲ್ಲಿ ಭಾರತೀಯ ಪಡೆ ಗುಂಡಿಕ್ಕಿ ಹತ್ಯೆ ಮಾಡಿದೆ. 

ಅಹ್ಮದ್ ಖಾನ್ ನೌಶೆರಾ ಸುಂದರ್ ಬಾನಿ ಹಾಗೂ ಪಲ್ಲಾನ್ ವಾಲಾ ಸೆಕ್ಟರ್ ಗಳಲ್ಲಿ ಭಾರತದೊಳಗೆ ಅತಿಕ್ರಮಣ ಮಾಡುವವರಿಗೆ ಸಹಕರಿಸುತ್ತಿದ್ದ ಮಾಹಿತಿ ಸೇನಾ ಮೂಲಗಳಿಂದ ತಿಳಿದುಬಂದಿದೆ. 

ಉತ್ತಮ ತರಬೇತಿ ಪಡೆದಿದ್ದ ಜೈಶ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯವರಿಗೆ ಭಾರತದೊಳಗೆ ನುಸುಳಲು ಅಹ್ಮದ್ ಖಾನ್ ಸಹಕರಿಸುತ್ತಿದ್ದ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp