ಬಾಲಕೋಟ್ ವಾಯುದಾಳಿ ನಂತರ ಪಾಕ್ ಮೇಲೆ ದಾಳಿಗೆ ಭಾರತೀಯ ಸೇನೆ ಸಜ್ಜಾಗಿತ್ತು: ಬಿಪಿನ್ ರಾವತ್
ಫೆಬ್ರವರಿ 26 ರಂದು ನಡೆಸಿದ ಬಾಲಕೋಟ್ ವಾಯುದಾಳಿಗೆ ಉತ್ತರವಾಗಿ ಪಾಕಿಸ್ತಾನ ಸೇನೆಯು ನಡೆಸುವ ಯಾವುದೇ ಯತ್ನವನ್ನು ವಿಫಲಗೊಳಿಸಲು ತಾವು ಸಿದ್ಧ ಎಂದು ಭಾರತೀಯ ಸೇನೆಯು ಕೇಂದ್ರ ಸರ್ಕಾರಕ್ಕೆ ಭರವಸೆ ನೀಡಿತ್ತು.
Published: 20th August 2019 12:24 PM | Last Updated: 20th August 2019 12:25 PM | A+A A-

ಬಿಪಿನ್ ರಾವತ್
ನವದೆಹಲಿ: ಫೆಬ್ರವರಿ 26 ರಂದು ನಡೆಸಿದ ಬಾಲಕೋಟ್ ವಾಯುದಾಳಿಗೆ ಉತ್ತರವಾಗಿ ಪಾಕಿಸ್ತಾನ ಸೇನೆಯು ನಡೆಸುವ ಯಾವುದೇ ಯತ್ನವನ್ನು ವಿಫಲಗೊಳಿಸಲು ತಾವು ಸಿದ್ಧ ಎಂದು ಭಾರತೀಯ ಸೇನೆಯು ಕೇಂದ್ರ ಸರ್ಕಾರಕ್ಕೆ ಭರವಸೆ ನೀಡಿತ್ತು.
ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಪಡೆ(ಐಎಎಫ್), ಪಾಕಿಸ್ತಾನದ ಭೂಪ್ರದೇಶದೊಳಗೆ ಪ್ರವೇಶಿಸಿ ಬಾಲಕೋಟ್ ಬಳಿಯ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆ ತರಬೇತಿ ಶಿಬಿರವನ್ನು ಧ್ವಂಸಗೊಳಿಸಿತ್ತು.
ನಿವೃತ್ತ ಅಧಿಕಾರಿಗಳೊಂದಿಗಿನ ಸಭೆ ಬಳಿಕ ಮಾತನಾಡಿದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಭಾರತೀಯ ಸೇನೆಯು ಪಾಕಿಸ್ತಾನದ ಪಡೆಗಳ ದಾಳಿ ನಿಭಾಯಿಸಲು ಸಿದ್ಧವಾಗಿದೆ ಎಂದು ಹೇಳಿದರು.
ವೈಮಾನಿಕ ದಾಳಿಯ ನಂತರ, ಪಾಕಿಸ್ತಾನವು ಅಂತಹ ಯಾವುದೇ ವೈಮಾನಿಕ ದಾಳಿ ನಡೆದಿಲ್ಲ ಎಂದು ಮೊದಲು ನಿರಾಕರಿಸಿತು ಮತ್ತು ನಂತರ ಐಎಎಫ್ ನ ಬಾಂಬುಗಳು ತಮ್ಮ ಗುರುತು ತಪ್ಪಿ ಹತ್ತಿರದ ಅರಣ್ಯಕ್ಕೆ ಅಪ್ಪಳಿಸಿವೆ, ಮರಗಳನ್ನು ನಾಶಪಡಿಸಿದವು ಎಂದು ಹೇಳಿಕೊಂಡಿತ್ತು.