ಕಾಲಕ್ಕೆ ತಕ್ಕಂತೆ ಭಾರತದ ವೀಸಾ ಶುಲ್ಕದಲ್ಲಿ ಬದಲಾವಣೆ

ಪ್ರವಾಸಿಗರ ಭೇಟಿಯನ್ನು ಗಮನಿಸಿಕೊಂಡು ಭಾರತ ಸಡಿಲಿಕೆಯ ಇ-ಟೂರಿಸ್ಟ್(ಪ್ರವಾಸಿ) ವೀಸಾ ನಿಯಮವನ್ನು ಜಾರಿಗೆ ತರಲಿದೆ.  
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರವಾಸಿಗರ ಭೇಟಿಯನ್ನು ಗಮನಿಸಿಕೊಂಡು ಭಾರತ ಸಡಿಲಿಕೆಯ ಇ-ಟೂರಿಸ್ಟ್(ಪ್ರವಾಸಿ) ವೀಸಾ ನಿಯಮವನ್ನು ಜಾರಿಗೆ ತರಲಿದೆ. 


ಅದರ ಪ್ರಕಾರ ಜುಲೈಯಿಂದ ಮಾರ್ಚ್ ವರೆಗಿನ ಅವಧಿಯಲ್ಲಿ ಅಧಿಕ ವೀಸಾ ಶುಲ್ಕ ಮತ್ತು ಏಪ್ರಿಲ್ ನಿಂದ ಜೂನ್ ವರೆಗೆ ಕಡಿಮೆ ಪ್ರವಾಸಿಗರು ಭೇಟಿ ನೀಡುವ ಅವಧಿಯಲ್ಲಿ ವೀಸಾ ಶುಲ್ಕವನ್ನು ಕಡಿಮೆ ಮಾಡಲು ಭಾರತ ಸರ್ಕಾರ ನಿರ್ಧರಿಸಿದೆ.


ಪ್ರವಾಸೋದ್ಯಮ ಇಲಾಖೆಯ ರಾಜ್ಯ ಸರ್ಕಾರ ಪ್ರತಿನಿಧಿಗಳ ಜೊತೆಗೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಪ್ರಹ್ಲಾದ್ ಪಟೇಲ್, ಭಾರತಕ್ಕೆ ಪ್ರವಾಸಿಗರು ಹೆಚ್ಚೆಚ್ಚು ಬರುವಂತೆ ಪ್ರೋತ್ಸಾಹಿಸಲು ಈ ನಿಯಮದಿಂದ ಸಹಾಯವಾಗಲಿದೆ ಎಂದರು.
ಏಪ್ರಿಲ್ ನಿಂದ ಜೂನ್ ವರೆಗೆ ಭಾರತ 30 ದಿನಗಳ ಇ-ಟೂರಿಸ್ಟ್ ವೀಸಾವನ್ನು 10 ಡಾಲರ್ ಶುಲ್ಕದೊಂದಿಗೆ ಪ್ರವಾಸಿಗರಿಗೆ ನೀಡಲಿದೆ. ಜುಲೈಯಿಂದ ಮಾರ್ಚ್ ವರೆಗೆ 25 ಅಮೆರಿಕನ್ ಡಾಲರ್ ನಲ್ಲಿ ಇ-ಟೂರಿಸ್ಟ್ ವೀಸಾ ಒದಗಿಸಲಿದೆ. 


ಹೊಸ 5 ವರ್ಷಗಳ ಇ-ಟೂರಿಸ್ಟ್ ವೀಸಾವನ್ನು ಅಮೆರಿಕನ್ ಡಾಲರ್ 80ರೊಂದಿಗೆ ಮತ್ತು ಡಾಲರ್ 40ರ ಶುಲ್ಕದೊಂದಿಗೆ ಒಂದು ವರ್ಷದ ಇ-ಟೂರಿಸ್ಟ್ ವೀಸಾವನ್ನು ಭಾರತಕ್ಕೆ ಬರುವ ಪ್ರವಾಸಿಗರಿಗೆ ಒದಗಿಸಲಾಗುವುದು ಎಂದು ಪಟೇಲ್ ತಿಳಿಸಿದರು. 


ಜಪಾನ್, ಸಿಂಗಾಪುರ, ಶ್ರೀಲಂಕಾ ದೇಶಗಳ ಪ್ರವಾಸಿಗರಿಗೆ ಏಪ್ರಿಲ್ ನಿಂದ ಜೂನ್ ವರೆಗೆ ಡಾಲರ್ 10ರ ಶುಲ್ಕದ ವೀಸಾ ಮತ್ತು 1 ವರ್ಷ ಹಾಗೂ 5 ವರ್ಷಗಳ ಅವಧಿಗೆ ಡಾಲರ್ 25ರ ಶುಲ್ಕದಲ್ಲಿ ವೀಸಾ ಒದಗಿಸಲಾಗುವುದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com