ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಗೌರ್
ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಗೌರ್

ಮಧ್ಯ ಪ್ರದೇಶದ ಮಾಜಿ ಸಿಎಂ ಬಾಬುಲಾಲ್ ಗೌರ್ ನಿಧನ 

ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಬಾಬುಲಾಲ್ ಗೌರ್ ದೀರ್ಘ ಕಾಲದ ಅನಾರೋಗ್ಯದಿಂದ ಬುಧವಾರ ಬೆಳಗ್ಗೆ ಹೃದಯಾಘಾತವಾಗಿ ನಿಧನರಾಗಿದ್ದಾರೆ. 

ಭೋಪಾಲ್: ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಬಾಬುಲಾಲ್ ಗೌರ್ ದೀರ್ಘ ಕಾಲದ ಅನಾರೋಗ್ಯದಿಂದ ಬುಧವಾರ ಬೆಳಗ್ಗೆ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಅವರಿಗೆ 89 ವರ್ಷವಾಗಿತ್ತು. ಬಾಬುಲಾಲ್ ಗೌರ್ ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ ಎಂದು ನರ್ಮದಾ ಆಸ್ಪತ್ರೆ ನಿರ್ದೇಶಕ ಡಾ ರಾಜೇಶ್ ಶರ್ಮ ತಿಳಿಸಿದ್ದಾರೆ.


ಕಳೆದ ಕೆಲ ಸಮಯಗಳಿಂದ ಅವರು ವಯಸ್ಸು ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 
ಬಾಬುಲಾಲ್ ಗೌರ್ 2004ರಿಂದ 2005ರವರೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಗೋವಿಂದ್ ಪುರ ವಿಧಾನಸಭಾ ಕ್ಷೇತ್ರದಿಂದ 10 ಬಾರಿ ಪ್ರತಿನಿಧಿಸಿದ್ದರು.


ಉತ್ತರ ಪ್ರದೇಶದ ಪ್ರತಾಪ್ ಗರ್ ನಲ್ಲಿ 1930ರ ಜೂನ್ 2ರಂದು ಜನಿಸಿದ ಬಾಬುಲಾಲ್ ಗೌರ್ ಮಧ್ಯ ಪ್ರದೇಶದಲ್ಲಿ ಬಿಜೆಪಿಯ ಪ್ರಮುಖ ನಾಯಕರಾಗಿ ಬೆಳೆದರು. ಆರಂಭದಲ್ಲಿ ವ್ಯಾಪಾರ ಒಕ್ಕೂಟ ನಾಯಕರಾಗಿ ನಂತರ ಶಾಸಕರಾದರು.

Related Stories

No stories found.

Advertisement

X
Kannada Prabha
www.kannadaprabha.com