ಎಫ್‌ಡಿಐ ನಿಯಮ ಉಲ್ಲಂಘನೆ: ಎನ್‌ಡಿಟಿವಿ ಸಹ ಸಂಸ್ಥಾಪಕ ಪ್ರಣಯ್ ರಾಯ್ ವಿರುದ್ಧ ಸಿಬಿಐನಿಂದ ಪ್ರಕರಣ 

ವಿದೇಶಿ ನೇರ ಹೂಡಿಕೆ ನಿಯಮಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಎನ್‌ಡಿಟಿವಿ ಸಹ ಸಂಸ್ಥಾಪಕ ಪ್ರಣಯ್ ರಾಯ್,  ಅವರ ಪತ್ನಿ ರಾಧಿಕಾ ರಾಯ್ ಮತ್ತು ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. 
ಪ್ರಣಯ್ ರಾಯ್
ಪ್ರಣಯ್ ರಾಯ್

ನವದೆಹಲಿ: ವಿದೇಶಿ ನೇರ ಹೂಡಿಕೆ ನಿಯಮಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಎನ್‌ಡಿಟಿವಿ ಸಹ ಸಂಸ್ಥಾಪಕ ಪ್ರಣಯ್ ರಾಯ್,  ಅವರ ಪತ್ನಿ ರಾಧಿಕಾ ರಾಯ್ ಮತ್ತು ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಕ್ರಿಮಿನಲ್ ಪಿತೂರಿ, ಮೋಸ ಮತ್ತು ಭ್ರಷ್ಟಾಚಾರದ ಆರೋಪದಡಿ ಮಾಜಿ ಸಿಇಒ ವಿಕ್ರಮಾದಿತ್ಯ ಚಂದ್ರ ವಿರುದ್ಧವೂ ಸಂಸ್ಥೆ ದೂರು ದಾಖಲಿಸಿಕೊಂಡಿದೆ. ನಿಯಮ ಉಲ್ಲಂಘಿಸಿ ವಾಮಮಾರ್ಗದಿಂದ ವಿದೇಶಿ ಹಣವನ್ನು ಭಾರತಕ್ಕೆ ತರಲು ಕಂಪನಿಯು ಹಲವಾರು ತೆರಿಗೆ ನಿಯಮಾವಳಿ ಉಲ್ಲ್ಂಘಿಸಿದೆ. ಶಾಮ್ ಟ್ರಾನ್ಸಾಕ್ಷನ್ ಮೂಲಕ ಸಂಸ್ಥೆ ಈ ವಂಚನೆ ನಡೆಸಿದ್ದು ಕಂಪನಿಯು ತೆರಿಗೆ ಸ್ವರ್ಗದಂತಹಾ ರಾಷ್ಟ್ರಗಳಲ್ಲಿ 32 ಅಂಗಸಂಸ್ಥೆಗಳನ್ನು ಹೊಂದಿದೆ ಎಂದು ಆರೋಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com