ನಾರಾಯಣ ಮೂರ್ತಿಯವರು ತಮ್ಮ 74ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡದ್ದು ಹೀಗೆ

ಅತಿ ಗಣ್ಯ ವ್ಯಕ್ತಿಗಳ ಹುಟ್ಟುಹಬ್ಬ ಆಚರಣೆ ಎಂದರೆ ಸಾಮಾನ್ಯವಾಗಿ ವಿಶೇಷವಿರುತ್ತದೆ. ಹಲವು ಖ್ಯಾತ ನಾಮರು ಅವರನ್ನು ಭೇಟಿ ಮಾಡುವುದು, ಎಲ್ಲರ ಸಮ್ಮುಖದಲ್ಲಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ.
 

Published: 21st August 2019 08:27 AM  |   Last Updated: 21st August 2019 08:37 AM   |  A+A-


N R Narayana Murty

ಎನ್ ಆರ್ ನಾರಾಯಣ ಮೂರ್ತಿ

Posted By : Sumana Upadhyaya
Source : The New Indian Express

ಬೆಂಗಳೂರು: ಅತಿ ಗಣ್ಯ ವ್ಯಕ್ತಿಗಳ ಹುಟ್ಟುಹಬ್ಬ ಆಚರಣೆ ಎಂದರೆ ಸಾಮಾನ್ಯವಾಗಿ ವಿಶೇಷವಿರುತ್ತದೆ. ಹಲವು ಖ್ಯಾತ ನಾಮರು ಅವರನ್ನು ಭೇಟಿ ಮಾಡುವುದು, ಎಲ್ಲರ ಸಮ್ಮುಖದಲ್ಲಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ.


ನಿನ್ನೆ ಐಟಿ ದಿಗ್ಗಜ, ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿಯವರ 74ನೇ ಹುಟ್ಟುಹಬ್ಬ. ಅವರ ಮನಸ್ಸಿಗೆ ಇಷ್ಟವಾದ ರೀತಿಯಲ್ಲಿಯೇ ಹುಟ್ಟುಹಬ್ಬದ ದಿನ ಕಳೆದಿದ್ದಾರೆ. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು ''ಈಗ ಸಮಯ ಸಂಜೆ 5.30,ನಾನಿನ್ನೂ ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದೇನೆ'' ಎಂದರು.


ನಿಮ್ಮ ಹುಟ್ಟುಹಬ್ಬದ ದಿನ ಯಾವ ರೀತಿ ಕಳೆಯುತ್ತಿದ್ದೀರಿ ಎಂದು ಕೇಳಿದಾಗ , ನನ್ನ ಈ ವಯಸ್ಸಿನಲ್ಲಿ ಹುಟ್ಟುಹಬ್ಬವನ್ನು ದೊಡ್ಡ ಆಚರಣೆಯನ್ನಾಗಿ ಮಾಡುವುದಿಲ್ಲ. ಕುಟುಂಬದವರ ಜೊತೆ ಕಾಲ ಕಳೆಯುತ್ತೇನೆ, ನನ್ನ ಜೀವನದಲ್ಲಿ ಹುಟ್ಟುಹಬ್ಬವನ್ನು ದೊಡ್ಡ ದಾಗಿ ಆಚರಣೆ ಮಾಡಲೇ ಇಲ್ಲ, ಅದು ನನಗೆ ದೊಡ್ಡ ವಿಷಯವೆಂದು ಅನಿಸುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.


ವಿರಾಮದ ಅವಧಿಯಲ್ಲಿ ಪುಸ್ತಕಗಳನ್ನು ಓದುತ್ತೇನೆ, ಇಲ್ಲವೇ ಸಂಗೀತ ಕೇಳುತ್ತೇನೆ, ಪಾಶ್ಚಾತ್ಯ ಸಂಗೀತ ನನಗೆ ತುಂಬಾ ಇಷ್ಟ. ಬೀಥೋವೆನ್ ಮತ್ತು ಫ್ರಾಂಜ್ ಶುಬರ್ಟ್ ಸಂಗೀತಗಳೆಂದರೆ ನನಗೆ ಅಚ್ಚುಮೆಚ್ಚು. ಸ್ನೇಹಿತರನ್ನು ಭೇಟಿ ಮಾಡಿ ಬಹುತೇಕ ತಾಂತ್ರಿಕತೆಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುತ್ತೇನೆ ಎಂದು ನಾರಾಯಣ ಮೂರ್ತಿ ತಮ್ಮ ವಿರಾಮದ ಅವಧಿಯಲ್ಲಿ ಸಮಯ ಕಳೆಯುವುದರ ಬಗ್ಗೆ ಹೇಳಿಕೊಂಡರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp