ಚೆಕ್ ಬೌನ್ಸ್ ಪ್ರಕರಣ: ದುಬೈನಲ್ಲಿ ಬಂಧನಕ್ಕೊಳಗಾಗಿದ್ದ ಕೇರಳ ರಾಜಕಾರಣಿ ತುಷಾರ್ ಗೆ ಜಾಮೀನು

ಕೇರಳದ ವಯನಾಡು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಭಾರತ್ ಧರ್ಮ ಜನಸೇನೆ ಅಧ್ಯಕ್ಷ ತುಷಾರ್ ವೆಲ್ಲಪ್ಪಲ್ಲಿ ಅವರನ್ನು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೈ ಪೊಲೀಸರು...
ತುಷಾರ್ ವೆಲ್ಲಪ್ಪಲ್ಲಿ
ತುಷಾರ್ ವೆಲ್ಲಪ್ಪಲ್ಲಿ

ಕೊಚ್ಚಿ: ಕೇರಳದ ವಯನಾಡು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಭಾರತ್ ಧರ್ಮ ಜನಸೇನೆ ಅಧ್ಯಕ್ಷ ತುಷಾರ್ ವೆಲ್ಲಪ್ಪಲ್ಲಿ ಅವರನ್ನು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೈ ಪೊಲೀಸರು ಬಂಧಿಸಿದ್ದರು. ಬಳಿಕ ಬಿಲಿಯನೇರ್ ಉದ್ಯಮಿ ಎಂಎ ಯೂಸುಫ್ ಅಲಿ ಮಧ್ಯ ಪ್ರವೇಶದಿಂದಾಗಿ ಕೇರಳ ರಾಜಕಾರಣಿ ಜಾಮೀನು ಪಡೆದುಕೊಂಡಿದ್ದಾರೆ.

ಅಜ್ಮಾನ್ ಕೋರ್ಟ್ 1 ಲಕ್ಷ ದಿರ್ಹಾಮ್(ಸುಮಾರು 2 ಕೋಟಿ ರೂ.) ಸ್ಯೂರಿಟಿ ಪಡೆದು ತುಷಾರ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.

ದುಬೈ ಮೂಲದ ಉದ್ಯಮಿ ನಾಜಿಲ್ ಅಬ್ದುಲ್ಲಾ ಎಂಬುವವರು ನೀಡಿದ ದೂರಿನ ಆಧಾರ ಮೇಲೆ ಪೊಲೀಸರು ತುಷಾರ್ ನನ್ನು ಮಂಗಳವಾರ ಬಂಧಿಸಿದ್ದರು. 

ತುಷಾರ್ ಅವರು 10 ಮಿಲಿಯನ್ ದಿರ್ಹಾಮ್, ಸುಮಾರು 10 ಕೋಟಿ ರೂ.ಗಳ ಚೆಕ್ ಬೌನ್ಸ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ತುಷಾರ್ ಬಂಧನವಾಗುತ್ತಿದ್ದಂತೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದು ಆರೋಪಿ ಬಿಡುಗಡೆಗೆ ಸಹಕರಿಸುವಂತೆ ಮನವಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com