ಸಾಲ ನಿರಾಕರಿಸಿದ ಬ್ಯಾಂಕ್ ಗಳು, ಕಿಡ್ನಿ ಮಾರಾಟಕ್ಕಿಟ್ಟ ಉತ್ತರ ಪ್ರದೇಶ ರೈತ!

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಸಾಲ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಸಹರಣಾಪುರ ಜಿಲ್ಲೆಯ ರೈತರೊಬ್ಬರು ತಮ್ಮ ಒಂದು ಕಿಡ್ನಿಯನ್ನು ಮಾರಾಟಕ್ಕಿಟ್ಟಿರುವುದಾಗಿ ಪೋಸ್ಟರ್ ಹಾಕಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸಹರಣಾಪುರ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಸಾಲ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಸಹರಣಾಪುರ ಜಿಲ್ಲೆಯ ರೈತರೊಬ್ಬರು ತಮ್ಮ ಒಂದು ಕಿಡ್ನಿಯನ್ನು ಮಾರಾಟಕ್ಕಿಟ್ಟಿರುವುದಾಗಿ ಪೋಸ್ಟರ್ ಹಾಕಿದ್ದಾರೆ.

ಛತ್ತರ್ ಸಾಲಿ ಗ್ರಾಮದ ರಾಮಕುಮಾರ್(30 ವರ್ಷ) ಅವರು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ(ಪಿಎಂಕೆವಿವೈ) ಅಡಿ ಹೈನುಗಾರಿಕೆ ತರಬೇತಿ ಪಡೆದಿದ್ದು, ಪಿಎಂಕೆವಿವೈ ನೀಡಿದ ಪ್ರಮಾಣ ಪತ್ರ ತೋರಿಸಿದರೂ ತಮಗೆ ಯಾವುದೇ ಸರ್ಕಾರಿ ಬ್ಯಾಂಕ್ ಸಾಲ ನೀಡುತ್ತಿಲ್ಲ ಎಂದು ರೈತ ಆರೋಪಿಸಿದ್ದಾರೆ.

ಹಸು ಖರೀದಿಸಲು ಮತ್ತು ಅವುಗಳಿಗೆ ಶೆಡ್ ನಿರ್ಮಿಸಲು ನನ್ನ ಸಂಬಂಧಿಕರ ಬಳಿ ಸಾಲ ಪಡೆದಿದ್ದೇನೆ. ಈಗ ಸಂಬಂಧಿಕರು ಸಾಲ ಹಾಗೂ ಬಡ್ಡಿ ಮರುಪಾವತಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ನಾನು ನನ್ನ ಕಿಡ್ನಿಯನ್ನು ಮಾರಾಟಕ್ಕಿಟ್ಟಿದ್ದೇನೆ ಎಂದು  ರಾಮಕುಮಾರ್ ಹೇಳಿದ್ದಾರೆ.

ಬ್ಯಾಂಕ್ ಗಳು ಸಾಲ ನೀಡದ ಹಿನ್ನೆಲೆಯಲ್ಲಿ ನನಗೆ ಬೇರೆ ದಾರಿ ಇಲ್ಲದೆ ಕಿಡ್ನಿ ಮಾರಾಟಕ್ಕಿಟ್ಟಿದ್ದೇನೆ ಎಂದು ರೈತ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆಡಳಿತ, ಅದು ನಮ್ಮ ಗಮನಕ್ಕೆ ಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುವುದು ಮತ್ತು ಬ್ಯಾಂಕ್ ಗಳು ಏಕೆ ಸಾಲ ನಿರಾಕರಿಸುತ್ತಿವೆ ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ಸಹರಣಾಪುರ ವಿಭಾಗೀಯ ಆಯುಕ್ತ ಸಂಜಯ್ ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com