ಭಾರತದಲ್ಲೂ ಬಿಕಿನಿ ಏರ್‌ಲೈನ್ಸ್ ಸೇವೆ ಆರಂಭ: ಭಾರತೀಯರಿಗಾಗಿ ಭರ್ಜರಿ ಆಫರ್, ಏನು ಗೊತ್ತ?

ಭಾರತದಲ್ಲಿ ಹಲವು ವಿಮಾನ ಸಂಸ್ಧೆಗಳು ನಷ್ಟದಲ್ಲಿ ನಡೆಯುತ್ತಿದ್ದರೆ ಈ ಮಧ್ಯೆ ಬಿಕಿನಿ ಏರ್ ಲೈನ್ಸ್ ಭಾರತದಲ್ಲಿ ತನ್ನ  ವಿಮಾನ ಸೇವೆಯನ್ನು ಆರಂಭಿಸಲು ಮುಂದಾಗಿದ್ದು ಭಾರತೀಯರಿಗಂತಾನೆ ಭರ್ಜರಿ ಆಫರ್ ಒಂದನ್ನು ನೀಡಿತ್ತು.

Published: 24th August 2019 04:21 PM  |   Last Updated: 24th August 2019 04:21 PM   |  A+A-


Bikini Airline

ಬಿಕಿನಿ ಏರ್ ಲೈನ್ಸ್

Posted By : Vishwanath S
Source : Online Desk

ನವದೆಹಲಿ: ಭಾರತದಲ್ಲಿ ಹಲವು ವಿಮಾನ ಸಂಸ್ಧೆಗಳು ನಷ್ಟದಲ್ಲಿ ನಡೆಯುತ್ತಿದ್ದರೆ ಈ ಮಧ್ಯೆ ಬಿಕಿನಿ ಏರ್ ಲೈನ್ಸ್ ಭಾರತದಲ್ಲಿ ತನ್ನ  ವಿಮಾನ ಸೇವೆಯನ್ನು ಆರಂಭಿಸಲು ಮುಂದಾಗಿದ್ದು ಭಾರತೀಯರಿಗಂತಾನೆ ಭರ್ಜರಿ ಆಫರ್ ಒಂದನ್ನು ನೀಡಿತ್ತು.

ಬಿಕಿನಿ ಏರ್ಲೈನ್ಸ್ ಅಂತಾನೆ ಸುದ್ದಿಯಾಗಿರುವ ವಿಯೆಟ್ನಾಂ ವಿಮಾನ ಸಂಸ್ಧೆ ಡಿಸೆಂಬರ್ 6ರಿಂದ ನವದೆಹಲಿಯಿಂದ ವಿಯೆಟ್ನಾಮ್ ನ ಹೂ ಚಿ ಮಿನ್ ಮತ್ತು ಹನೋಯ್ ನಗರಗಳ ನಡುವೆ ವಿಮಾನಯಾನ ಆರಂಭಿಸಲಿದೆ. 

ಈ ವಿಮಾನಯಾನ ಆರಂಭ ಹಿನ್ನೆಲೆಯಲ್ಲಿ ಆಗಸ್ಟ್ 20, 21 ಮತ್ತು 22 ಸಂಸ್ಧೆ ಗೋಲ್ಡನ್ ಡೇಸ್ ಎಂಬ ಆಫರ್ ನೀಡಿದ್ದು ಕೇವಲ 9 ರೂಪಾಯಿಗೆ ಟಿಕೆಟ್ ಬುಕ್ ಮಾಡಬಹುದಾಗಿತ್ತು. ಅದರಂತೆ ಹಲವರು ಟಿಕೆಟ್ ಬುಕ್ ಮಾಡಿದ್ದಾರೆ.

ಡಿಸೆಂಬರ್ 6ರಿಂದ ನವದೆಹಲಿಯಿಂದ ಹೂ ಚಿ ಮಿನ್ ಸಿಟಿಗೆ ಮೊದಲ ವಿಮಾನ ಸೇವೆ ಆರಂಭಗೊಳ್ಳಲಿದೆ. ಈ ಮಾರ್ಗದಲ್ಲಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ವಿಮಾನ ಹಾರಾಟ ನಡೆಸಲಿದೆ. 

ಡಿಸೆಂಬರ್ 7ರಂದು ನವದೆಹಲಿಯಿಂದ ಹನೋಯ್ ಗೆ ವಿಮಾನ ಸೇವೆ ಆರಂಭಗೊಳ್ಳಲಿದೆ. ವಾರದಲ್ಲಿ ಮಂಗಳವಾರ, ಗುರುವಾರ ಮತ್ತು ಶನಿವಾರ ಈ ಮಾರ್ಗದಲ್ಲಿ ವಿಮಾನಗಳು ಸಂಚರಿಸಲಿವೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp