5-ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿಯನ್ನು ಮುಟ್ಟಲು ಸಾಧ್ಯವಿದೆ: ಪ್ರಣಬ್ ಮುಖರ್ಜಿ

ಹಣಕಾಸು ನಿರ್ವಹಣೆಯನ್ನು ವಿವೇಕಯುತವಾಗಿ ನೋಡಿಕೊಂಡರೆ 2024-25ರ ವೇಳೆಗೆ ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಗೆ ಮುಟ್ಟಿಸುವ ಗುರಿಯನ್ನು ತಲುಪಬಹುದು ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. 
ಪ್ರಣಬ್ ಮುಖರ್ಜಿ
ಪ್ರಣಬ್ ಮುಖರ್ಜಿ

ಕೋಲ್ಕತ್ತಾ: ಹಣಕಾಸು ನಿರ್ವಹಣೆಯನ್ನು ವಿವೇಕಯುತವಾಗಿ ನೋಡಿಕೊಂಡರೆ 2024-25ರ ವೇಳೆಗೆ ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಗೆ ಮುಟ್ಟಿಸುವ ಗುರಿಯನ್ನು ತಲುಪಬಹುದು ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. 


ಕೋಲ್ಕತ್ತಾದಲ್ಲಿ ನಿನ್ನೆ ಅಸೋಸಿಯೇಷನ್ ಆಫ್ ಕಾರ್ಪೊರೇಟ್ ಅಡ್ವೈಸರ್ ಅಂಡ್ ಎಕ್ಸಿಕ್ಯೂಟಿವ್ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಹಣಕಾಸನ್ನು ವಿವೇಚನೆಯುತವಾಗಿ ಮತ್ತು ಸೂಕ್ತ ಯೋಜನೆ ಮೂಲಕ ನಿರ್ವಹಿಸುತ್ತಾ ಹೋದರೆ ಇನ್ನು 5 ವರ್ಷಗಳಲ್ಲಿ ದೇಶದ ಆರ್ಥಿಕ ವ್ಯವಸ್ಥೆಯನ್ನು 5 ಟ್ರಿಲಿಯನ್ ಡಾಲರ್ ನಷ್ಟು ಸಾಧಿಸಬಹುದು. ಸರಕು ಮತ್ತು ಸೇವಾ ತೆರಿಗೆಗೆ ಹೆಚ್ಚು ಸ್ಪಷ್ಟತೆ ಸಿಗಬೇಕಾಗಿದ್ದು ಕಳೆದ ವರ್ಷದಿಂದ ದೇಶದ ಅರ್ಥವ್ಯವಸ್ಥೆಯಲ್ಲಿ ಕುಸಿತದ ಲಕ್ಷಣ ಕಂಡುಬರುತ್ತಿದೆ, ಇದರಿಂದ ಜಿಡಿಪಿಯಲ್ಲಿ ಕುಂಠಿತವಾಗಿದೆ ಎಂದರು.


ಬಹು ವಿಧದ ತೆರಿಗೆಯನ್ನು ಜಿಎಸ್ ಟಿ ಜಾರಿ ಬದಲಾಯಿಸಿದೆ. ಆದರೆ ಸರ್ಕಾರ ಈ ಬಗ್ಗೆ ಹೆಚ್ಚು ಸ್ಪಷ್ಟತೆ ತರಬೇಕು, ಹಾಗಾದರೆ ಇದರ ಅನುಸರಣೆ ಉತ್ತಮವಾಗುತ್ತದೆ ಎಂದರು.


ಇತ್ತೀಚಿನ ದಿನಗಳಲ್ಲಿ ಕಾರ್ಪೊರೇಟ್ ವಂಚನೆಗಳು ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಕಳೆದ ಕೆಲ ವರ್ಷಗಳಿಂದ ಇಂತಹ ವಂಚನೆಗಳು ನಿಜಕ್ಕೂ ಆಘಾತವನ್ನುಂಟುಮಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com