ಅರುಣ್ ಜೇಟ್ಲಿ
ಅರುಣ್ ಜೇಟ್ಲಿ

ಇತಿಹಾಸ ಪುಟ ಸೇರಲಿರುವ ಅರುಣ್ ಜೇಟ್ಲಿಯವರ ಜಿಎಸ್ ಟಿ ಜಾರಿ 

ಕೇಂದ್ರ ಸರ್ಕಾರದ ಮಾಜಿ ವಿತ್ತ ಮಂತ್ರಿ ಅರುಣ್ ಜೇಟ್ಲಿಯವರ ನೆನಪು ಇತಿಹಾಸದಲ್ಲಿ ಉಳಿಯುವುದಾದರೆ ಅದು ಸರಕು ಮತ್ತು ಸೇವಾ ತೆರಿಗೆ ಜಾರಿ ಮೂಲಕ. ಇಡೀ ಭಾರತಕ್ಕೆ ಏಕರೂಪ ತೆರಿಗೆ ವ್ಯವಸ್ಥೆಯೇ ಸರಕು ಮತ್ತು ಸೇವಾ ತೆರಿಗೆ. 

ನವದೆಹಲಿ: ಕೇಂದ್ರ ಸರ್ಕಾರದ ಮಾಜಿ ವಿತ್ತ ಮಂತ್ರಿ ಅರುಣ್ ಜೇಟ್ಲಿಯವರ ನೆನಪು ಇತಿಹಾಸದಲ್ಲಿ ಉಳಿಯುವುದಾದರೆ ಅದು ಸರಕು ಮತ್ತು ಸೇವಾ ತೆರಿಗೆ ಜಾರಿ ಮೂಲಕ. ಇಡೀ ಭಾರತಕ್ಕೆ ಏಕರೂಪ ತೆರಿಗೆ ವ್ಯವಸ್ಥೆಯೇ ಸರಕು ಮತ್ತು ಸೇವಾ ತೆರಿಗೆ.


ಆರಂಭದಲ್ಲಿ ಇದಕ್ಕೆ ವಿರೋಧ ಪಕ್ಷಗಳಿಂದ ಟೀಕೆ, ವಿರೋಧಗಳು ವ್ಯಕ್ತವಾಗಿದ್ದವು. ಆಗ ಜೈಟ್ಲಿಯವರ ರಾಜತಾಂತ್ರಿಕ ಕೌಶಲ್ಯಗಳಿಂದ ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಹಮತ ತಂದು ಕಳೆದ ಬಾರಿಯ ಕೇಂದ್ರ ಸರ್ಕಾರದಲ್ಲಿ ಸರಕು ಮತ್ತು ಸೇವಾ ತೆರಿಗೆ ವಿಧಾನವನ್ನು ಜಾರಿಗೆ ತರಲಾಯಿತು. 


ಭಾರತದಲ್ಲಿ ಜಿಎಸ್ ಟಿ ಜಾರಿಗೆ ಬಂದಿದ್ದು 2017ರ ಜುಲೈ 1ರಂದು. ಜಿಎಸ್ ಟಿಯಲ್ಲಿ ಕೆಲವು ನ್ಯೂನತೆ ಕಂಡುಬಂದಿತ್ತು. ಆದರೂ ಅದೀಗ ಸರಿಯಾದ ದಿಕ್ಕಿನಲ್ಲಿ ಮುಂದುವರಿಯುತ್ತಿದೆ. ನಾವು ಹಿಂದೆ ಸರಿಯಲು ಸಾಧ್ಯವಲ್ಲ. ಇದು ಅಭಿವೃದ್ಧಿಪರ ತೆರಿಗೆ ವಿಧಾನ. ಜಿಎಸ್ ಟಿ ಮಂಡಳಿಯಲ್ಲಿ ನಡೆದ ಸುಮಾರು 36 ಸಭೆಗಳಲ್ಲಿ ಇದರಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ ಎನ್ನುತ್ತಾರೆ ಕೇಂದ್ರ ಸುಂಕ ಮತ್ತು ತೆರಿಗೆ ಮಂಡಳಿಯ ಮಾಜಿ ಅಧ್ಯಕ್ಷ ಸುಮಿತ್ ದತ್ತಾ ಮಂಜುಂದಾರ್.

Related Stories

No stories found.

Advertisement

X
Kannada Prabha
www.kannadaprabha.com