ಪಿಠೋಪಕರಣ, ಕಂಪ್ಯೂಟರ್ ದುರ್ಬಳಕೆ: ಆಂಧ್ರ ಮಾಜಿ ಸ್ಪೀಕರ್ ವಿರುದ್ಧ ಕೇಸ್ ದಾಖಲು

ವಿಧಾನಸಭೆಗೆ ಸೇರಿದ ಪಿಠೋಪಕರಣ ಮತ್ತು ಕಂಪ್ಯೂಟರ್ ಗಳನ್ನು ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡ ಆರೋಪದ ಮೇಲೆ ಆಂಧ್ರ ಪ್ರದೇಶ ವಿಧಾನಸಭೆ ಮಾಜಿ ಸ್ಪೀಕರ್ ಕೊಡೆಲ ಶಿವ ಪ್ರಸಾದ್ ರಾವ್ ಅವರ ವಿರುದ್ಧ ಅಮರಾವತಿಯ

Published: 25th August 2019 02:48 PM  |   Last Updated: 25th August 2019 02:48 PM   |  A+A-


kodela

ಕೊಡೆಲ ಶಿವ ಪ್ರಸಾದ್ ರಾವ್

Posted By : Lingaraj Badiger
Source : The New Indian Express

ಗುಂಟೂರ್: ವಿಧಾನಸಭೆಗೆ ಸೇರಿದ ಪಿಠೋಪಕರಣ ಮತ್ತು ಕಂಪ್ಯೂಟರ್ ಗಳನ್ನು ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡ ಆರೋಪದ ಮೇಲೆ ಆಂಧ್ರ ಪ್ರದೇಶ ವಿಧಾನಸಭೆ ಮಾಜಿ ಸ್ಪೀಕರ್ ಕೊಡೆಲ ಶಿವ ಪ್ರಸಾದ್ ರಾವ್ ಅವರ ವಿರುದ್ಧ ಅಮರಾವತಿಯ ತಲ್ಲೂರ್ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಆಂಧ್ರ ವಿಧಾನಸಭೆಯ ಶಾಖಾಧಿಕಾರಿ ಈಶ್ವರ್ ರಾವ್ ಅವರು ನೀಡಿದ ದೂರಿನ ಆಧಾರದ ಮೇಲೆ ತಲ್ಲೂರ್ ಪೊಲೀಸರು ಮಾಜಿ ಸ್ಪೀಕರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಕೊಡೆಲ ಅವರ ಸಹ ತಾವೂ ಪಿಠೋಪಕರಣ ಮತ್ತು ಕಂಪ್ಯೂಟರ್ ಅನ್ನು ದುರ್ಬಳಕೆ ಮಾಡಿಕೊಂಡಿದ್ದು ಒಪ್ಪಿಕೊಂಡಿದ್ದಾರೆ. ಆದರೆ ಕಚೇರಿಯನ್ನು ಹೊಸ ರಾಜಧಾನಿ ಅಮರಾವತಿಗೆ ಸ್ಥಳಾಂತರಿಸುವ ಸಂದರ್ಭದಲ್ಲಿ ಭದ್ರತೆ ದೃಷ್ಟಿಯಿಂದ ಪಿಠೋಪಕರಣಗಳನ್ನು ಗುಂಟೂರಿನ ತಮ್ಮ ಕಚೇರಿಗೆ ಬಳಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ವಿಧಾಸಭೆ ಅಧಿಕಾರಿಗಳ ಪರಿಶೀಲನೆ ವೇಳೆ ಕೊಡೆಲ ಅವರು ಸರ್ಕಾರಿ ಪಿಠೋಪಕರಣಗಳನ್ನು ತಮ್ಮ ಮಾಲೀಕತ್ವದ  ಆಟೋಮೊಬೈಲ್ ಶೋರೂಮ್ ನಲ್ಲಿ ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾಜಿ ಸ್ಪೀಕರ್ ವಿರುದ್ಧ ಕೇಸ್ ದಾಖಲಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp