ಮನ್ ಕಿ ಬಾತ್ : ಅ. 2 ರಿಂದ ಪ್ಲಾಸ್ಟಿಕ್ ವಿರುದ್ಧ ಸಾಮೂಹಿಕ ಆಂದೋಲನಕ್ಕೆ ಪಿಎಂ ಮೋದಿ ಕರೆ 

ಈ ವರ್ಷದ ಅಕ್ಟೋಬರ್ 2 ಗಾಂಧಿ ಜಯಂತಿಯಿಂದ ಒಂದು ಬಾರಿ ಬಳಸುವ ಪ್ಲಾಸ್ಟಿಕ್ ಬಳಕೆ ವಿರೋಧಿಸಿ ಹೊಸ ಸಾಮೂಹಿಕ ಆಂದೋಲನ ಆರಂಭಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. 
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ

ನವದೆಹಲಿ: ಈ ವರ್ಷದ ಅಕ್ಟೋಬರ್ 2 ಗಾಂಧಿ ಜಯಂತಿಯಿಂದ ಒಂದು ಬಾರಿ ಬಳಸುವ ಪ್ಲಾಸ್ಟಿಕ್ ಬಳಕೆ ವಿರೋಧಿಸಿ ಹೊಸ ಸಾಮೂಹಿಕ ಆಂದೋಲನ ಆರಂಭಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.


ತಮ್ಮ ತಿಂಗಳ ಕೊನೆಯ ಭಾನುವಾರದಂದು ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರ 150ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆಯನ್ನು ವಿರೋಧಿಸಿ ಹೊಸ ಸಾಮೂಹಿಕ ಚಳವಳಿ ಆರಂಭಿಸೋಣ ಎಂದರು.


ಪರಿಸರವನ್ನು ಅವನತಿಯಿಂದ ರಕ್ಷಿಸಲು ಪ್ಲಾಸ್ಟಿಕ್ ನ್ನು ಸರಿಯಾಗಿ ಸಂಗ್ರಹಿಸುವ ಪ್ರಯತ್ನಕ್ಕೆ ಕೈಹಾಕೋಣ ಎಂದರು. 


ಪ್ರಧಾನಿಯವರು ಮೊನ್ನೆ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸುವಂತೆ ದೇಶದ ನಾಗರಿಕರಿಗೆ ಕರೆ ನೀಡಿದ್ದರು. ಅಂಗಡಿಗಳಲ್ಲಿ ಪರಿಸರ ಸ್ನೇಹಿ ಬ್ಯಾಗ್ ಗಳನ್ನು ಗ್ರಾಹಕರಿಗೆ ನೀಡಬೇಕು ಎಂದು ಒತ್ತಾಯಿಸಿದ್ದರು.


ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಅವುಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಮುನ್ಸಿಪಾಲಿಟಿಗಳು, ಮುನ್ಸಿಪಲ್ ಕಾರ್ಪೊರೇಷನ್ ಗಳು, ಜಿಲ್ಲಾಡಳಿತಗಳು, ಗ್ರಾಮ ಪಂಚಾಯತ್ ಗಳು, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಒಂದಾಗಬೇಕು ಎಂದರು.


ಅಪೌಷ್ಟಿಕತೆ ವಿರುದ್ಧ ಅಭಿಯಾನ ಆರಂಭಿಸುವ ಭಾಗವಾಗಿ ಸೆಪ್ಟೆಂಬರ್ ತಿಂಗಳನ್ನು ಪೊಶನ್ ಅಭಿಯಾನ ಆಚರಿಸುವಂತೆ ಕರೆ ನೀಡಿದರು. 


ಇಂದು ಅರಿವಿನ ಕೊರತೆಯಿಂದ ಬಡವರು ಮತ್ತು ಶ್ರೀಮಂತರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸೆಪ್ಟೆಂಬರ್ ತಿಂಗಳನ್ನು ಪೊಶನ್ ಅಭಿಯಾನವನ್ನು ದೇಶಾದ್ಯಂತ ಆಚರಿಸಲಾಗುವುದು ಎಂದು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ತಿಳಿಸಿದರು.


ಪೊಶನ್ ಅಭಿಯಾನದಡಿ ಹಲವು ವೈಜ್ಞಾನಿಕ ಕ್ರಮಗಳ ಮೂಲಕ ಅಪೌಷ್ಟಿಕತೆ ವಿರುದ್ಧ ಹೋರಾಡಲು ಸಾಮೂಹಿಕ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com