ಅಧಿರ್ ರಂಜನ್ ಚೌದರಿಯಿಂದ ಕಾಂಗ್ರೆಸ್ ಪಕ್ಷದ ಸಮಾಧಿ- ಸತ್ಯಪಾಲ್ ಮಲ್ಲಿಕ್

ಕಾಂಗ್ರೆಸ್ ಪಕ್ಷದ ಲೋಕಸಭೆಯಲ್ಲಿನ ನಾಯಕ ಅಧಿರ್ ರಂಜನ್ ಚೌದರಿ  ಸಂಸತ್ತಿನಲ್ಲಿ ಜಮ್ಮು-ಕಾಶ್ಮೀರಕ್ಕೆ ಕುರಿತಾದ ಹೇಳಿಕೆಯೊಂದಿಗೆ  ಆ ಪಕ್ಷವನ್ನು ಸಮಾಧಿ ಮಾಡಿದ್ದಾರೆ ಎಂದು ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ವಾಗ್ದಾಳಿ ನಡೆಸಿದ್ದಾರೆ.
ಸತ್ಯಪಾಲ್ ಮಲ್ಲಿಕ್
ಸತ್ಯಪಾಲ್ ಮಲ್ಲಿಕ್

ನವದೆಹಲಿ: ಕಾಂಗ್ರೆಸ್ ಪಕ್ಷದ ಲೋಕಸಭೆಯಲ್ಲಿನ ನಾಯಕ ಅಧಿರ್ ರಂಜನ್ ಚೌದರಿ  ಸಂಸತ್ತಿನಲ್ಲಿ ಜಮ್ಮು-ಕಾಶ್ಮೀರಕ್ಕೆ ಕುರಿತಾದ ಹೇಳಿಕೆಯೊಂದಿಗೆ  ಆ ಪಕ್ಷವನ್ನು ಸಮಾಧಿ ಮಾಡಿದ್ದಾರೆ ಎಂದು ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ವಾಗ್ದಾಳಿ ನಡೆಸಿದ್ದಾರೆ.

ದೇಶದಲ್ಲಿ ಚುನಾವಣೆ ನಡೆಯುತ್ತಿರುವಾಗ ಆ ರೀತಿಯಲ್ಲಿ ಹೇಳಿಕೆ ನೀಡಬೇಕಿತ್ತಾ, ಅವರ ಜ್ಞಾನಕ್ಕೆ ಏನಂತಾ ಹೇಳಲ್ಲಿ ಎಂದು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಮಾಡುವ ನಿರ್ಣಯ ಕುರಿತ ಚರ್ಚೆಯಲ್ಲಿ 1948ರಿಂದಲೂ ವಿಶ್ವಸಂಸ್ಥೆ ಈ ವಿಚಾರವನ್ನು ಮೇಲ್ವಿಚಾರಣೆ ಮಾಡುತ್ತಿರುವಾಗ ಕಾಶ್ಮೀರ ಹೇಗೆ ಆಂತರಿಕ ವಿಚಾರವಾಗುತ್ತದೆ ಎಂದು ಅಧಿರ್ ರಂಜನ್ ಹೇಳಿಕೆ ನೀಡಿದ್ದರು. ಈ ಕುರಿತಂತೆ ಕೇಳಲಾದ ಪ್ರಶ್ನೆಗೆ  ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಪ್ರತಿಕ್ರಿಯಿಸಿದರು.

ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ತಮ್ಮಗೆ ನೀಡಿದ ಕೆಲಸವನ್ನು ಅತ್ಯಂತ ಭಕ್ತಿಯಿಂದ ಮಾಡಿದ್ದೇನೆ.  ಕಣಿವೆ ರಾಜ್ಯದ ಸಂಸ್ಕೃತಿ, ಘನತೆ, ವೈಶಿಷ್ಠ್ಯತೆ,  ಕಾಶ್ಮೀರ ಜನರ ಭೂಮಿ, ಉದ್ಯೋಗವನ್ನು ಕಾಪಾಡುವುದಾಗಿ ಅವರು  ಪ್ರತಿಜ್ಞೆ ಮಾಡಿದರು.

ಈ ಹಿಂದೆ ಇದೇ ರೀತಿಯಾದಾಗ ಗುಲಾಮ್ ನಬಿ ಅಜಾದ್ ಅವಧಿಯಲ್ಲಿ ಅನೇಕ ಜನರನ್ನು ಹತ್ಯೆ ಮಾಡಲಾಗಿತ್ತು. ಕಾಶ್ಮೀರ ಜನರ ಹಾನಿಯಾಗದಿರುವುದು ನಮ್ಮ ಆದ್ಯತೆಯಾಗಿದೆ. ನಾವು ಅವಸರದಲ್ಲಿ ಇಲ್ಲ. ಮುಂದಿನ ದಿನಗಳಲ್ಲಿ  ಕಾಶ್ಮೀರಿಗಳ ಪ್ರಾಣ ರಕ್ಷಣೆ ಅತ್ಯಂತ ಪ್ರಮುಖವಾಗಿದೆ.

ಕಾಶ್ಮೀರಿ ಜನರಿಗಾಗಿ ಅನೇಕ ಕೆಲಸಗಳನ್ನು ಮಾಡಲಾಗುವುದು  ಪಾಕ್ ಆಕ್ರಮಿತ ಜನರು ಕೂಡಾ ಜಮ್ಮು- ಕಾಶ್ಮೀರ ಬದುಕಲು ಉತ್ತಮ ಸ್ಥಳವೆಂದು ಹೇಳಲು ಆರಂಭಿಸಿದ್ದಾರೆ ಎಂದು ಸತ್ಯಪಾಲ್ ಮಲ್ಲಿಕ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com