ಅಯೋಧ್ಯೆ ವಿವಾದ: ಇಡೀ ವಿವಾದಿತ ಸ್ಥಳದ ಹಕ್ಕು ತನಗೇ ನೀಡಬೇಕು - ನಿರ್ಮೋಹಿ ಅಖಾಡ

ಅಯೋಧ್ಯೆಯಲ್ಲಿನ ವಿವಾದಿತ ಜಮೀನಿನ ನಿರ್ವಹಣೆ ಮತ್ತು ಸುಪರ್ದಿ ತನಗೆ ನೀಡುವಂತೆ ರಾಮಜನ್ಮಭೂಮಿ-ಬಾಬರಿ ಮಸೀದಿ ಜಮೀನು ವಿವಾದ ಪ್ರಕರಣದಲ್ಲಿ ಮೂರು ವ್ಯಕ್ತಿಗಳ ಪೈಕಿ ಒಂದಾದ ನಿರ್ಮೋಹಿ ಅಖಾಡ ಸುಪ್ರೀಂಕೋರ್ಟ್ ನಲ್ಲಿ ಸೋಮವಾರ ವಾದಿಸಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಅಯೋಧ್ಯೆಯಲ್ಲಿನ ವಿವಾದಿತ ಜಮೀನಿನ ನಿರ್ವಹಣೆ ಮತ್ತು ಸುಪರ್ದಿ ತನಗೆ ನೀಡುವಂತೆ ರಾಮಜನ್ಮಭೂಮಿ-ಬಾಬರಿ ಮಸೀದಿ ಜಮೀನು ವಿವಾದ ಪ್ರಕರಣದಲ್ಲಿ ಮೂರು ವ್ಯಕ್ತಿಗಳ ಪೈಕಿ ಒಂದಾದ ನಿರ್ಮೋಹಿ ಅಖಾಡ ಸುಪ್ರೀಂಕೋರ್ಟ್ ನಲ್ಲಿ ಸೋಮವಾರ ವಾದಿಸಿದೆ.
 
ಈ ಕುರಿತಂತೆ ನಿರ್ಮೋಹಿ ಅಖಾಡ ಪರ ಹಿರಿಯ ವಕೀಲ ಸುಶೀಲ್ ಕುಮಾರ್ ಜೈನ್ ಅವರು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರ ಮುಂದೆ ವಾದ ಮಂಡಿಸಿದರು. ಅಯೋದ್ಯೆಯ ವಿವಾದಿತ ಜಾಗವನ್ನು ಮೂರು ಭಾಗಗಳಾಗಿ ವಿಂಗಡಿಸಿ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಹೊಸದಾಗಿ ಸಲ್ಲಿಸಿದ್ದ ಮನವಿ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯದ ಪೀಠ ಇಂದು ಕೈಗೆತ್ತಿಕೊಂಡಿತು. ವಿಚಾರಣೆ ವೇಳೆ ನಿರ್ಮೋಹಿ ಅಖಾಡ ಪರ ವಕೀಲರು ವಿವಾದಿತ ಜಾಗದ ಪೂರ್ಣ ಸುಪರ್ದಿ ತನಗೆ ನೀಡುವಂತೆ ವಾದ ಮಂಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com