ಗುಜರಾತ್ ನ ಕಚ್ ಮೂಲಕ ಪಾಕ್ ಕಮಾಂಡೊಗಳ ನುಸುಳಿರುವ ಶಂಕೆ: ಅದಾನಿ ಪೋರ್ಟ್ಸ್ ಕಟ್ಟೆಚ್ಚರ

ಹರಾಮಿ ನಾಲಾ ಕ್ರೀಕ್ ಮೂಲಕ ಗುಜರಾತ್ ನ ಕಚ್ ಪ್ರದೇಶವನ್ನು ಪಾಕಿಸ್ತಾನದ ತರಬೇತಿ ಪಡೆದ ಕಮಾಂಡೊಗಳು ಪ್ರವೇಶಿಸಿದ್ದಾರೆ ಎಂದು ಅದಾನಿ ಪೋರ್ಟ್ಸ್ ಮತ್ತು ಲಾಜಿಸ್ಟಿಕ್ಸ್ ಎಚ್ಚರಿಕೆ ನೀಡಿದೆ.
ಗುಜರಾತ್ ನ ಮುಂದ್ರಾ ಬಂದರು
ಗುಜರಾತ್ ನ ಮುಂದ್ರಾ ಬಂದರು

ನವದೆಹಲಿ: ಹರಮಿ ನಾಲಾ ಕ್ರೀಕ್ ಪ್ರದೇಶದ ಮೂಲಕ ಗುಜರಾತ್ ನ ಕಚ್ ಭಾಗವನ್ನು ಪಾಕಿಸ್ತಾನದ ತರಬೇತಿ ಪಡೆದ ಕಮಾಂಡೊಗಳು ಪ್ರವೇಶಿಸಿದ್ದಾರೆ ಎಂಬ ಬಲವಾದ ಶಂಕೆಯ ಮೇಲೆ ಅದಾನಿ ಪೋರ್ಟ್ಸ್ ಮತ್ತು ಲಾಜಿಸ್ಟಿಕ್ಸ್ ಬಂದರುಗಳಿಗೆ ತೀವ್ರ ಕಟ್ಟೆಚ್ಚರ ಘೋಷಿಸಿದೆ. 


ಮುನ್ನೆಚ್ಚರಿಕೆ ಹಾಗೂ ಭದ್ರತಾ ಕ್ರಮ ಕೈಗೊಳ್ಳುವಂತೆ ಗುಜರಾತ್ ನ ಮುಂದ್ರಾ/ಕಂಡ್ಲಾ ಬಂದರುಗಳಿಗೆ ಅದಾನಿ ಪೋರ್ಟ್ಸ್ ಸೂಚನೆ ನೀಡಿದೆ. 

ಈ ಕುರಿತು ಬಂದರು ಏಜೆಂಟ್ ಗಳಿಗೆ ಮತ್ತು ಸಂಬಂಧಪಟ್ಟವರಿಗೆ ಭದ್ರತಾ ಕ್ರಮಗಳನ್ನು ಹೊರಡಿಸಿರುವ ಅದಾನಿ ಪೋರ್ಟ್ಸ್, ಅಂತರ್ಜಲ ಮೂಲಕ ದಾಳಿ ನಡೆಸುವ ತರಬೇತಿಯನ್ನು ಪಾಕಿಸ್ತಾನಿ ಕಮಾಂಡೊಗಳು ಪಡೆದಿದ್ದಾರೆ ಎಂದು ಹೇಳಲಾಗುತ್ತಿದ್ದು ಗುಜರಾತ್ ನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.


ಬಂದರು ಸುತ್ತಮುತ್ತ ಯಾವುದೇ ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದರೆ ಕೂಡಲೇ ಸಾಗರ ನಿಯಂತ್ರಣ ಮತ್ತು ಬಂದರು ಕಾರ್ಯಾಚರಣೆ ಕೇಂದ್ರಗಳಿಗೆ ತಿಳಿಸಬೇಕು. ಭದ್ರತಾ ಕ್ರಮವಾಗಿ ಬಂದರು ಸುತ್ತಮುತ್ತ ಸುರಕ್ಷತೆ ಕ್ರಮಗಳನ್ನು ಹೆಚ್ಚಿಸಲಾಗಿದೆ. ಭದ್ರತೆ ಕ್ರಮಗಳಿಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಲಾಗುತ್ತಿದೆ ಎಂದು ಬಂದರು ಪ್ರಾಧಿಕಾರದ ಸಲಹಾ ಅಧಿಕಾರಿಗಳು ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com