ಮೋದಿ ಹೊಗಳಿಕೆ: ಶಶಿ ತರೂರ್ ಸಮರ್ಥನೆಯನ್ನು ಒಪ್ಪಿದ ಕಾಂಗ್ರೆಸ್, ಯಾವುದೇ ಕ್ರಮ ಇಲ್ಲ! 

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಕ್ಕೆ ಶಶಿ ತರೂರ್ ನೀಡಿದ್ದ ಸಮರ್ಥನೆಯನ್ನು ಕೇರಳ ಕಾಂಗ್ರೆಸ್ ಸಮಿತಿ ಒಪ್ಪಿದ್ದು, ಸಂಸದನ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಇರಲು ನಿರ್ಧರಿಸಿದೆ.
ಶಶಿ ತರೂರ್
ಶಶಿ ತರೂರ್

ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಕ್ಕೆ ಶಶಿ ತರೂರ್ ನೀಡಿದ್ದ ಸಮರ್ಥನೆಯನ್ನು ಕೇರಳ ಕಾಂಗ್ರೆಸ್ ಸಮಿತಿ ಒಪ್ಪಿದ್ದು, ಸಂಸದನ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಇರಲು ನಿರ್ಧರಿಸಿದೆ.

ಮೋದಿ ಸರಿಯಾದ ಕೆಲಸ ಮಾಡಿದಾಗ ಅದನ್ನು ಮೆಚ್ಚಬೇಕು ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ಕೇಳಿದ್ದ ಸಮಿತಿಗೆ ಶಶಿ ತರೂರ್ ಪತ್ರ ಬರೆದಿದ್ದರು. ಕೇರಳ ಕಾಂಗ್ರೆಸ್ ಅಧ್ಯಕ್ಷರು ಈ ಪತ್ರವನ್ನು ಅನುಮೋದಿಸಿದ್ದು, ಶಶಿ ತರೂರ್ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಇರಲು ನಿರ್ಧರಿಸಿದ್ದಾರೆ. 

ಶಶಿ ತರೂರ್- ಕಾಂಗ್ರೆಸ್ ಪ್ರದೇಶ ಸಮಿತಿಯ ನಡುವಿನ ತಿಕ್ಕಾಟ ರಾಜಕೀಯ ವಿರೋಧಿಗಳಿಗೆ ಆಹಾರವಾಗಿತ್ತು. ಇನ್ನು ಶಶಿ ತರೂರ್ ಅವರ ಮೋದಿ ಹೊಗಳಿಕೆಯನ್ನು ಕಾಂಗ್ರೆಸ್ ಪಕ್ಷದ ನಾಯಕರು ಖಂಡಿಸಿದ್ದರು. ಅಷ್ಟೇ ಅಲ್ಲದೇ ಕೆಪಿಸಿಸಿ ಮಾಜಿ ಅಧ್ಯಕ್ಷ ಕೆ.ಮುರಳೀಧರನ್ ಹಾಗೂ ಶಶಿ ತರೂರ್ ನಡುವೆ ವಾಗ್ವಾದ ನಡೆದಿತ್ತು.

ಕೇರಳ ಕಾಂಗ್ರೆಸ್ ಸಮಿತಿಗೆ ತೀಕ್ಷ್ಣ ಸ್ಪಷ್ಟನೆ ನೀಡಿದ್ದ ಶಶಿ ತರೂರ್, "ಮೋದಿ ಸರ್ಕಾರವನ್ನು ಲೋಕಸಭೆಯಲ್ಲಿ ವಿರೋಧಿಸುವುದಕ್ಕೆ ತಾವು ಶ್ರಮಿಸಿದ್ದ ಶೇ.10 ರಷ್ಟು ಬೇರೆ ಯಾರಾದರೂ ಮಾಡಿರುವ ನಾಯಕನ್ನು ತೋರಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್ ಅವರಿಗೆ ಶಶಿ ತರೂರ್ ನೇರಾ ನೇರ ಸವಾಲು ಹಾಕಿದ್ದರು. 

"ಪ್ರಗತಿಪರ, ಜಾತ್ಯಾತೀತ, ಉದಾರ ನಿಲುವುಗಳನ್ನು ಹೊಂದಿರುವ ಪಕ್ಷಗಳೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ತಮಗೂ ಬೇಕಿದೆ.  ಆದರೆ ಈ ರೀತಿಯಾಗಬೇಕೆಂದರೆ ಕಟ್ಟಾ ಕಾಂಗ್ರೆಸ್ ಬೆಂಬಲಿಗರನ್ನು ಆಕರ್ಷಿಸುವುದಷ್ಟೇ ಸಾಕಾಗುವುದಿಲ್ಲ. ಕಳೆದ 2 ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದವರ ವಿಶ್ವಾಸವನ್ನು ನಾವು ಮರಳಿ ಗಳಿಸಬೇಕಿದೆ. ಮೋದಿಯತ್ತ ಆಕರ್ಷಿತರಾಗುವಂತೆ ಮಾಡುತ್ತಿರುವ ಅಂಶದ ಬಗ್ಗೆ ನಾವು ಕೆಲಸ ಮಾಡಬೇಕಿದೆ. ಹಾಗಿದ್ದಲ್ಲಿ ಮಾತ್ರ ನಮ್ಮ ಟೀಕೆ ವಿಶ್ವಾಸಾರ್ಹತೆಯಿಂದ ಕೂಡಿರುತ್ತದೆ, ಇದನ್ನೇ ನಾನು ಹೇಳುತ್ತಿರುವುದು" ಎಂದು ಶಶಿ ತರೂರ್ ಪತ್ರದಲ್ಲಿ ಬರೆದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com