ಸಾರ್ವಜನಿಕವಾಗಿ ಮಹತ್ವದ ಘೋಷಣೆಗಳು ಬೇಡ: ಸಚಿವರಿಗೆ ಪ್ರಧಾನಿ 

ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಮಹತ್ವದ ಘೋಷಣೆಗಳನ್ನು ಮಾಡುವುದು ಬೇಡ ಎಂದು ಸಂಪುಟ ಸಹೋದ್ಯೋಗಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. 

Published: 29th August 2019 09:52 AM  |   Last Updated: 29th August 2019 09:52 AM   |  A+A-


Dont make tall claims in public, PM Modi tells ministers

ಸಾರ್ವಜನಿಕವಾಗಿ ಮಹತ್ವದ ಘೋಷಣೆಗಳು ಬೇಡ: ಸಚಿವರಿಗೆ ಪ್ರಧಾನಿ

Posted By : Srinivas Rao BV
Source : Online Desk

ನವದೆಹಲಿ: ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಮಹತ್ವದ ಘೋಷಣೆಗಳನ್ನು ಮಾಡುವುದು ಬೇಡ ಎಂದು ಸಂಪುಟ ಸಹೋದ್ಯೋಗಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. 

ಈಡೇರಿಸಲು ಸಾಧ್ಯವಿಲ್ಲದ ಭರವಸೆಗಳನ್ನು, ತಮ್ಮ ವ್ಯಾಪ್ತಿಗೆ ಬಾರದ ವಿಷಯಗಳ ಬಗ್ಗೆ ಭರವಸೆಗಳನ್ನು ನೀಡಬಾರದು ಎಂದು ಮೋದಿ ಹೇಳಿದ್ದಾರೆ. 

ಸಚಿವರು ಇತ್ತೀಚಿನ ದಿನಗಳಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ತಮ್ಮ ವ್ಯಾಪ್ತಿಗೆ ಬಾರದ ವಿಷಯಗಳ ಬಗ್ಗೆ ಹೇಳಿಕೆ ನೀಡುತ್ತಿರುವುದರ ಬಗ್ಗೆ ಪ್ರಧಾನಿ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆಯೂ ಸಹ ಪ್ರಧಾನಿ ನರೇಂದ್ರ ಮೋದಿ ಸಚಿವರ ವಿವಾದಾತ್ಮಕ, ಸುದ್ದಿಗೆ ಗ್ರಾಸವಾಗುವ ಹೇಳಿಕೆಗಳ ಬಗ್ಗೆಯೂ ಪ್ರಧಾನಿ ಅಸಮಾಧಾನ ವ್ಯಕ್ತಪಡಿಸಿದ್ದರು. 

ಆರ್ಟಿಕಲ್ 370 ರದ್ದುಗೊಂಡಿರುವುದು ಪ್ರತಿಯೊಂದು ಸಚಿವಾಲಯಕ್ಕೂ ಸಂಬಂಧಪಟ್ಟ ವಿಷಯ, ಅಧಿಕಾರಿಗಳ ಮೂಲಕ ಸಚಿವರುಗಳು ಕಣಿವೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಬೇಕು ಆರ್ಟಿಕಲ್ 370 ರದ್ದತಿ ಹೇಗೆ ಬದಲಾವಣೆ ತರಲಿದೆ ಎಂಬುದನ್ನು ಜನತೆಗೆ ಮನವರಿಕೆ ಮಾಡಬೇಕು ಎಂದು ಪ್ರಧಾನಿ ಮೋದಿ ಸಚಿವರುಗಳಿಗೆ ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp