ಕಾಶ್ಮೀರ ವಿಷಯಕ್ಕಾಗಿ ರಾಜೀನಾಮೆ ನೀಡಿದ್ದ ಐಎಎಸ್ ಅಧಿಕಾರಿಗೆ ಮರಳಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ 

ಕಾಶ್ಮೀರ ವಿಷಯಕ್ಕಾಗಿ ರಾಜೀನಾಮೆ ನೀಡಿದ್ದ ಐಎಎಸ್ ಅಧಿಕಾರಿಗೆ ಮರಳಿ ಕರ್ತವ್ಯಕ್ಕೆ ಹಾಜರಾಗಲು ಕೇಂದ್ರ ಗೃಹ ಸಚಿವಲಾಯ ಸೂಚನೆ ನೀಡಿದೆ. 
ಕಣ್ಣನ್ ಗೋಪಿನಾಥನ್
ಕಣ್ಣನ್ ಗೋಪಿನಾಥನ್

ಕಾಶ್ಮೀರ ವಿಷಯಕ್ಕಾಗಿ ರಾಜೀನಾಮೆ ನೀಡಿದ್ದ ಐಎಎಸ್ ಅಧಿಕಾರಿಗೆ ಮರಳಿ ಕರ್ತವ್ಯಕ್ಕೆ ಹಾಜರಾಗಲು ಕೇಂದ್ರ ಗೃಹ ಸಚಿವಲಾಯ ಸೂಚನೆ ನೀಡಿದೆ. 

ಜಮ್ಮು-ಕಾಶ್ಮೀರ ಜನತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸಲಾಗಿದೆ ಎಂಬ ಕಾರಣ ನೀಡಿ 33 ವರ್ಷದ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ರಾಜೀನಾಮೆ ನೀಡಿದ್ದರು. ಕೇಂದ್ರಾಡಾಳಿತ ಪ್ರದೇಶಗಳಾದ ದಾಮನ್ ಡಿಯು, ದಾದ್ರಾ, ನಗರ್ ಹವೇಲಿಯ ಇಂಧನ ಇಲಾಖೆಯ ಕಾರ್ಯದರ್ಶಿಯಾಗಿದ್ದ ಗೋಪಿನಾಥನ್ ರಾಜೀನಾಮೆ ಇನ್ನಷ್ಟೇ ಅಂಗೀಕಾರವಾಗಬೇಕಿದ್ದು, ಅಲ್ಲಿಯವರೆಗೂ ಕರ್ತವ್ಯ ನಿರ್ವಹಿಸಬೇಕಾಗಿದ್ದು, ತಕ್ಷಣವೇ ಕೆಲಸಕ್ಕೆ ಹಾಜರಾಗಿ ಎಂದು ದಾಮನ್-ಡಿಯುವಿನ ಸಿಬ್ಬಂದಿ ಇಲಾಖೆ ಸೂಚನೆ ನೀಡಿದೆ. 

ಆ.27 ರಂದು ಗೋಪಿನಾಥನ್ ರಾಜೀನಾಮೆ ನೀಡಿದ್ದರು. ರಾಜೀನಾಮೆ ಅಂಗೀಕಾರವಾಗುವವರೆಗೂ ಕರ್ತವ್ಯಕ್ಕೆ ಹಾಜರಾಗಬೇಕೆಂದು ಆದೇಶ ನೀಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಲು ಗೋಪಿನಾಥನ್ ನಿರಾಕರಿಸಿದ್ದಾರೆ. 

ರಾಜೀನಾಮೆ ಪತ್ರದಲ್ಲಿ ಕಾಶ್ಮೀರದ ಕಾರಣವನ್ನು ಉಲ್ಲೇಖಿಸಿರಲಿಲ್ಲವಾದರೂ ನಂತರದ ಹೇಳಿಕೆಯಲ್ಲಿ ಕಾಶ್ಮೀರ ವಿಷಯದ ಬಗ್ಗೆ ಮಾತನಾಡಿ, ಕಾಶ್ಮೀರ ಜನತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನಿರಾಕರಣೆಯ ವಿರುದ್ಧವಾಗಿ ತಮ್ಮ ನಿಲುವನ್ನು ಪ್ರಕಟಿಸಿರುವುದಾಗಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com