ತಮಿಳುನಾಡಿನಲ್ಲಿ ಎನ್ ಐಎ ದಾಳಿ: ಲ್ಯಾಪ್ ಟಾಪ್, ಪೆನ್ ಡ್ರೈವ್ ಗಳು ವಶ

ತಮಿಳುನಾಡಿನ 5 ಸ್ಥಳಗಳಲ್ಲಿ ಎನ್ ಐಎ ದಾಳಿ ನಡೆದಿದ್ದು, ಲ್ಯಾಪ್ ಟಾಪ್, ಪೆನ್ ಡ್ರೈವ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. 

Published: 29th August 2019 11:08 AM  |   Last Updated: 29th August 2019 11:08 AM   |  A+A-


NIA raids five locations in Coimbatore, seizes laptops

ತಮಿಳುನಾಡಿನಲ್ಲಿ ಎನ್ ಐಎ ದಾಳಿ: ಲ್ಯಾಪ್ ಟಾಪ್, ಪೆನ್ ಡ್ರೈವ್ ಗಳು ವಶ

Posted By : Srinivas Rao BV
Source : The New Indian Express

ಚೆನ್ನೈ: ತಮಿಳುನಾಡಿನ 5 ಸ್ಥಳಗಳಲ್ಲಿ ಎನ್ ಐಎ ದಾಳಿ ನಡೆದಿದ್ದು, ಲ್ಯಾಪ್ ಟಾಪ್, ಪೆನ್ ಡ್ರೈವ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಲಷ್ಕರ್ ಸಂಘಟನೆಯ ಉಗ್ರರು ಪಾಕಿಸ್ತಾನದಿಂದ ಶ್ರೀಲಂಕಾ ಮೂಲಕ ಭಾರತದೊಳಗೆ ನುಸುಳಿರುವುದರ ಬಗ್ಗೆ ಮಾಹಿತಿ ಪಡೆದ ಎನ್ಐಎ ತಂಡ ಕೊಯಮತ್ತೂರು ಜಿಲ್ಲೆ ಸೇರಿದಂತೆ 5 ಪ್ರದೇಶಗಳಲ್ಲಿ ಎನ್ ಐಎ ದಾಳಿ ನಡೆಸಿದ್ದು ಈ ವರೆಗೂ ಹಲವು ಲ್ಯಾಪ್ ಟಾಪ್, ಪೆನ್ ಡ್ರೈವ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಧಾರ್ಮಿಕ ಹಾಗೂ ಇನ್ನಿತರ ಜನಸಂದಣಿ ಇರುವ ಪ್ರದೇಶಗಳಲ್ಲಿ ಉಗ್ರ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಇತ್ತೀಚೆಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಆಧಾರದಲ್ಲಿ ಎನ್ಐಎ ದಾಳಿ ನಡೆದಿದೆ.
 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp