'ಕಾಶ್ಮೀರ ನಮ್ಮದು' ಶಾಹಿದ್ ಆಫ್ರಿದಿ ಟ್ವೀಟ್‌ಗೆ ಟಾಂಗ್ ಕೊಟ್ಟ ಗೌತಮ್ ಹೇಳಿದ್ದೇನು?

ಕಾಶ್ಮೀರ ನಮ್ಮದು ಎಂದು ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಮಾಡಿದ್ದ ಟ್ವೀಟ್ ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಟಾಂಗ್ ಕೊಟ್ಟಿದ್ದಾರೆ.
ಶಾಹಿದ್ ಆಫ್ರಿದಿ-ಗೌತಮ್ ಗಂಭೀರ್
ಶಾಹಿದ್ ಆಫ್ರಿದಿ-ಗೌತಮ್ ಗಂಭೀರ್

ನವದೆಹಲಿ: ಕಾಶ್ಮೀರ ನಮ್ಮದು ಎಂದು ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಮಾಡಿದ್ದ ಟ್ವೀಟ್ ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಟಾಂಗ್ ಕೊಟ್ಟಿದ್ದಾರೆ. 

ಶಾಹಿದ್ ತಮ್ಮ ಟ್ವೀಟ್ ನಲ್ಲಿ ದೇಶದ ಜನತೆಯಲ್ಲ ಪ್ರಧಾನಮಂತ್ರಿ ಕಾಶ್ಮೀರ್ ಅವರ್ ಕರೆಗೆ ಪ್ರತಿಕ್ರಿಯಿಸಬೇಕು. ನಾನು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಮಝರ್ ಇ ಕ್ವೈದ್ ಗೆ ಬರುತ್ತೇನೆ. ನಮ್ಮ ಕಾಶ್ಮೀರಿ ಸಹೋದರರೊಂದಿಗೆ ನಾವಿದ್ದೇವೆ ಎಂದು ತೋರಿಸಲು ನನ್ನ ಜೊತೆ ನೀವು ಸೇರಿಕೊಳ್ಳಿ. ಶೀಘ್ರದಲ್ಲೇ ಗಡಿ ನಿಯಂತ್ರಣ ರೇಖೆ(ಎಲ್ಒಸಿ)ಗೂ ಭೇಟಿ ನೀಡಲಿದ್ದೇನೆ ಎಂದು ಟ್ವೀಟ್ ಮಾಡಿದ್ದರು.

ಶಾಹಿದ್ ಅವರ ಈ ಟ್ವೀಟ್ ನಿಂದ ಆಕ್ರೋಶಗೊಂಡಿರುವ ಗಂಭೀರ್ ಅವರು ಆಫ್ರಿದಿ ಫೋಟೋ ಟ್ವೀಟ್ ಮಾಡಿ, ಈ ಚಿತ್ರದಲ್ಲಿ ಶಾಹಿದ್ ಆಫ್ರಿದಿ ಮುಜುಗರಕ್ಕೊಳಗಾಗುವುದಕ್ಕೆ ಏನು ಮಾಡಬೇಕು ಎಂದು ಶಾಹಿದ್ ರನ್ನೇ ಕೇಳುತ್ತಿದ್ದಾನೆ. ಇದರಿಂದ ಶಾಹಿದ್ ಪ್ರಬುದ್ಧನಾಗಲು ನಿರಾಕರಿಸಿದ್ದಾನೆ ಎಂಬುದರ ಬಗ್ಗೆ ನನಗಿದ್ದ ಅನುಮಾನಗಳು ಖಚಿತವಾಗಿವೆ. ಆತ ಪ್ರಬುದ್ಧನಾಗಲು ಆನ್ ಲೈನ್ ಶಿಶು ವಿಹಾರದ ಟ್ಯುಟೋರಿಯಲ್ ಗೆ ಸೇರಿಕೊಳ್ಳುವಂತೆ ಆದೇಶಿಸುತ್ತೇನೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com