ಆರ್ಟಿಕಲ್ 370 ರದ್ದಾಗಿನಿಂದ 222 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿರುವ ಪಾಕಿಸ್ತಾನ! 

ಆರ್ಟಿಕಲ್ 370 ರದ್ದಾಗಿನಿಂದ ಭಾರತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಪಾಕಿಸ್ತಾನ ಈ ವರೆಗೂ ಬರೊಬ್ಬರಿ 222 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. 

Published: 30th August 2019 08:51 AM  |   Last Updated: 30th August 2019 08:51 AM   |  A+A-


222 ceasefire violations by Pakistan since Centre's scrapping of Article 370 in J&K

ಆರ್ಟಿಕಲ್ 370 ರದ್ದಾಗಿನಿಂದ 222 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿರುವ ಪಾಕಿಸ್ತಾನ!

Posted By : Srinivas Rao BV
Source : PTI

ಶ್ರೀನಗರ: ಆರ್ಟಿಕಲ್ 370 ರದ್ದಾಗಿನಿಂದ ಭಾರತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಪಾಕಿಸ್ತಾನ ಈ ವರೆಗೂ ಬರೊಬ್ಬರಿ 222 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. 

ಆ.05 ರಿಂದ ನಿರಂತರವಾಗಿ ಪಾಕಿಸ್ತಾನ ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಈ ಮೂಲಕ ಪಾಕಿಸ್ತಾನ ಒಂದು ವರ್ಷದಲ್ಲಿ ಬರೊಬ್ಬರಿ 1,900 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದಂತಾಗಿದೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬೆನ್ನಲ್ಲೇ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ್ದ 10 ಘಟನೆಗಳು ನಡೆದಿದ್ದವು. 

ಕಾಶ್ಮೀರವನ್ನು ಅಂತಾರಾಷ್ಟ್ರೀಯ ವಿಷಯವನ್ನಾಗಿಸುವುದಕ್ಕೆ ಪಾಕಿಸ್ತಾನ ಯತ್ನಿಸುತ್ತಿದ್ದು ಭಾರತದೊಳಗೆ ನುಸುಳಲು ಭಯೋತ್ಪಾದಕರಿಗೆ ಸಹಕಾರ ನೀಡುತ್ತಿದೆ. ಮತ್ತೊಂದು ಕಡೆಯಿಂದ ಅಪ್ರಚೋದಿತ ಶೆಲ್ ದಾಳಿ ನಡೆಸುತ್ತಿದ್ದು, ಪಾಕಿಸ್ತಾನದಿಂದ ಭಯೋತ್ಪಾದಕರು ಒಳನುಸುಳಲು ಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp