ಕಾಶ್ಮೀರದಲ್ಲಿ ನಿಲ್ಲದ ಉಗ್ರರ ಅಟ್ಟಹಾಸ: ಅಂಗಡಿ ತೆರೆದಿದ್ದಕ್ಕೆ 65 ವರ್ಷದ ವೃದ್ಧನ ಹತ್ಯೆ! 

ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ನಂತರ ಉಗ್ರರ ದಾಳಿ ನಡೆದಿದ್ದು, ಶ್ರೀನಗರದಲ್ಲಿ 65 ವರ್ಷದ ವೃದ್ಧನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 

Published: 30th August 2019 07:35 AM  |   Last Updated: 30th August 2019 07:35 AM   |  A+A-


65-year-old shopkeeper killed by terrorists in Parimpora area of Srinagar, search underway

ಕಾಶ್ಮೀರದಲ್ಲಿ ನಿಲ್ಲದ ಉಗ್ರರ ಅಟ್ಟಹಾಸ: ಅಂಗಡಿ ತೆರೆದಿದ್ದಕ್ಕೆ 65 ವರ್ಷದ ವೃದ್ಧನ ಹತ್ಯೆ!

Posted By : Srinivas Rao BV
Source : PTI

ಶ್ರೀನಗರ: ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ನಂತರ ಉಗ್ರರ ದಾಳಿ ನಡೆದಿದ್ದು, ಶ್ರೀನಗರದಲ್ಲಿ 65 ವರ್ಷದ ವೃದ್ಧನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 

ಉಗ್ರರ ಗುಂಡೇಟಿಗೆ ಗುರಿಯಾದ ವೃದ್ಧ ವ್ಯಕ್ತಿಯನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಬದುಕಿ ಉಳಿಯಲಿಲ್ಲ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ. 

ಶ್ರೀನಗರದ ಹೊರಭಾಗದಲ್ಲಿರುವ ಪರಿಂಪೋರದಲ್ಲಿ ವೃದ್ಧ ವ್ಯಕ್ತಿಯೊಬ್ಬರು ಅಂಗಡಿಯನ್ನು ತೆರೆದಿದ್ದರು, ಇದೇ ಕಾರಣಕ್ಕಾಗಿ ಉಗ್ರರು ಆತನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.  ಇದಕ್ಕೂ ಮುನ್ನ ಅನಂತ್ ನಾಗ್ ಜಿಲ್ಲೆಯಲ್ಲಿ ಟ್ರಕ್ ಡ್ರೈವರ್ ನ್ನು ಗುರಿಯಾಗಿರಿಸಿಕೊಂಡು ಕಲ್ಲು ಹೊಡೆದು ಹತ್ಯೆ ಮಾಡಲಾಗಿತ್ತು. ಈಗ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕಾಶ್ಮೀರಕ್ಕೆ ಪರಿಸ್ಥಿತಿ ಪರಿಶೀಲನೆಗೆ ತೆರಳುತ್ತಿರುವುದಕ್ಕೂ ಮುನ್ನ ಓರ್ವ ನಾಗರಿಕನನ್ನು ಹತ್ಯೆ ಮಾಡಲಾಗಿದೆ. 

Stay up to date on all the latest ರಾಷ್ಟ್ರೀಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp