ಭೀಕರ ದೃಶ್ಯ: ಸಾಯುವ ಮುನ್ನ ಬಿಯರ್ ಬಾಟಲ್‌ನಲ್ಲಿ ತನ್ನ ರಕ್ತ ತುಂಬಿ ಕೊನೆಯ ಗಿಫ್ಟ್ ಕೊಟ್ಟ ಪಾಗಲ್ ಪ್ರೇಮಿ!

ಪ್ರಿಯೆ ನೀನಿಲ್ಲದೆ ನಾನು ಬದುಕಲಾರೆ ಎಂದು ಪಾಗಲ್ ಪ್ರೇಮಿಯೊಬ್ಬ ತನ್ನ ಕೈ ಮಣಿಕಟ್ಟನ್ನು ಕತ್ತರಿಸಿಕೊಂಡು ಬಿಯರ್ ಬಾಟಲ್ ನಲ್ಲಿ ತನ್ನ ರಕ್ತವನ್ನು ತುಂಬಿ ಅದನ್ನು ತನ್ನ ಪ್ರಿಯತಮೆಗೆ ತಲುಪಿಸಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

Published: 30th August 2019 11:37 AM  |   Last Updated: 30th August 2019 11:46 AM   |  A+A-


for representation purpose only

ಸಂಗ್ರಹ ಚಿತ್ರ

Posted By : Vishwanath S
Source : Online Desk

ಚೆನ್ನೈ: ಪ್ರಿಯೆ ನೀನಿಲ್ಲದೆ ನಾನು ಬದುಕಲಾರೆ ಎಂದು ಪಾಗಲ್ ಪ್ರೇಮಿಯೊಬ್ಬ ತನ್ನ ಕೈ ಮಣಿಕಟ್ಟನ್ನು ಕತ್ತರಿಸಿಕೊಂಡು ಬಿಯರ್ ಬಾಟಲ್ ನಲ್ಲಿ ತನ್ನ ರಕ್ತವನ್ನು ತುಂಬಿ ಅದನ್ನು ತನ್ನ ಪ್ರಿಯತಮೆಗೆ ತಲುಪಿಸಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಚೆನ್ನೈನಲ್ಲಿ ಈ ಘಟನೆ ನಡೆದಿದ್ದು ಮಂಗಳವಾರ ರಾತ್ರಿ ತನ್ನ ಸ್ನೇಹಿತನ ಜೊತೆ ಬಾರ್ ಗೆ ತೆರಳಿದ್ದ ಪಾಗಲ್ ಪ್ರೇಮಿಯೊಬ್ಬ. ತಾನು ಪ್ರೀತಿಸುತ್ತಿರುವ ಹುಡುಗಿ ತನ್ನ ಮೊಬೈಲ್ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ತನ್ನನ್ನು ಬ್ಲಾಕ್ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. 

ನಾನು ಎಷ್ಟೇ ಪ್ರಯತ್ನ ಪಟ್ಟರು ಆಕೆಯನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ರೋದಿಸಿದ್ದಾನೆ. ನಂತರ ಅಲ್ಲಿದ್ದ ಬಿಯರ್ ಬಾಟಲ್ ಅನ್ನು ಹೊಡೆದು ಅದರಿಂದ ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡು ಅದನ್ನು ಖಾಲಿಯಿದ್ದ ಬಿಯರ್ ಬಾಟಲ್ ಗೆ ತುಂಬಿದ್ದಾನೆ. ಈ ವೇಳೆ ಆತನನ್ನು ತಡೆಯಲು ಪ್ರಯತ್ನಿಸಿದಾಗ ಆತ ಒಡೆದ ಬಿಯರ್ ಬಾಟಲ್ ಅನ್ನು ತನ್ನ ಕುತ್ತಿಗೆಯ ಹತ್ತಿರ ಹಿಡಿದು ತನ್ನನ್ನು ತಡೆಯಲು ಬಂದರೆ ನಾನು ಕತ್ತನ್ನು ಕತ್ತರಿಸಿಕೊಳ್ಳುತ್ತೇನೆ ಎಂದು ಹೆದರಿಸಿದ್ದಾನೆ. ಬಾಟಲ್ ತುಂಬಿದ ನಂತರ ಅದನ್ನು ತನ್ನ ಪ್ರೇಯಸಿಗೆ ನೀಡುವಂತೆ ತಿಳಿಸಿದ್ದಾನೆ. 

ದೇಹದಲ್ಲಿ ರಕ್ತ ಕಡಿಮೆಯಾಗುತ್ತಿದ್ದಂತೆ ಪಾಗಲ್ ಪ್ರೇಮಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp