ತೆಲಂಗಾಣ; ಲೈಂಗಿಕತೆಗೆ ಸಹಕರಿಸದ್ದಕ್ಕೆ 10ನೇ ತರಗತಿ ಬಾಲಕಿಯನ್ನು ಕೊಂದ 'ಫೇಸ್ ಬುಕ್' ಗೆಳೆಯ

ಫೇಸ್ ಬುಕ್ ನಲ್ಲಿ ಪರಿಚಯವಾಗಿ ಸ್ನೇಹಿತರಾಗಿದ್ದ 15 ವರ್ಷದ 10ನೇ ತರಗತಿಯ ಬಾಲಕಿಯನ್ನು ವೈ ನವೀನ್ ರೆಡ್ಡಿ ಎಂಬಾತ ಹತ್ಯೆ ಮಾಡಿರುವ ಘಟನೆ ಮಹಬೂಬ್ ನಗರ ಜಿಲ್ಲೆಯ ಶಂಕರಪಳ್ಳಿ ತಾಂಡಾದಲ್ಲಿ ನಡೆದಿದೆ.
 

Published: 30th August 2019 11:13 AM  |   Last Updated: 30th August 2019 11:13 AM   |  A+A-


Women take out a candle light vigil in Shankarpally on Thursday to pay tributes to the girl who was murdered by her Facebook friend

ಬಾಲಕಿಯ ಹತ್ಯೆ ಖಂಡಿಸಿ ಮಹಿಳೆಯರಿಂದ ಮೋಂಬತ್ತಿ ಪ್ರತಿಭಟನೆ

Posted By : Sumana Upadhyaya
Source : The New Indian Express

ಮಹಬೂಬ್ ನಗರ(ತೆಲಂಗಾಣ): ಫೇಸ್ ಬುಕ್ ನಲ್ಲಿ ಪರಿಚಯವಾಗಿ ಸ್ನೇಹಿತರಾಗಿದ್ದ 15 ವರ್ಷದ 10ನೇ ತರಗತಿಯ ಬಾಲಕಿಯನ್ನು ವೈ. ನವೀನ್ ರೆಡ್ಡಿ ಎಂಬಾತ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಮಹಬೂಬ್ ನಗರ ಜಿಲ್ಲೆಯ ಶಂಕರಪಳ್ಳಿ ತಾಂಡಾದಲ್ಲಿ ನಡೆದಿದೆ.


ಬಾಲಕಿ ಹರ್ಷಿಣಿಯ ಮನೆಯಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಆಕೆಯ ಶವ ಸಿಕ್ಕಿದೆ. ಲೈಂಗಿಕ ಬಯಕೆಯನ್ನು ಹರ್ಷಿಣಿ ಪೂರೈಸಲಿಲ್ಲ ಎಂಬ ಕಾರಣಕ್ಕೆ ನವೀನ್ ಹತ್ಯೆ ಮಾಡಿದ್ದಾನೆ.


ನಡೆದ ಘಟನೆಯೇನು?: 28 ವರ್ಷದ ಕೊಹೆಡಾ ಗ್ರಾಮದ ನವೀನ್ ರೆಡ್ಡಿ ಹೈದರಾಬಾದ್ ನಲ್ಲಿ ವರ್ಕ್ ಶಾಪ್ ನಡೆಸುತ್ತಿದ್ದ. ಫೇಸ್ ಬುಕ್ ನಲ್ಲಿ ಇಬ್ಬರೂ ಪರಿಚಯವಾದರು, ಹರ್ಷಿಣಿ ಹೆಸರನ್ನು ಅನ್ವಿಕ ಅನ್ವಿ ಎಂದು ಮತ್ತು ನವೀನ್ ಬನ್ನಿ ರೆಡ್ಡಿ ಎಂದು ಫೇಸ್ ಬುಕ್ ನಲ್ಲಿ ನಕಲಿ ಹೆಸರು ಇಟ್ಟುಕೊಂಡಿದ್ದರು. ಪರಿಚಯ ಸ್ನೇಹವಾಗಿ ಬೆಳೆಯಿತು, ಫೋನ್ ನಲ್ಲಿಯೂ ಮಾತನಾಡಿಕೊಳ್ಳುತ್ತಿದ್ದರು. ದಿನಗಳು ಕಳೆಯುತ್ತಾ ಹೋದಂತೆ ನವೀನ್ ಹರ್ಷಿಣಿಗೆ ಲೈಂಗಿಕತೆಗೆ ಒತ್ತಾಯಿಸುತ್ತಾನೆ. ಆಕೆ ನಿರಾಕರಿಸಿದಾಗ ಕಿರುಕುಳ ನೀಡಲು ಆರಂಭಿಸುತ್ತಾನೆ. 


ಒಂದು ದಿನ ಮನೆಯಿಂದ ದೂರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡ ಹೋದ ನವೀನ್ ಹರ್ಷಿಣಿ ಮೇಲೆ ಹಲ್ಲೆ ಮಾಡಿ ತಲೆಯನ್ನು ಬಂಡೆಕಲ್ಲಿಗೆ ಹೊಡೆದು ಕೊಂದಿದ್ದಾನೆ.


ಹರ್ಷಿಣಿಯ ಪೋಷಕರು ಜಡ್ ಚೆರ್ಲಾ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದರು, ಪೊಲೀಸರು ತನಿಖೆ ಕೈಗೊಂಡಾಗ ಹರ್ಷಿಣಿ ನವೀನ್ ರೆಡ್ಡಿ ಜೊತೆ ಸ್ನೇಹ ಹೊಂದಿದ್ದದ್ದು ಬೆಳಕಿಗೆ ಬಂದಿತು. ಕಳೆದ ಬುಧವಾರ ರಾತ್ರಿ ಪೊಲೀಸರು ಹಯತ್ ನಗರ್ ನಲ್ಲಿ ನವೀನ್ ನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದರು. 


ವಿಚಾರಣೆ ವೇಳೆ ಹರ್ಷಿಣಿಯನ್ನು ಕೊಲೆ ಮಾಡಿರುವುದಾಗಿ ನವೀನ್ ರೆಡ್ಡಿ ಒಪ್ಪಿಕೊಂಡನು.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp