22 ದಿನ ಆಯ್ತು, ಕಾಶ್ಮೀರದಲ್ಲಿರುವ ಅತ್ತೆ, ಮಾವ ಹೇಗಿದ್ದಾರೋ ಗೊತ್ತಿಲ್ಲ: ಊರ್ಮಿಳಾ ಮಾತೋಂಡ್ಕರ್ ವೇದನೆ

ಕಣಿವೆಯಲ್ಲಿ 370ನೇ ವಿಧಿಯನ್ನು ರದ್ದುಪಡಿಸಿ ಕೆಲ ನಿರ್ಬಂಧ ಹಾಕಿದ ನಂತರ ಕಳೆದ 22 ದಿನಗಳಿಂದ ತಂದೆ, ತಾಯಿ ಜೊತೆ ನನ್ನ ಪತಿ ಮಾತನಾಡಿಲ್ಲ ಎಂಬ ವೇದನೆಯನ್ನು ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಹೊರ ಹಾಕಿದ್ದಾರೆ
ಊರ್ಮಿಳಾ ಮಾತೋಂಡ್ಕರ್
ಊರ್ಮಿಳಾ ಮಾತೋಂಡ್ಕರ್

ನವದೆಹಲಿ: ಕಣಿವೆಯಲ್ಲಿ 370ನೇ ವಿಧಿಯನ್ನು ರದ್ದುಪಡಿಸಿ ಕೆಲ ನಿರ್ಬಂಧ ಹಾಕಿದ ನಂತರ ಕಳೆದ 22 ದಿನಗಳಿಂದ ತಂದೆ, ತಾಯಿ ಜೊತೆ ನನ್ನ ಪತಿ ಮಾತನಾಡಿಲ್ಲ ಎಂಬ ವೇದನೆಯನ್ನು ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಹೊರ ಹಾಕಿದ್ದಾರೆ.

ಇಂಟರ್ ನೆಟ್ ನಿರ್ಬಂಧದ ಕಾರಣ ಕಳೆದ 22 ದಿನಗಳಿಂದ ಕಾಶ್ಮೀರದಲ್ಲಿ ವಾಸವಾಗಿರುವ ತನ್ನ ಹೆತ್ತವರೊಂದಿಗೆ ಮಾತನಾಡಲು ಪತಿಗೆ ಸಾಧ್ಯವಾಗುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ರಾಜ್ಯಪಾಲ ಮಲಿಕ್ ವಿದೇಶದಲ್ಲಿ ಇರುವ ಮಗನ ಜೊತೆ ಮಾತನಾಡಲು ಆಗುತ್ತಿಲ್ಲ ಎಂದು ಪತ್ರಿಕೆಯೊಂದಿಗೆ ನೋವು, ಸಂಕಟ ತೋಡಿಕೊಂಡ ಬಳಿಕ ನಟಿಯ ಸಂಕಟವೂ ಹೊರಬಿದ್ದಿದೆ.

"370 ನೇ ವಿಧಿಯನ್ನು ರದ್ದುಗೊಳಿಸಿದ್ದು ಪ್ರಶ್ನೆಯಲ್ಲ, ಆದರೆ ಅದನ್ನು ಅಮಾನವೀಯ ರೀತಿಯಲ್ಲಿ ರದ್ದುಗೊಳಿಸಿದ್ದರ ಬಗ್ಗೆ ಆಕ್ಷೇಪವಿದೆ. ನನ್ನ ಅತ್ತೆ ಮತ್ತು ಮಾವ ಕಾಶ್ಮೀರದಲ್ಲಿ ವಾಸವಿದ್ದಾರೆ. ಇಬ್ಬರೂ ಮಧುಮೇಹಿಗಳು. ಇಂದಿಗೆ ಸರಿಯಾಗಿ 22 ದಿನವಾಯಿತು. ನನಗಾಗಲೀ, ನನ್ನ ಪತಿಗಾಗಲೀ ಅವರೊಂದಿಗೆ ಮಾತನಾಡಲು ಸಾಧ್ಯವಾಗಿಲ್ಲ. ಅವರಿಗೆ ಮನೆಯಲ್ಲಿ ಔಷಧವಾದರೂ ಇದೆಯಾ, ಇಲ್ಲವಾ ಎಂಬ ಮಾಹಿತಿಯೂ ನಮಗಿಲ್ಲ. ಹೀಗಾದರೆ ಜನರು ಬದುಕುವುದು ಹೇಗೆ?" ಎಂದು ಅವರು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com