ಪ್ರಧಾನಿ ಮೋದಿ ವಿರುದ್ಧ ಮಾತನಾಡುತ್ತಿದ್ದ ಪಾಕ್ ಸಚಿವನಿಗೆ ವಿದ್ಯುತ್ ಶಾಕ್!

ಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡುತ್ತಿದ್ದ ಪಾಕಿಸ್ತಾನ ರೈಲ್ವೆ ಸಚಿವ ಶೇಕ್ ರಶೀದ್ ಅಹ್ಮದ್ ಗೆ ವಿದ್ಯುತ್ ಶಾಕ್ ತಗುಲಿರುವ ಘಟನೆ ಇಂದು ನಡೆದಿದೆ.ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Published: 30th August 2019 08:29 PM  |   Last Updated: 30th August 2019 08:43 PM   |  A+A-


Pakistan Minister

ಪಾಕಿಸ್ತಾನದ ಸಚಿವ

Posted By : Nagaraja AB
Source : PTI

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡುತ್ತಿದ್ದ ಪಾಕಿಸ್ತಾನ ರೈಲ್ವೆ ಸಚಿವ ಶೇಕ್ ರಶೀದ್ ಅಹ್ಮದ್ ಗೆ ವಿದ್ಯುತ್ ಶಾಕ್ ತಗುಲಿರುವ ಘಟನೆ ಇಂದು ನಡೆದಿದೆ.ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನರೇಂದ್ರ ಮೋದಿ ನಿಮ್ಮ ಉದ್ದೇಶ ನಮಗೆ ಗೊತ್ತಿದೆ ಎಂದು ಹೇಳಿದ ಕ್ಷಣಾರ್ಧದಲ್ಲೇ  ಶೇಕ್ ರಶೀದ್ ಅಹ್ಮದ್ ಗೆ ವಿದ್ಯುತ್ ಶಾಕ್ ತಗುಲಿದೆ. ತದ ನಂತರ ಚೇತರಿಸಿಕೊಂಡಿದ್ದು ಮಾತನಾಡಿದ ಅವರು,  ವಿದ್ಯುತ್ ಶಾಕ್ ತಗುಲಿತ್ತು.  ಏನೂ ಆಗಿಲ್ಲ.  ಪ್ರಧಾನಿ ನರೇಂದ್ರ ಮೋದಿ ಈ ಸಭೆಯನ್ನು ವಿಫಲಗೊಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಮುಂದಿನ ತಿಂಗಳು ಅಥವಾ ಅಕ್ಟೋಬರ್ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಪೂರ್ಣ ಪ್ರಮಾಣದಲ್ಲಿ ಯುದ್ಧ ನಡೆಯಲಿದೆ ಎಂದು ಇದೇ ಸಚಿವ ಆಗಸ್ಟ್ 28 ರಂದು ಹೇಳಿಕೆ ನೀಡಿದ್ದ.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತದ ಮೇಲೆ ಪರಮಾಣು ದಾಳಿಯ ಬೆದರಿಕೆ ವೊಡ್ಡಿದ  ಎರಡು ದಿನದ ನಂತರ ರಾವಲ್ಪಿಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಶೀದ್ ಅಹ್ಮದ್,  ಕಾಶ್ಮೀರ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸಬೇಕಾಗಿದೆ. ಇದು ಉಭಯ ದೇಶಗಳ ನಡುವಣ ಕೊನೆಯ ಯುದ್ಧವಾಗಿದೆ ಎಂದು ಹೇಳಿಕೆ ನೀಡುವ ಮೂಲಕ ಭಾರತೀಯರಲ್ಲಿ ಆಕ್ರೋಶ ಹುಟ್ಟುಹಾಕಿತ್ತು. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp