ಏಟಿಗೆ ಎದುರೇಟು; ಗುರ್ಗಾಂವ್ ಟೋಲ್ ಪ್ಲಾಜಾದಲ್ಲಿ ಕೈ ಕೈ ಮಿಲಾಯಿಸಿಕೊಂಡ ಪ್ರಯಾಣಿಕ ಮತ್ತು ಮಹಿಳಾ ಸಿಬ್ಬಂದಿ 

ಟೋಲ್ ತೆರಿಗೆ ಕೊಡದೆ ಹೋಗಲು ಬಿಡದ ಮಹಿಳಾ ಟೋಲ್ ಸಿಬ್ಬಂದಿ ಮೇಲೆ ಗ್ರಾಹಕರೊಬ್ಬರು ಹಲ್ಲೆ ನಡೆಸಿದ ಘಟನೆ ಗುರ್ಗಾಂವ್ ನಲ್ಲಿ ನಡೆದಿದೆ.  
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೊ
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೊ

ಗುರ್ಗಾಂವ್: ಟೋಲ್ ತೆರಿಗೆ ಪಾವತಿಸದ ಪ್ರಯಾಣಿಕ ಮಹಿಳಾ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಕ್ಕೆ ಸಿಬ್ಬಂದಿ ಪ್ರತಿ ಹಲ್ಲೆ ನಡೆಸಿದ್ದು ಅದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 


ನಡೆದ ಘಟನೆಯೇನು: ಗುರ್ಗಾಂವ್ ನಗರದಿಂದ 39 ಕಿಲೋ ಮೀಟರ್ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 8ರಲ್ಲಿ ಕೆರ್ಕಿ ದೌಲಾ ಟೋಲ್ ಪ್ಲಾಸಾದಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿ ಹೈವೇ ಮೇಲೆ ಬಂದ ವ್ಯಕ್ತಿ ಬಳಿ ತೆರಿಗೆ ಕಟ್ಟಿ ಎಂದು ಮಹಿಳಾ ಸಿಬ್ಬಂದಿ ಕೇಳಿದ್ದಾರೆ. ಆಗ ಸಿಟ್ಟಿಗೆದ್ದ ಪ್ರಯಾಣಿಕ ಕಾರಿನಿಂದ ಇಳಿದು ಸ್ಲೈಡಿಂಗ್ ಕಿಟಕಿ ಮೂಲಕ ಒಳಗಿದ್ದ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದರು. 

ಕುಳಿತಲ್ಲಿಂದ ಎದ್ದ ಮಹಿಳಾ ಸಿಬ್ಬಂದಿ ಪ್ರತಿಯಾಗಿ ಪ್ರಯಾಣಿಕನ ಮೇಲೆ ಹೊಡೆದಿದ್ದಾರೆ. ಅಷ್ಟಕ್ಕೇ ವಾಗ್ಯುದ್ಧ ನಿಲ್ಲದಾಗ ಮಹಿಳೆ ರೂಂನಿಂದ ಹೊರಗೆ ಬಂದು ವ್ಯಕ್ತಿ ಮೇಲೆ ಹೊಡೆಯಲು ಮುಂದಾದರು. 

ಅಲ್ಲಿದ್ದ ಪುರುಷ ಸಿಬ್ಬಂದಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು. ಕೂಡಲೇ ಪ್ರಯಾಣಿಕನ ಮೇಲೆ ಪೊಲೀಸರಿಗೆ ದೂರು ನೀಡಲಾಯಿತು. ಸ್ಥಳಕ್ಕೆ ಬಂದ ಪೊಲೀಸರು ವ್ಯಕ್ತಿಯನ್ನು ಬಂಧಿಸಿ ಕೇಸು ದಾಖಲಿಸಿದ್ದಾರೆ. 

ಈ ಹೆದ್ದಾರಿ ಅತ್ಯಂತ ವಾಹನ ದಟ್ಟಣೆಯ ಚತುಷ್ಪಥ ರಸ್ತೆಯಾಗಿದೆ. ಈ ರಸ್ತೆ ಜೈಪುರ ಮತ್ತು ಪಶ್ಚಿಮ ಭಾಗದ ಇತರ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com