ಭಾರತೀಯ ಸೇನೆಗೆ ಜಮ್ಮು-ಕಾಶ್ಮೀರದ 575 ಯುವಕರು; ತಾಯ್ನಾಡಿಗೆ ಸೇವೆ ಸಲ್ಲಿಸಲು ಪ್ರತಿಜ್ಞೆ! 

ಭಾರತೀಯ ಸೇನೆಗೆ ಜಮ್ಮು-ಕಾಶ್ಮೀರದ 575 ಯುವಕರು ಆ.31 ರಂದು ಸೇರ್ಪಡೆಯಾಗಿದ್ದು, ದೇಶ ಸೇವೆ ಮಾಡಲು ಪ್ರತಿಜ್ಞೆ ಕೈಗೊಂಡಿದ್ದಾರೆ. 

Published: 31st August 2019 03:13 PM  |   Last Updated: 31st August 2019 03:13 PM   |  A+A-


575 youth from Jammu and Kashmir join Indian Army, vow to serve motherland

ಭಾರತೀಯ ಸೇನೆ ಸೇರಿದ ಜಮ್ಮು-ಕಾಶ್ಮೀರದ ಯುವಕರು

Posted By : Srinivas Rao BV
Source : PTI

ಶ್ರೀನಗರ: ಭಾರತೀಯ ಸೇನೆಗೆ ಜಮ್ಮು-ಕಾಶ್ಮೀರದ 575 ಯುವಕರು ಆ.31 ರಂದು ಸೇರ್ಪಡೆಯಾಗಿದ್ದು, ದೇಶ ಸೇವೆ ಮಾಡಲು ಪ್ರತಿಜ್ಞೆ ಕೈಗೊಂಡಿದ್ದಾರೆ. 

ಜಮ್ಮು-ಕಾಶ್ಮೀರದ ಲೈಟ್ ಇನ್ಫ್ಯಾಂಟ್ರಿಗೆ ಸೇರ್ಪಡೆಗೊಂಡಿದ್ದು, ದೇಶಸೇವೆ ಮಾಡುವುದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ. ಇನ್ನು ಮಕ್ಕಳನ್ನು ದೇಶಸೇವೆಗೆ ಕಳಿಸುತ್ತಿರುವುದು ತಮಗೂ ಕೂಡ ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ. 

ಈ ಭಾಗದಲ್ಲಿ ಇನ್ನೂ ಹಲವು ಸುತ್ತಿನ ನೇಮಕಾತಿಗಳು ನಡೆಯಲಿವೆ, ಇದು ಜಮ್ಮು-ಕಾಶ್ಮೀರ ಬದಲಾವಣೆಯಾಗುತ್ತಿರುವ ಸೂಚನೆ, ಜೀವನದಲ್ಲಿ ಮುಂದೆ ಬರುವವರಿಗೆ ಭಾರತೀಯ ಸೇನೆ ಎಂದಿಗೂ ಜೊತೆ ನಿಲ್ಲಲಿದೆ ಎಂದು ಲೆಫ್ಟಿನೆಂಟ್ ಜನರಲ್ ಅಶ್ವಿನಿ ಕುಮಾರ್ ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp