ಇದೊಂದು ಅಕ್ರಮ ವಲಸಿಗರ ಪುರಾಣ: ಎನ್‌ಆರ್‌ಸಿ ಬಗ್ಗೆ ಓವೈಸಿ ಹೇಳಿದ್ದಿಷ್ಟು

ಹಿಂದೂ ಹಾಗೂ ಮುಸ್ಲಿಮರೆಂಬ ವಿಚಾರದಲ್ಲಿ  ದೇಶಾದ್ಯಂತ ಎನ್‌ಆರ್‌ಸಿಯನ್ನು ಕೇಳುವುದನ್ನು ನಿಲ್ಲಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ರಾಷ್ಟ್ರೀಯ ನಾಗರಿಕರ ನೋಂದಣಿ  (ಎನ್‌ಆರ್‌ಸಿ) ಬಗೆಗೆ ಬಿಜೆಪಿಯನ್ನು ದೂಷಿಸಿದ ಓವೈಸಿ ಅಲ್ಲದೆ ಇದೊಂದು "ಅಕ್ರಮ ವಲಸಿಗರ ಪುರಾಣ" ಎಂದು ಜರಿದಿದ್ದಾರೆ. 
ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ

ಹೈದರಾಬಾದ್: ಹಿಂದೂ ಹಾಗೂ ಮುಸ್ಲಿಮರೆಂಬ ವಿಚಾರದಲ್ಲಿ  ದೇಶಾದ್ಯಂತ ಎನ್‌ಆರ್‌ಸಿಯನ್ನು ಕೇಳುವುದನ್ನು ನಿಲ್ಲಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ರಾಷ್ಟ್ರೀಯ ನಾಗರಿಕರ ನೋಂದಣಿ  (ಎನ್‌ಆರ್‌ಸಿ) ಬಗೆಗೆ ಬಿಜೆಪಿಯನ್ನು ದೂಷಿಸಿದ ಓವೈಸಿ ಇದೊಂದು "ಅಕ್ರಮ ವಲಸಿಗರ ಪುರಾಣ" ಎಂದು ಜರಿದಿದ್ದಾರೆ.

"ಅಸ್ಸಾಂನಲ್ಲಿ ಏನಾಗಿದೆ ಎನ್ನುವುದನ್ನು ನೋಡಿ ಅವರು ಕಲಿಯಬೇಕು. ಅದೊಂದು ಅಕ್ರಮ ವಲಸಿಗರ ಪುರಾಣದ ಕಂತೆ. "ನಾಗರಿಕ ತಿದ್ದುಪಡಿ ಮಸೂದೆಯ ಮೂಲಕ ಬಿಜೆಪಿ ಹೊಸ ಕಾನೂನು ತರಬಹುದು ಎಂಬ ಸಂದೇಹವಿದೆ.ಅದರಲ್ಲಿ ಅವರು ಎಲ್ಲಾ ಮುಸ್ಲಿಮೇತರರಿಗೆ ಪೌರತ್ವ ನೀಡಲು ಪ್ರಯತ್ನಿಸಬಹುದು, ಅದು ಮತ್ತೆ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ" ಎಂದು ಅವರು ಹೇಳಿದರು.

ಅಂತಿಮ ಪಟ್ಟಿಯಲ್ಲಿ ಎಷ್ಟೋ ಕಡೆಗಳಲ್ಲಿ ಹೆತ್ತವರ ಹೆಸರುಗಳಿದ್ದು ಮಕ್ಕಳ ಹೆಸರು ಕೈಬಿಟ್ಟು ಹೋಗಿದೆ ಎಂದು ಅಸ್ಸಾಂನ ಅನೇಕ ಜನ ಹೇಳಿದ್ದಾರೆ ಎಂದು ಅವರು ನುಡಿದರು."ಉದಾಹರಣೆಗೆ, ಮೊಹಮ್ಮದ್ ಸನಾವುಲ್ಲಾ, ಅವರು ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಪ್ರಕರಣವು ಹೈಕೋರ್ಟ್‌ನಲ್ಲಿ ಬಾಕಿ ಇದೆ. ಅವರಿಗೆ ನ್ಯಾಯ ಸಿಗುತ್ತದೆ ಎಂದು ನನಗೆ ಖಾತ್ರಿಯಿದೆ" ಎಂದು ಅವರು ಹೇಳಿದರು.

ಅಧಿಕೃತ ಹೇಳಿಕೆಯಲ್ಲಿ, ಅಸ್ಸಾಂ ಎನ್‌ಆರ್‌ಸಿ  ಸಂಯೋಜಕರು, "ಅಂತಿಮ ಎನ್‌ಆರ್‌ಸಿ  ಸೇರ್ಪಡೆಗೊಳ್ಳಲು ಒಟ್ಟು 3,11,21,004 ಜನರು ಅರ್ಹರಾಗಿದ್ದಾರೆ, ಅವರ ಹಕ್ಕುಗಳನ್ನು ಸಲ್ಲಿಸದವರು ಸೇರಿದಂತೆ 19,06,657 ಜನರನ್ನು ಹೊರಗಿಡಲಾಗಿದೆ.ಫಲಿತಾಂಶದಿಂದ ತೃಪ್ತರಾಗದವರು ವಿದೇಶೀ ನ್ಯಾಯಾಲಯಗಳ ಮುಂದೆ  ಮೇಲ್ಮನವಿ ಸಲ್ಲಿಸಬಹುದು" ಎಂದಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com