ಎನ್ ಆರ್ ಸಿ ಅಂತಿಮ ವರದಿ ಬಗ್ಗೆ  ನಂಬಿಕೆ ಇಲ್ಲ- ಅಸ್ಸಾಂ ಬಿಜೆಪಿ

ಅಸ್ಸಾಂ ರಾಷ್ಟ್ರೀಯ ನಾಗರಿಕರ ದಾಖಲಾತಿ(ಎನ್ ಆರ್ ಸಿ) ಅಂತಿಮ ವರದಿ ಬಗ್ಗೆ ನಂಬಿಕೆ ಇಲ್ಲ ಎಂದು ಹೇಳಿರುವ ಅಸ್ಸಾಂ ಬಿಜೆಪಿ, ಕೇಂದ್ರ ಹಾಗೂ ರಾಜ್ಯಸರ್ಕಾರ ರಾಷ್ಟ್ರಾದಾದ್ಯಂತ ಎನ್ ಆರ್ ಸಿ ಪಟ್ಟಿಯನ್ನು ಸಿದ್ದಪಡಿಸುವಂತೆ ಮನವಿ ಮಾಡಿಕೊಂಡಿದೆ.
ಎನ್ ಆರ್ ಸಿ ಸಾಂದರ್ಭಿಕ ಚಿತ್ರ
ಎನ್ ಆರ್ ಸಿ ಸಾಂದರ್ಭಿಕ ಚಿತ್ರ

ಗುವಾಹಟಿ: ಅಸ್ಸಾಂ ರಾಷ್ಟ್ರೀಯ ನಾಗರಿಕರ ದಾಖಲಾತಿ(ಎನ್ ಆರ್ ಸಿ) ಅಂತಿಮ ವರದಿ ಬಗ್ಗೆ ನಂಬಿಕೆ ಇಲ್ಲ ಎಂದು ಹೇಳಿರುವ ಅಸ್ಸಾಂ ಬಿಜೆಪಿ, ಕೇಂದ್ರ ಹಾಗೂ ರಾಜ್ಯಸರ್ಕಾರ ರಾಷ್ಟ್ರಾದಾದ್ಯಂತ ಎನ್ ಆರ್ ಸಿ ಪಟ್ಟಿಯನ್ನು ಸಿದ್ದಪಡಿಸುವಂತೆ ಮನವಿ ಮಾಡಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸ್ಸಾಂ ಬಿಜೆಪಿ ಅಧ್ಯಕ್ಷ ರಂಜಿತ್ ಕುಮಾರ್ ದಾಸ್, ಈ ಎನ್ ಆರ್ ಸಿ ಪಟ್ಟಿ ಮೇಲೆ ನಮ್ಮಗೆ ನಂಬಿಕೆ ಇಲ್ಲ. ನಾವು ಅಸಮಾಧಾನಗೊಂಡಿದ್ದೇವೆ. ರಾಷ್ಟ್ರೀಯ ಮಟ್ಟದಲ್ಲಿ ಎನ್ ಆರ್ ಸಿ ಪಟ್ಟಿ ಸಿದ್ಧಪಡಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸುವುದಾಗಿ ತಿಳಿಸಿದರು.

ಪ್ರಕರಣಗಳ ತೀರ್ಪು ಹಾಗೂ ಹೊರಗಿಟ್ಟ ವ್ಯಕ್ತಿಗಳ ಮೂಲಕ  ವಿದೇಶಿ ನ್ಯಾಯಮಂಡಳಿಗಳಲ್ಲಿ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಯನ್ನು ಪಕ್ಷವು ಸೂಕ್ಷ್ಮವಾಗಿ ಗಮನಿಸುತ್ತದೆ ಎಂದು ದಾಸ್ ಹೇಳಿದರು.

ಇಂದು ಪ್ರಕಟಿಸಲಾಗಿರುವ ಅಂತಿಮ ಎನ್ ಆರ್ ಸಿ ಪಟ್ಟಿಯಿಂದ 19 ಲಕ್ಷದ 06 ಸಾವಿರದ 657 ವ್ಯಕ್ತಿಗಳ ದಾಖಲೆಗಳೇ ಇಲ್ಲ. ಅರ್ಜಿ ಸಲ್ಲಿಸಿದ್ದ 3 ಕೋಟಿ 30 ಲಕ್ಷದ 27 ಸಾವಿರದ 661 ಭಾರತೀಯರ ಪೈಕಿ  3, 30, 27, 661ಅರ್ಜಿದಾರರ ಪೈಕಿ 3 ಕೋಟಿ 11 ಲಕ್ಷದ 21 ಸಾವಿರದ 4 ಮಂದಿ ಭಾರತೀಯ ನಾಗರಿಕತೆಗೆ ಅರ್ಹರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com