ಎನ್ ಆರ್ ಸಿ: ಸಲ್ಲಿಸಿದ ದಾಖಲೆ ಒಂದೇ, ಪರಿಣಾಮ ಮಾತ್ರ ಬೇರೆ: ಅಸ್ಸಾಂ ಸಹೋದರಿಯರ ಕಥೆ!

ಅಸ್ಸಾಂ ನ ಎನ್ ಆರ್ ಸಿಗೆ ಇಬ್ಬರು ಸಹೋದರಿಯರು ಒಂದೇ ದಾಖಲೆ ನೀಡಿದ್ದರೂ ಪಟ್ಟಿಗೆ ಒಬ್ಬರ ಹೆಸರು ಸೇರ್ಪಡೆಯಾಗಿ ಮತ್ತೊಬ್ಬರದ್ದು ಕಾಣೆಯಾಗಿದೆ. 
ಎನ್ ಆರ್ ಸಿ: ಸಲ್ಲಿಸಿದ ದಾಖಲೆ ಒಂದೇ, ಪರಿಣಾಮ ಮಾತ್ರ ಬೇರೆ: ಅಸ್ಸಾಂ ಸಹೋದರಿಯರ ಕಥೆ!
ಎನ್ ಆರ್ ಸಿ: ಸಲ್ಲಿಸಿದ ದಾಖಲೆ ಒಂದೇ, ಪರಿಣಾಮ ಮಾತ್ರ ಬೇರೆ: ಅಸ್ಸಾಂ ಸಹೋದರಿಯರ ಕಥೆ!

ಗುವಾಹಟಿ: ಅಸ್ಸಾಂ ನ ಎನ್ ಆರ್ ಸಿಗೆ ಇಬ್ಬರು ಸಹೋದರಿಯರು ಒಂದೇ ದಾಖಲೆ ನೀಡಿದ್ದರೂ ಪಟ್ಟಿಗೆ ಒಬ್ಬರ ಹೆಸರು ಸೇರ್ಪಡೆಯಾಗಿ ಮತ್ತೊಬ್ಬರದ್ದು ಕಾಣೆಯಾಗಿದೆ. 

ಇದು ಇಬ್ಬರು ಸಹೋದರಿಯರ ಕಥೆಯಲ್ಲ,  ಒಂದೇ ಕುಟುಂಬದ ಕೆಲವರ ಹೆಸರು ಎನ್ ಆರ್ ಸಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೆ, ಮತ್ತೆ ಕೆಲವರ ಹೆಸರು ಕಣ್ಮರೆಯಾಗಿರುವ ನೂರಾರು ಪ್ರಕರಣಗಳು ವರದಿಯಾಗಿವೆ. 
  
ಆ.31 ರಂದು ಮುಕುಲ್ ಬೋಸ್ (51) ಆಕೆಯ ಮಗಳು ಮೌಸುಮಿ ತಮ್ಮ ಹೆಸರು ಎನ್ ಆರ್ ಸಿಯಲ್ಲಿದೆಯೇ ಎಂದು ಪರಿಶೀಲಿಸಿದ್ದಾರೆ. ಪಟ್ಟಿ ಪರಿಶೀಲಿಸಿದ ಮೌಸುಮಿಗೆ ಮುಕುಲ್ ಬೋಸ್ ಹೆಸರಿಲ್ಲದೇ ಇರುವುದು ಕಂಡುಬಂದಿದೆ. 

ಎನ್ ಆರ್ ಸಿ ಫೈಲ್ ಮಾಡಬೇಕಿದ್ದರೆ ಮುಕುಲ್ ಬೋಸ್ ಹಾಗೂ ಆಕೆಯ ಸಹೋದರಿ ಶೆಫಾಲಿ ವೈದ್ಯ ಇಬ್ಬರೂ ತಾವು ಈ ದೇಶದ ನಾಗರಿಕರೇ ಎಂಬುದನ್ನು ಸಾಬೀತುಪಡಿಸಲು ತಮ್ಮ ತಂದೆಗೆ ಸೇರಿದ್ದ ಭೂಮಿಯ ದಾಖಲಾತಿ ನೀಡಿದ್ದರು. ಸಹೋದರಿ ಶೆಫಾಲಿ ವೈದ್ಯ ಅವರ ಹೆಸರು ಎನ್ ಆರ್ ಸಿಯಲ್ಲಿ ಸೇರ್ಪಡೆಯಾಗಿದೆ. ಆದರೆ ಮತ್ತೋರ್ವ ಸಹೋದರಿ ಮುಕುಲ್ ಬೋಸ್ ಅವರ ಹೆಸರು ಮಾತ್ರ ಎನ್ ಆರ್ ಸಿ ಪಟ್ಟಿಯಿಂದ ನಾಪತ್ತೆಯಾಗಿದೆ. 

ಇದು ಅನ್ಯಾಯ, ಒಂದೇ ದಾಖಲೆ ಸಲ್ಲಿಸಿರುವ, ಒಂದೇ ಕುಟುಂಬಕ್ಕೆ ಸೇರಿದ ಇಬ್ಬರಲ್ಲಿ ಒಬ್ಬರ ಹೆಸರು ಮಾತ್ರ ಸೇರ್ಪಡೆಯಾಗುತ್ತದೆ, ಮತ್ತೊಬ್ಬರದ್ದು ಸೇರ್ಪಡೆಯಾಗುವುದಿಲ್ಲ ಎಂದರೆ ಹೇಗೆ ಸಾಧ್ಯ? ಇದನ್ನು ಒಪ್ಪಲು ಸಾಧ್ಯವಿಲ್ಲ, ಕೊನೆಯವರೆಗೂ ಹೋರಾಡುತ್ತೇವೆ ಎಂದು ಮೌಸುಮಿ ಹೇಳಿದ್ದಾರೆ. 

ಎನ್ ಆರ್ ಸಿ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದೇ ಇರುವುದನ್ನು ಕಂಡು ಗಾಬರಿಯಾದ ಮುಕುಲ್ ಬೋಸ್ ಎನ್ ಆರ್ ಸಿ ಸೇವಾ ಕೇಂದ್ರಕ್ಕೂ ಭೇಟಿ ನೀಡಿದ್ದು ಪಟ್ಟಿಯನ್ನು ಪರಿಶೀಲಿಸಿದ್ದಾರೆ. ಆದರೆ ಅಲ್ಲಿಯೂ ಅವರ ಹೆಸರು ಇರಲಿಲ್ಲ.

ಮುಕುಲ್ ಬೋಸ್ ಹಾಗೂ ಶೆಫಾಲಿ ವೈದುಅ ಇಬ್ಬರು ಪಶ್ಚಿಮ ಬಂಗಾಳದ ಬಮುನ್ಪಾರಾದವರು. ವಿವಾಹವಾಗಿ ಅಸ್ಸಾಂ ಸೇರಿದ್ದರು. ಮುಕುಲ್ ಗುವಾಹಟಿಯವರನ್ನು ವಿವಾಹವಾಗಿದ್ದರೆ, ಶೆಫಾಲಿ ವೈದ್ಯ ಅಸ್ಸಾಂ ನ ಬೊಂಗೈಗಾಂವ್ ನವರನ್ನು ವಿವಾಹವಾಗಿದ್ದರು. 

ಎನ್ ಆರ್ ಸಿ ಅಧಿಕಾರಿಗಳು ದಾಖಲೆಗಳ ಮರುಪರಿಶೀಲನೆಗಾಗಿ ಮುಕುಲ್ ಬೋಸ್ ಅವರನ್ನು ಕರೆಸಿದ್ದರು, ಸೂಕ್ತ ದಾಖಲೆಗಳನ್ನು ನೀಡಿದ್ದರ ಹೊರತಾಗಿಯೂ ಈ ಯಡವಟ್ಟು ಸಂಭವಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com