ಜಯಲಲಿತಾ ಆಸ್ತಿಯ ಕೆಲಭಾಗವನ್ನು ಸಾರ್ವಜನಿ ಕಲ್ಯಾಣಕ್ಕೆ ಏಕೆ ಬಳಸಬಾರದು: ಮದ್ರಾಸ್ ಹೈಕೋರ್ಟ್ ಪ್ರಶ್ನೆ

ತಮಿಳುನಾಡು ಮಾಜಿ ಮುಖ್ಯಮಂತ್ರಿ  ಜೆ.ಜಯಲಲಿತಾ ಅವರು ಯಾವಾಗಲೂ ಜನರು ತಮ್ಮನ್ನು ತಮಿಳುನಾಡಿನ ಸಿಎಂ ಮಾಡಿದ್ದಾರೆ ಎಂದು ಹೇಳುತ್ತಿದ್ದರು.ಅಲ್ಲದೆ ತಾನೆಂದಿಗೂ ಅವರಿಗಾಗಿ ಕೆಲಸ ಮಾಡಿದ್ದರು. ಹಾಗಾಗಿ ಅಂತಹಾ ಮಾಜಿ ಸಿಎಂ ಆಸ್ತಿಯ ಕೆಲ ಭಾಗವನ್ನು ಸಾರ್ವಜನಿಕರಿಗಾಗಿ ಏಕೆ ವೆಚ್ಚ ಮಾಡಬಾರದು ಎಂದು ಮದ್ರಾಸ್ ಹೈಕೋರ್ಟ್ ಪ್ರಶ್ನಿಸಿದೆ.
ಜಯಲಲಿತಾ
ಜಯಲಲಿತಾ

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ  ಜೆ.ಜಯಲಲಿತಾ ಅವರು ಯಾವಾಗಲೂ ಜನರು ತಮ್ಮನ್ನು ತಮಿಳುನಾಡಿನ ಸಿಎಂ ಮಾಡಿದ್ದಾರೆ ಎಂದು ಹೇಳುತ್ತಿದ್ದರು.ಅಲ್ಲದೆ ತಾನೆಂದಿಗೂ ಅವರಿಗಾಗಿ ಕೆಲಸ ಮಾಡಿದ್ದರು. ಹಾಗಾಗಿ ಅಂತಹಾ ಮಾಜಿ ಸಿಎಂ ಆಸ್ತಿಯ ಕೆಲ ಭಾಗವನ್ನು ಸಾರ್ವಜನಿಕರಿಗಾಗಿ ಏಕೆ ವೆಚ್ಚ ಮಾಡಬಾರದು ಎಂದು ಮದ್ರಾಸ್ ಹೈಕೋರ್ಟ್ ಪ್ರಶ್ನಿಸಿದೆ.

ಮಾಜಿ ಸಿಎಂ ಅವರ ಆಸ್ತಿಗಳ ಅಧಿಕೃತ ನಿರ್ವಾಹಕರ ನೇಮಕವಾಗಬೇಕೆಂದು ಕೋರಿ ಎಐಎಡಿಎಂಕೆ ಕಾರ್ಯಕರ್ತರು ಕೋರ್ಟ್ ಗೆ ಸಲ್ಲಿಸಿದ್ದ ಮನವಿಯನ್ನು ಆಲಿಸಿದಾಗ ನ್ಯಾಯಮೂರ್ತಿಗಳಾದ ಎನ್ ಕಿರುಬಕಾರನ್ ಮತ್ತು ಅಬ್ದುಲ್ ಖುದೋಸ್ ಅವರ ವಿಭಾಗೀಯ ಪೀಠ ಈ ಮೌಖಿಕ ಹೇಳಿಕೆ ನೀಡಿದೆ.

ನ್ಯಾಯಪೀಠದ ನಿರ್ದೇಶನದಂತೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಜಯಲಲಿತಾ ಅವರ ಸೋದರ ಸೊಸೆ ಜೆ ದೀಪ ಮತ್ತು ಸೋದರಳಿಯ ಜೆ ದೀಪಕ್, ಇದು ಅವರ ಚಿಕ್ಕಮ್ಮನ ಆಶಯವಾದ್ದರಿಂದ ಈ ವಿಚಾರಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿದರು. ಆದರೆ ಜಯಲಲಿತಾ ಅವರ ಏಕೈಕ ಕಾನೂನು ಉತ್ತರಾಧಿಕಾರಿಗಳಾಗಿ, ಅವರು ಜಯಲಲಿತಾ ಅವರ ಆಸ್ತಿಗಳಿಗೆ ಅರ್ಹ ವಾರಸುದಾರರಾಗಿದ್ದಾರೆ ಎಂದು ಅವರುಗಳು ಅಭಿಪ್ರಾಯಪಟ್ಟರು.

ಅವರು ತಾವು ತಮ್ಮ ಚಿಕ್ಕಮ್ಮನ ಸಂಪತ್ತನ್ನು ಸಾರ್ವಜನಿಕರ ಒಳಿತಿಗಾಗಿ ಬಳಸುವ ಭರವಸೆ ನೀಡಿದ್ದಾರೆ.

ಜಯಲಲಿತಾ ಅವರ ಆಸ್ತಿಗಳನ್ನು ನಿರ್ವಹಿಸಲು ನ್ಯಾಯಾಲಯದಿಂದ ಅನುಮತಿ ಪಡೆಯಲು ಇಷ್ಟು ಸಮಯ ಏಕೆಂದು ನ್ಯಾಯಪೀಠ ಕೇಳಿದಾಗ, ಕಾನೂನಾತ್ಮಕವಾಗಿ ತ್ತರಾಧಿಕಾರಿ ಪ್ರಮಾಣಪತ್ರ ಪಡೆಯುವುದು ವಿಳಂಬವಾಯಿತು ಎಂದು  ದೀಪಾ ಹೇಳಿದರು. ಇದೇ ವೇಳೆ ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸಕ್ಕೆ ತಮ್ಮ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಇನ್ನು ದೀಪಾ ವಾದವನ್ನು ಪ್ರತಿರೋಧಿಸಿದ ಪ್ರತಿವಾದಿ ಮುಖ್ಯ ಅರ್ಜಿದಾರ ಪುಗಳೆಂತಿ ಉತ್ತರಾಧಿಕಾರಿ ಇದ್ದರೂ ಸಹ ಮೂರನೇ ವ್ಯಕ್ತಿಯನ್ನು ಆಸ್ತಿಗಳ ಅಧಿಕೃತ ನಿರ್ವಾಹಕರಾಗಿ ನೇಮಿಸುವ ಅಧಿಕಾರ ನ್ಯಾಯಾಲಯಕ್ಕೆ ಇದೆ ಎಂದು ವಾದಿಸಿದರು.

ಇನ್ನು ದೀಪಾ ಹಾಗೂ ಅವರ ಪತಿಗೆ ಪೋಯಸ್ ಗಾರ್ಡನ್ ನಿವಾಸಕ್ಕೆ ಪ್ರವೇಶವನ್ನುಏಕೆ ನಿರಾಕರಿಸಲಾಗಿದೆ ಎಂಬುದನ್ನು ತಿಳಿಸಿ ಎಂದು  ನ್ಯಾಯಪೀಠವು ಸರ್ಕಾರಿ ವಕೀಲರಿಗೆ ನಿರ್ದೇಶನ ನೀಡಿತು ಪ್ರಕರಣದ ತೀರ್ಪು ನಿಡುವ ದಿನಾಂಕವನ್ನು ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com