ಗಂಭೀರ ಭದ್ರತಾ ವೈಫಲ್ಯ; ಪ್ರಿಯಾಂಕಾ ಗಾಂಧಿ ಮನೆಗೆ ನುಗ್ಗಿ ಸೆಲ್ಫಿ ಕೇಳಿದ 7 ಮಂದಿ!

ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್​ಪಿಜಿ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಮನೆಯಲ್ಲಿ ಗಂಭೀರ ಭದ್ರತಾ ವೈಫಲ್ಯ ಸಂಭವಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್​ಪಿಜಿ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಮನೆಯಲ್ಲಿ ಗಂಭೀರ ಭದ್ರತಾ ವೈಫಲ್ಯ ಸಂಭವಿಸಿದೆ.

ಹೌದು.. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಸವಿರುವ ನವದೆಹಲಿಯ ಲೋಧಿ ಎಸ್ಟೇಟ್‌ನಲ್ಲಿರುವ ಮನೆಯಲ್ಲಿ ಭದ್ರತಾ ವೈಫಲ್ಯ ಸಂಭವಿಸಿದ್ದು, ಕಾರಿನಲ್ಲಿ ಮನೆಗೆ ಬಂದ 7 ಮಂದಿ ಅಪರಿಚಿತರು ನೇರವಾಗಿ ಮನೆಯೊಳಗೇ ಬಂದು ಸೆಲ್ಫಿಗಾಗಿ ಮುಗಿಬಿದಿದ್ದಾರೆ. ಮೂಲಗಳ ಪ್ರಕಾರ ಮೂವರು ಗಂಡಸರು, ಮೂವರು ಹೆಂಗಸರು ಹಾಗೂ ಒಬ್ಬಳು ಯುವತಿ ಕಾರಿನಿಂದ ಇಳಿದು ನೇರವಾಗಿ ಪ್ರಿಯಾಂಕ ಗಾಂಧಿ ಮನೆಯೊಳಗೆ ಯಾವುದೇ ಅಡಚಣೆ ಇಲ್ಲದೆ ಹೋಗಿದ್ದಾರೆ. 

ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಜೊತೆ ಸೆಲ್ಫಿಗೆ ಬೇಡಿಕೆ ಇಟ್ಟಿದ್ದಾರೆ. ಮನೆಯೊಳಗೆ ಇವರು ಬರುವಾಗ ಭದ್ರತಾ ಸಿಬ್ಬಂದಿ ಯಾವುದೇ ರೀತಿಯ ತಪಾಸಣೆ ನಡೆಸದೇ ಇರುವುದು ಆತಂಕಕ್ಕೆ ಕಾರಣವಾಗಿದೆ.

ಪ್ರಿ.ಯಾಂಕಾ ಮನೆಗೆ ಭೇಟಿ ನೀಡಿದವರು, ಉತ್ತರ ಪ್ರದೇಶ ಮೂಲದವರು ಎಂದು ತಿಳಿದುಬಂದಿದ್ದು, ಘಟನೆಗೆ ಪ್ರಿಯಾಂಕಾಗಾಂಧಿ ಕೂಡ ಆಶ್ಚರ್ಯವ್ಯಕ್ತಪಡಿಸಿದ್ದಾರೆ. ಬಳಿಕ ಪ್ರಿಯಾಂಕ ಗಾಂಧಿ ಇವರೊಂದಿಗೆ ಮಾತುಕತೆ ನಡೆಸಿ ಸೆಲ್ಫಿ ಕ್ಕಿಕ್ಕಿಸಿಕೊಂಡು ಕಳುಹಿಸಿಕೊಟ್ಟಿದ್ದಾರೆ. ಈ ಘಟನೆ ನಡೆದ ಬಳಿಕ ಪ್ರಿಯಾಂಕ ಅವರ ಭದ್ರತಾ ಸಿಬ್ಬಂದಿ ಎಚ್ಚೆತ್ತಿದ್ದು, ನಿವಾಸಕ್ಕೆ ಪ್ರವೇಶ ಕಲ್ಪಿಸುವ ಎಲ್ಲಾ ದ್ವಾರಗಳನ್ನು ಮುಚ್ಚಲಾಗಿದೆ.

ಇತ್ತೀಚೆಗಷ್ಟೇ ಗಾಂಧಿ ಕುಟುಂಬಕ್ಕೆ ನೀಡಲಾಗಿದ್ದ ಎಸ್‌ಪಿಜಿ ಭದ್ರತೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿ ಝಡ್‌ ಪ್ಲಸ್‌ ಮಾದರಿಯ ಭದ್ರತೆ ನೀಡಿತ್ತು. ಈ ಭದ್ರತಾ ಕಾರ್ಯವನ್ನು ಸಿಆರ್‌ಪಿಎಫ್‌ ನಿರ್ವಹಿಸುತ್ತಿದೆ. ಎಸ್​ಪಿಜಿ ಭದ್ರತೆ ವಾಪಸ್​​ ಪಡೆಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com