ಕರ್ತಾರ್ ಪುರಕ್ಕೆ ತೆರಳಿದ್ದ ಭಾರತೀಯ ಸಿಖ್ ಯುವತಿ ಪಾಕಿಸ್ತಾನದಲ್ಲಿ ನಾಪತ್ತೆ! 

ಗುರುದ್ವಾರ ದರ್ಬಾರ್ ಸಾಹಿಬ್ ದರ್ಶನಕ್ಕಾಗಿ ಪಾಕಿಸ್ತಾನದಲ್ಲಿರುವ ಕರ್ತಾರ್ ಪುರಕ್ಕೆ ಭೇಟಿ ನೀಡಿದ್ದ ಸಿಖ್ ಯುವತಿ ನಾಪತ್ತೆಯಾಗಿದ್ದಾಳೆ. 
ಕರ್ತಾರ್ ಪುರಕ್ಕೆ ತೆರಳಿದ್ದ ಭಾರತೀಯ ಸಿಖ್ ಯುವತಿ ಪಾಕಿಸ್ತಾನದಲ್ಲಿ ನಾಪತ್ತೆ!
ಕರ್ತಾರ್ ಪುರಕ್ಕೆ ತೆರಳಿದ್ದ ಭಾರತೀಯ ಸಿಖ್ ಯುವತಿ ಪಾಕಿಸ್ತಾನದಲ್ಲಿ ನಾಪತ್ತೆ!

ಲಾಹೋರ್: ಗುರುದ್ವಾರ ದರ್ಬಾರ್ ಸಾಹಿಬ್ ದರ್ಶನಕ್ಕಾಗಿ ಪಾಕಿಸ್ತಾನದಲ್ಲಿರುವ ಕರ್ತಾರ್ ಪುರಕ್ಕೆ ಭೇಟಿ ನೀಡಿದ್ದ ಸಿಖ್ ಯುವತಿ ನಾಪತ್ತೆಯಾಗಿದ್ದಾಳೆ. 

ಏಷ್ಯನ್ ನ್ಯೂಸ್ ಇಂಟರ್ ನ್ಯಾಷನಲ್ (ಎಎನ್ಐ) ವರದಿಯ ಪ್ರಕಾರ ಗುರುದ್ವಾರಕ್ಕೆ ತೆರಳಿದ್ದ ಜಾಥದ ಭಾಗವಾಗಿದ್ದಳು ಈ ಯುವತಿ. ಈ ನಡುವೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಪಾಕಿಸ್ತಾನದ ಪೊಲೀಸ್ ಆಡಳಿತ ಲಾಹೋರ್ ಮತ್ತು ಫೈಸಲಾಬಾದ್ ನಗರಗಳಿಂದ ನಾಲ್ವರು ವ್ಯಕ್ತಿಗಳನ್ನು ಬಂಧಿಸಿದೆ. 

ಭಾರತ-ಪಾಕ್ ನಡುವೆ ಕರ್ತಾರ್ ಪುರ ಕಾರಿಡಾರ್ ಉದ್ಘಾಟನೆಯಾದ ಒಂದು ತಿಂಗಳಲ್ಲೇ ಈ ಘಟನೆ ನಡೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com