ಆರ್ಥಿಕತೆ ಬಗ್ಗೆ ಸುಳಿವಿಲ್ಲ, ತಪ್ಪು ಮುಂದುವರೆಸಿ ಮೊಂಡುತನ ಪ್ರದರ್ಶಿಸುತ್ತಿದೆ ಮೋದಿ ಸರ್ಕಾರ: ಚಿದಂಬರಂ

ದೇಶದ ಆರ್ಥಿಕತೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸುಳಿವಿಲ್ಲ. ಹೀಗಾಗಿ ತನ್ನ ತಪ್ಪುವನ್ನು ಮುಂದುವರೆಸಿಕೊಂಡು ಮೊಂಡುತನ ಪ್ರದರ್ಶಿಸುತ್ತಿದೆ ಎಂದು ಕೇಂದ್ರದ ಆಡಳಿತಾರೂಢ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರು ವಾಗ್ದಾಳಿ ನಡೆಸಿದ್ದಾರೆ.
ಚಿದಂಬರಂ
ಚಿದಂಬರಂ

ನವದೆಹಲಿ: ದೇಶದ ಆರ್ಥಿಕತೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸುಳಿವಿಲ್ಲ. ಹೀಗಾಗಿ ತನ್ನ ತಪ್ಪುವನ್ನು ಮುಂದುವರೆಸಿಕೊಂಡು ಮೊಂಡುತನ ಪ್ರದರ್ಶಿಸುತ್ತಿದೆ ಎಂದು ಕೇಂದ್ರದ ಆಡಳಿತಾರೂಢ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರು ವಾಗ್ದಾಳಿ ನಡೆಸಿದ್ದಾರೆ. 

ಐಎನ್ಎಕ್ಸ್ ಮೀಡಿಯಾ ಹಗರಣ ಪ್ರಕರಣಕ್ಕೆ ಸಂಬಂಧಿಸಿಂದಂತೆ ಜಾಮೀನಿನ ಮೇರೆಗೆ ಹೊರ ಬಂದಿರುವ ಚಿದಂಬರಂ ಅವರು, ಇದೇ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. 

ಹಣಕಾಸು ವರ್ಷಕ್ಕೆ 7 ತಿಂಗಳಾದ ನಂತರವೂ,ಆರ್ಥಿಕತೆ ಎದುರಿಸುತ್ತಿರುವ ಸಮಸ್ಯೆಗಳು ಆವರ್ತಕವೆಂದೇ ಬಿಜೆಪಿ ಸರ್ಕಾರ ನಂಬುತ್ತಿದೆ. ಸರ್ಕಾರ ತಪ್ಪು ಹಾದಿಯಲ್ಲಿ ನಡೆಯುತ್ತಿದೆ. ಖಂಡಿತವಾಗಿಯೂ ತಪ್ಪು ಮಾಡುತ್ತಿದೆ. ಸುಳುವುಗಳಿಲ್ಲದೆಯೇ ತಪ್ಪನ್ನು ಮುಂದುವರೆಸುತ್ತಿದೆ. ನೋಟು ನಿಷೇಧ, ಜಿಎಸ್'ಟಿ, ತೆರಿಗೆ ಭಯೋತ್ಪಾದನೆ, ಪ್ರಧಾನಮಂತ್ರಿ ಕಚೇರಿಯ ಕೇಂದ್ರೀಕೃತ ನಿಯಂತ್ರಣ ಮುಂತಾದ ತನ್ನ ದುರಂತ ತಪ್ಪುಗಳನ್ನು ಸಮರ್ಥಿಸಿಕೊಳ್ಳು ವಲ್ಲಿ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದ್ದು, ಇದರಿಂದ ಪದೇ ಪದೇ ತನ್ನ ತಪ್ಪನ್ನು ಮುಂದುವರೆಸುತ್ತಿದೆ. ಪ್ರಸಕ್ತ ಸಾಲಿನಲ್ಲಿ ಜಿಡಿಪಿ ಶೇ.5ರಷ್ಟು ತಲುಪಿದರೂ ನಾವು ಅದೃಷ್ಟವಂತರೇ. ದೇಶದ ಆರ್ಥಿಕತೆ ಸಂಕಷ್ಟದಲ್ಲಿದ್ದರೂ ಪ್ರಧಾನಮಂತ್ರಿಗಳು ಮಾತ್ರ ಮೌನವಾಗಿದ್ದಾರೆ. ದೇಶದ ಆರ್ಥಿಕೆ ಸಂಕಷ್ಟದಲ್ಲಿದ್ದರೂ ಈ ವಿಚಾರವನ್ನು ತನ್ನ ಒರಟು ಹಾಗೂ ದಬಾಯಿಸುವ ಸಚಿವರ ಹೆಗಲಿಗೆ ವಹಿಸಿದ್ದಾರೆ. ದೇಶದ ಆರ್ಥಿಕತೆ ಸರಿಪಡಿಸುವಲ್ಲಿ ಕೇಂದ್ರ ಸರ್ಕಾರ ಅಸಾಮರ್ಥ್ಯವಾಗಿದೆ ಎಂದು ಹೇಳಿದ್ದಾರೆ. 

ದಾಖಲೆಗಳಿಂದಾಗಲೀ, ಆತ್ಮಸಾಕ್ಷಿಯಿಂದಾಗಲೀ ನಾನು ಶುದ್ಧವಾಗಿದ್ದೇನೆ. ನನ್ನೊಂದಿಗೆ ಕೆಲಸ ಮಾಡಿದ ಅಧಿಕಾರಿಗಳು, ನನ್ನೊಂದಿಗೆ ಮಾತನಾಡಿದ ಉದ್ಯಮಿಗಳು, ಪತ್ರಕರ್ತರಿಗೆ ನಾನು ಏನು ಎಂಬುದು ತಿಳಿದಿದೆ. 

ಕಳೆದ ರಾತ್ರಿ ಜೈಲಿನಿಂದ ಬಂದ ಬಳಿಕ ಸ್ವತಂತ್ರವಾಗಿ ಉಸಿರಾಡಲು ಆರಂಭಿಸಿದ್ದ. ಈ ವೇಳೆ ನನ್ನು ತಲೆಗೆ ಬಂದ ಮೊದಲ ಆಲೋಚನೆ ಕಾಶ್ಮೀರ, ಕಾಶ್ಮೀರಿಗರ ಸ್ವಾತಂತ್ರ್ಯ. 2019ರ ಆಗಸ್ಟ್ 4 ರಿಂದಲೂ ಸಾಮಾನ್ಯ ಸ್ವಾತಂತ್ರ್ಯಕ್ಕಾಗಿ ಕಾಶ್ಮೀರ ಜನತೆ ಹೋರಾಡುತ್ತಲೇ ಇದ್ದಾರೆ. 75 ಲಕ್ಷ ಕಾಶ್ಮೀರ ಜನತೆಗೆ ಮೂಲ ಸ್ವಾತಂತ್ರ್ಯವನ್ನು ನಿರಾಕರಿಸಲಾಗಿದೆ.

ಯಾವುದೇ ಆರೋಪಗಳಿಲ್ಲದೆ. ರಾಜಕೀಯ ನಾಯಕರನ್ನು ಕಾಶ್ಮೀರದಲ್ಲಿ ಬಂಧನಕ್ಕೊಳಪಡಿಸಲಾಗಿದೆ. ಸ್ವಾತಂತ್ರ್ಯವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕಾದರೆ, ಮೊದಲೂ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕು ಎಂದು ತಿಳಿಸಿದ್ದಾರೆ. ಇದೇ ವೇಳೆ ಮಹಿಳೆಯರ ಅತ್ಯಾಚಾರ ಹಾಗೂ ಹಲ್ಲೆ ಪ್ರಕರಣ ಸಂಬಂಧಿಸಿದ ಪ್ರಶ್ನೆಗೆ ಚಿದಂಬರಂ ಅವರು ಭಾವುಕರಾದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com