ಪತ್ನಿಯನ್ನು ಹತ್ಯೆ ಮಾಡಿ ಹಾವು ಕಚ್ಚಿದ ಕಥೆ ಹೆಣೆದ ಕಿರಾತಕ: ಸ್ಪೂರ್ತಿ ಯಾರೆಂದು ಕೇಳಿದರೆ ಬೆಚ್ಚಿ ಬೀಳುತ್ತೀರ! 

ಪತ್ನಿಯನ್ನು ಹತ್ಯೆ ಮಾಡಿದ ಮಾಜಿ ಬ್ಯಾಂಕ್ ಮ್ಯಾನೇಜರ್ ಹಾವು ಕಚ್ಚಿದ್ದರಿಂದ ಈ ಸಾವು ಸಂಭವಿಸಿದೆ ಎಂಬ ಕಥೆ ಕಟ್ಟಿದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. 

Published: 05th December 2019 09:23 AM  |   Last Updated: 05th December 2019 09:25 AM   |  A+A-


Indore man murders wife, attempts to pass it off as snake-bite accident

ಪತ್ನಿಯನ್ನು ಹತ್ಯೆ ಮಾಡಿ ಹಾವು ಕಚ್ಚಿದ ಕಥೆ ಹೆಣೆದ ಕಿರಾತಕ: ಸ್ಪೂರ್ತಿ ಯಾರೆಂದು ಕೇಳಿದರೆ ಬೆಚ್ಚಿ ಬೀಳುತ್ತೀರ!

Posted By : Srinivas Rao BV
Source : PTI

ಇಂದೋರ್: ಪತ್ನಿಯನ್ನು ಹತ್ಯೆ ಮಾಡಿದ ಮಾಜಿ ಬ್ಯಾಂಕ್ ಮ್ಯಾನೇಜರ್ ಹಾವು ಕಚ್ಚಿದ್ದರಿಂದ ಈ ಸಾವು ಸಂಭವಿಸಿದೆ ಎಂಬ ಕಥೆ ಕಟ್ಟಿದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. 

ಪೊಲೀಸರು ಹತ್ಯೆಯ ಪ್ರಮುಖ ಆರೋಪಿ 36 ವರ್ಷದ ಮಾಜಿ ಬ್ಯಾಂಕ್ ಮ್ಯಾನೇಜರ್ ಅಮಿತೇಶ್ ನ್ನು ಬಂಧಿಸಿದ್ದಾರೆ. ಡಿ.1 ರಂದು ಈ ದಂಪತಿಗಳ ನಡುವೆ ಜಗಳ ನಡೆದಿದ್ದು ಈ ವ್ಯಕ್ತಿ ಇತರ ಕುಟುಂಬ ಸದಸ್ಯರ ಸಹಾಯದಿಂದ ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಆ ನಂತರ ಉಪಾಯದಿಂದ ಹಾವು ಕಚ್ಚಿರುವಂತೆ ಮೈಮೇಲೆ ಗುರುತು ಮಾಡಿ, ಇದರಿಂದಲೇ ಈಕೆ ಸಾವನ್ನಪ್ಪಿದ್ದಾಳೆ ಎಂದು ಕಥೆ ಕಟ್ಟಿದ್ದಾನೆ!. 

ಹತ್ಯೆ ಮಾಡಿ ಹಾವು ಕಚ್ಚಿದ ಕಥೆ ಹೆಣೆಯುವುದಕ್ಕೆ  ವ್ಯಕ್ತಿಗೆ ಟಿವಿ ಧಾರಾವಾಹಿಗಳೇ ಸ್ಪೂರ್ತಿಯಂತೆ. ಹತ್ಯೆಯ ಆರೋಪದ ಮೇಲೆ ಅಮಿತೇಶ್ ಜೊತೆಗೆ ಆತನಿಗೆ ಕುಮ್ಮಕ್ಕು ನೀಡಿದ್ದ ಸಹೋದರಿ, ತಂದೆಯನ್ನೂ ಬಂಧಿಸಲಾಗಿದೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp