ನೀವು ವಿತ್ತ ಸಚಿವೆ, ಈರುಳ್ಳಿ ತಿನ್ನುತ್ತೀರಾ ಎಂದಾರೂ ನಿಮ್ಮನ್ನು ಕೇಳಲ್ಲ: ಕೇಂದ್ರ ಸಚಿವೆಯ ವಿರುದ್ಧ ರಾಹುಲ್ ವಾಗ್ದಾಳಿ

ಪ್ರಧಾನಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತಮ್ಮದೇ ಆದ ಕಲ್ಪನೆಯಲ್ಲಿ ಬದುಕುತ್ತಿದ್ದಾರೆ. ಅವರಿಗೆ ಹೊರ ಪ್ರಪಂಚದ ಯಾವುದೇ ಅರಿವಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.  ಗುರುವಾರ ಕೇಂದ್ರ ಆರ್ಥಿಕ ನೀತಿಗಳ ಕುರಿತು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ ರಾಹುಲ್ ಪ್ರಧಾನಿ, ಗೃಹ ಸಚಿವರು, ವಿತ್ತ ಸಚಿವೆಯ ಕಾರ್ಯವೈಖ
ವಯನಾಡ್ ನಲ್ಲಿ ರಾಹುಲ್ ಗಾಂಧಿ
ವಯನಾಡ್ ನಲ್ಲಿ ರಾಹುಲ್ ಗಾಂಧಿ

ವಯನಾಡ್(ಕೇರಳ): ಪ್ರಧಾನಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತಮ್ಮದೇ ಆದ ಕಲ್ಪನೆಯಲ್ಲಿ ಬದುಕುತ್ತಿದ್ದಾರೆ. ಅವರಿಗೆ ಹೊರ ಪ್ರಪಂಚದ ಯಾವುದೇ ಅರಿವಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.  ಗುರುವಾರ ಕೇಂದ್ರ ಆರ್ಥಿಕ ನೀತಿಗಳ ಕುರಿತು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ ರಾಹುಲ್ ಪ್ರಧಾನಿ, ಗೃಹ ಸಚಿವರು, ವಿತ್ತ ಸಚಿವೆಯ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ.

ದೇಶ ತೊಂದರೆಯಲ್ಲಿದೆ,  ನರೇಂದ್ರ ಮೋದಿ, ಅಮಿತ್ ಶಾ ಕಾಲ್ಪನಿಕ ಜಗತ್ತಿನಲ್ಲಿ ವಾಸಿಸುತ್ತಿದ್ದಾರೆ- ಕೇರಳದ ವಯನಾಡ್ ಗೆ ಭೇಟಿ ನೀಡಿದ್ದ ರಾಹುಲ್ ಹೇಳಿದರು.

ಉತ್ತರ ಕೇರಳದ ಲೋಕಸಭಾ ಕ್ಷೇತ್ರ ವಯನಾಡ್ ಗೆ ರಾಹುಲ್ ಮೂರು ದಿನಗಳ ಭೇಟಿಗಾಗಿ ಇಂದು ಆಗಮಿಸಿದರು.  ಮೋದಿ ಅವರು ಸೃಷ್ಟಿಸಿರುವ "ಕಾಲ್ಪನಿಕ ಜಗತ್ತು" ಕುಸಿಯುತ್ತಿರುವುದರಿಂದ ದೇಶ ತೊಂದರೆಯಲ್ಲಿದೆ. ದೇಶದಲ್ಲಿ ಯಾವುದೇ ಆರ್ಥಿಕ ಬಿಕ್ಕಟ್ಟು ಇಲ್ಲ ಎಂಬ ಸರ್ಕಾರದ ಹೇಳಿಕೆಯನ್ನು ಉಲ್ಲೇಖಿಸಿದ ರಾಹುಲ್ "ಅಮಿತ್ ಶಾ ಮತ್ತು ನರೇಂದ್ರ ಮೋದಿ ತಮ್ಮದೇ ಆದ ಕಲ್ಪನಾ ಜಗತ್ತಿನಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂಪರ್ಕವಿಲ್ಲ. ಇದರಿಂದಾಗಿ  ಅವರು ವಾಸ್ತವ ಜಗತ್ತಿನಲ್ಲಿ ಅತಿರೇಕದ ಬಗೆಯಲ್ಲಿ ವರ್ತಿಸುತ್ತಿದ್ದಾರೆ. ಹಾಗಾಗಿ ಇಂದು ದೇಶ ತೊಂದರೆಗೆ ಸಿಕ್ಕಿದೆ.

"ವಾಸ್ತವವಾಗಿ, ಮೋದಿ ದೇಶದ ಜನರ ದನಿಗೆ ಕಿವಿಗೊಟ್ಟರೆ ಯಾವುದೇ ಸಮಸ್ಯೆ ಇರುವುದಿಲ್ಲ" ಎಂದು ಅವರು ಹೇಳಿದರು. ಮೋದಿಯವರ ಆಡಳಿತ ಶೈಲಿಯು ಜನರ ಗಮನವನ್ನು ವಾಸ್ತವದಿಂದ ದೂರವಿಡುವುದಾಗಿದೆ ಎಂದ ರಾಹುಲ್ "ಮೋದಿಯವರು ತಮ್ಮಂತೆಯೇ ದೇಶವೂ ಸಹ ಕಾಲ್ಪನಿಕ ಜಗತ್ತಿನಲ್ಲೇ ಬದುಕಬೇಕೆಂದು ಬಯಸುತ್ತಿದ್ದಾರೆ. ಆದರೆ ಇದೀಗ ಅವರ ಕಾಲ್ಪನಿಕ ಜಗತ್ತು ಕುಸಿಯುತ್ತಿದೆ. ಹೀಗಾಗಿ ಅವರು ತೊಂದರೆಗೆ ಸಿಕ್ಕಿದ್ದಾರೆ" ಎಂದು ಆರೋಪಿಸಿದರು.

ಇನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ ಆಕೆಯೊಬ್ಬ  'ಅಸಮರ್ಥಳು” ಅವರಿಗೆ ತಮ್ಮ ಸುತ್ತ ಮುತ್ತ ಏನು ನಡೆಯುತ್ತಿದೆ ಎಂದು ತಿಳಿದಿಲ್ಲ ಮತ್ತು ಆಕೆಯು ತಾನು ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ತಿನ್ನುವುದಿಲ್ಲ ಎಂದು ಹೇಳುವ ಮುಖೇನ ದುರಹಂಕಾರದ ವರ್ತನೆ ತೋರಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕೇಂದ್ರ ಸಚಿವರಾದವರು ಏನನ್ನು ತಿನ್ನುತ್ತಾರೆ, ಏನನ್ನು ತಿನ್ನುವುದಿಲ್ಲ ಎಂಬುದು ಜನರಿಗೆ ಮುಖ್ಯವಲ್ಲ. ಜನತೆ ಆರ್ಥಿಕತೆ ಏಕೆ ಸಂಕಷ್ಟದಲ್ಲಿದೆ ಎನ್ನುವುದನ್ನು ತಿಳಿಯಲು ಬಯಸಿದ್ದಾರೆ ಎಂದರು. "'ನೀವು ಈರುಳ್ಳಿ ತಿನ್ನುತ್ತೀರಾ ಎಂದು ಯಾರೂ ನಿಮ್ಮನ್ನು ಕೇಳುತ್ತಿಲ್ಲ. ನೀವು ವಿತ್ತ ಸಚಿವರಾಗಿದ್ದೀರಿ, ಆರ್ಥಿಕತೆ ಏಕೆ ಹೆಣಗಾಡುತ್ತಿದೆ ಎಂದು ನಾವು ಕೇಳುತ್ತಿದ್ದೇವೆ. ಇನ್ನು ಈ ಪ್ರಶ್ನೆಗೆ ಒಬ್ಬ ಬಡ ವ್ಯಕ್ತಿಯನ್ನು ಕೇಳಿದರೂ ನಿಮಗೆ ಸರಿಯಾದ ಪ್ರತಿಕ್ರಿಯೆ ಸಿಗುತ್ತದೆ 'ಎಂದು ಗಾಂಧಿ ನುಡಿದರು. 

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ನಿರಾಶ್ರಿತರಿಗೆ ಪೌರತ್ವ ನೀಡುವ ಉದ್ದೇಶದಿಂದ ರೂಪಿತವಾಗಿರುವ ವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆಯನ್ನು ತಮ್ಮ ಪಕ್ಷ ವಿರೋಧಿಸಲಿದೆ ಎಂದು ರಾಹುಲ್ ಸ್ಪಷ್ಟಪಡಿಸಿದರು. 

ಇನ್ನು ರಾಹುಲ್ ಗಾಂಧಿ  ತಮ್ಮ ವಿರುದ್ಧ ಬಿಜೆಪಿಯಿಂದ ದಾಖಲಾಗಿರುವ ಪ್ರಕರಣಗಳ ಬಗೆಗೆ ತಾನು ಹೆಚ್ಚು ಗಮನ ಹರಿಸಲಾರೆ ಎಂದೊದ್ದಾರೆ. "ತಮ್ಮ ವಿರುದ್ಧ ಬಿಜೆಪಿಯಿಂದ ದಾಖಲಾಗಿರುವ ಪ್ರಕರಣಗಳ ಸರಮಾಲೆಯಿಂದ ನಾನು ತತ್ತರಿಸುವುದಿಲ್ಲ,  ಅವುಗಳನ್ನು 'ಪದಕ'ಗಳೆಂದು ಪರಿಗಣಿಸುತ್ತೇನೆ. 'ನನ್ನ ವಿರುದ್ಧ 15 ರಿಂದ 16 ಪ್ರಕರಣಗಳಿವೆ. ನೀವು ಸೈನಿಕನನ್ನು ನೋಡಿದಾಗ, ಅವನ ಎದೆಯ ಮೇಲೆ ಸಾಕಷ್ಟು ಪದಕಗಳನ್ನು  ಕಾಣುತ್ತೀರಲ್ಲ ಹಾಗೆಂದು ನಾನಿದನ್ನು ಭಾವಿಸುತ್ತೇನೆ" ರಾಹುಲ್ ಹೇಳೀದ್ದಾರೆ. ಪ್ರತಿಯೊಂದು ಪ್ರಕರಣವೂ ನನಗೆ ಪದಕವಾಗಿದೆ  ಮತ್ತು ಅವರಿಗಿಂತ ಹೆಚ್ಚು ನಾನಿಂದು ಸಂತೋಷವಾಗಿದ್ದೇನೆ. ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com