ಬ್ಯಾಂಕಿಂಗ್ ವಲಯ ಹಿಂದೆಂದಿಗಿಂತಲೂ ಈಗ ಬಲಿಷ್ಠವಾಗಿದೆ: ಪಿಎಂ ನರೇಂದ್ರ ಮೋದಿ 

ಪ್ರಧಾನ ಮಂತ್ರಿ ನರೇಂದ್ರ ಮೋದಿ ದೆಹಲಿಯಲ್ಲಿ ಶುಕ್ರವಾರ ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗಸಭೆ(ಹೆಚ್ ಟಿಎಲ್ ಎಸ್)ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ದೆಹಲಿಯಲ್ಲಿ ಶುಕ್ರವಾರ ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗಸಭೆ(ಹೆಚ್ ಟಿಎಲ್ ಎಸ್)ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. 


ಪ್ರಧಾನಿ ಭಾಷಣದ ಮುಖ್ಯಾಂಶಗಳು ಹೀಗಿವೆ:
-ಕಾರ್ಪೊರೇಟ್ ಸಂಸ್ಕೃತಿಯಲ್ಲಿ ಸಾಕಷ್ಟು ಉತ್ತಮ ವಿಷಯಗಳಿವೆ. 
-ನಾವು ಸವಲತ್ತುಗಳಿಗಿಂತ ವೃತ್ತಿಪರತೆಯನ್ನು ಹೆಚ್ಚು ಪ್ರಚುರಪಡಿಸುತ್ತೇವೆ ಎಂದು ನಾಗರಿಕ ಸೇವಕರ ಬಗ್ಗೆ ಮಾತನಾಡಿದರು.
-ಕಾನೂನು ಮತ್ತು ಸುವ್ಯವಸ್ಥೆ ರಾಜ್ಯ ವಿಷಯವಾಗಿದ್ದರೂ, ಭದ್ರತಾ ದೃಷ್ಟಿಕೋನದಿಂದ ರಾಜ್ಯಗಳ ನಡುವೆ ಪರಸ್ಪರ ಸಂಬಂಧ ಮುಖ್ಯವಾಗಿದೆ.
-100 ಲಕ್ಷ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ತರಲಿರುವ ಕೇಂದ್ರ ಸರ್ಕಾರ
-ನಾಗರಿಕರ ಮೇಲೆ ಸರ್ಕಾರದ ಕಡೆಯಿಂದ ಯಾವುದೇ ಒತ್ತಡಗಳಿಲ್ಲ.
ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಬಡಬಗ್ಗರಿಗೆ ಸಾಕಷ್ಟು ಅನುಕೂಲವಾಗುತ್ತದೆ.
ತಮ್ಮ ಸರ್ಕಾರ ಬ್ಯಾಂಕುಗಳ ವಿಲೀಕರಣ ಮಾಡಿ ಮರುಬಂಡವಾಳೀಕರಣಕ್ಕೆ ಸಹಾಯ ಮಾಡಿದೆ. ಬ್ಯಾಂಕಿಂಗ್ ವಲಯ ಹಿಂದೆಂದಿಗಿಂತಲೂ ಈಗ ಬಲಿಷ್ಠವಾಗಿದೆ.
-ಬ್ಯಾಂಕುಗಳ ವ್ಯಾಪಾರ ನಿರ್ಧಾರಗಳನ್ನು ಸರ್ಕಾರ ಪ್ರಶ್ನಿಸುವುದಿಲ್ಲ. ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದ ಏನೇ ಸಮಸ್ಯೆಗಳಿದ್ದರೂ ಸರ್ಕಾರ ಬಗೆಹರಿಸುತ್ತದೆ.
-ಹಿಂದಿನ ಸರ್ಕಾರಗಳು ಮಾಡಿದಂತೆ ನನಗೂ ಮಾಡಬಹುದಾಗಿತ್ತು, ಆದರೆ ಅಂತಹ ಕೆಲಸ ನಾನು ಮಾಡಿಲ್ಲ.
-ಕಾರ್ಪೊರೇಟ್ ತೆರಿಗೆ ಕಡಿತದಿಂದ ಹೂಡಿಕೆ, ಉತ್ಪಾದನೆ ಹೆಚ್ಚಾಗಲಿದೆ-ಪಿಎಂ ನರೇಂದ್ರ ಮೋದಿ
-ಭಾರತವನ್ನು ಮುಂದಿನ ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕ ರಾಷ್ಟ್ರವನ್ನಾಗಿಸಲು ಸರ್ಕಾರ ಸಕ್ರಿಯವಾಗಿ ಕೆಲಸ ಮಾಡುತ್ತದೆ.
-ಸಾಧನೆ ಮತ್ತು ಕೆಲಸಗಳ ಮೂಲಕ ನಾವು ಮುನ್ನುಗ್ಗುತ್ತಿದ್ದೇವೆ.
-15 ಕೋಟಿ ಮನೆಗಳಿಗೆ ಪೈಪ್ ಮೂಲಕ ನೀರಿನ ಸಂಪರ್ಕ
-ಜಲಜೀವನ ಮಿಷನ್ ಆರಂಭ
-112 ಜಿಲ್ಲೆಗಳು ಸುಧಾರಣೆ ಕಾಣುತ್ತಿರುವ ಸಂದರ್ಭದಲ್ಲಿ ಭಾರತದ ಭವಿಷ್ಯ ಸಹಜವಾಗಿ ಬದಲಾಗುತ್ತದೆ.
-ಹಿಂದಿನ ಸರ್ಕಾರಗಳು ಹಿಂದುಳಿದ ಜಿಲ್ಲೆಗಳನ್ನು ಹಾಗೆಯೇ ಸುಧಾರಿಸದೆ ಉಳಿಸಿಕೊಂಡಿವೆ.
-ಸಬ್ ಕಾ ಸಾತ್, ಸಬ್ ಕಾ ವಿಕಾಸ್ ನಮ್ಮ ಸರ್ಕಾರದ ಮಂತ್ರವಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಸಂವಿಧಾನ ವಿಧಿ 370 ರದ್ದು ಮಾಡಿರುವುದರಿಂದ ಉತ್ತಮ ಭವಿಷ್ಯಕ್ಕೆ ವರದಾನವಾಗಿದೆ.
-ರಾಮಜನ್ಮಭೂಮಿ ವಿವಾದ ಬಗೆಹರಿದಿರುವುದರಿಂದ ಭಾರತದ ಭವಿಷ್ಯತ್ತಿಗೆ ಒಳ್ಳೆಯದಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com